35 ಕಿ.ಮೀ. ದೂರ ನಡೆದು ಲಿಂಗಾಭಿಷೇಕಕ್ಕೆ ಗಂಗೆ ಹೊತ್ತು ತಂದ ಹೆಗ್ಗೋಠಾರ ಗ್ರಾಮಸ್ಥರು
ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಐದು ಮಂದಿ ಪ್ರತಿವರ್ಷ ಶಿವರಾತ್ರಿ ದಿನದಂದು ಬರೋಬ್ಬರಿ 35 ಕಿ.ಮೀ. ದೂರದ ನದಿಗೆ ಬರಿಗಾಲಲ್ಲಿ ತೆರಳಿ ಗಂಗೆ ಹೊತ್ತು ತಂದು ಲಿಂಗಾಭೀಷೇಕ ನಡೆಸುತ್ತಾರೆ. ಅದೇ ಗಂಗೆ ಗ್ರಾಮದ ಪ್ರತಿ ಮನೆಗೂ ತೀರ್ಥ ರೂಪದಲ್ಲಿ ಹಂಚಿಕೆಯಾಗುತ್ತದೆ.
ಗ್ರಾಮದ ಸಿದ್ದರಾಮೇಶ್ವರನಿಗೆ ಕಪಿಲಾ ಜಲದಿಂದ ಅಭಿಷೇಕ ಮಾಡುವ ವಿಶಿಷ್ಟ ಸಂಪ್ರದಾಯ ಹಲವು ತಲೆಮಾರುಗಳಿಂದ 5 ವಂಶಸ್ಥರಲ್ಲಿ ನಡೆದುಕೊಂಡು ಬರುತ್ತಿದೆ.
ಗ್ರಾಮದ 5 ಕುಟುಂಬಗಳಿಂದ ಸುಮಾರು 35 ಕಿ.ಮೀ. ದೂರದ ನಂಜನಗೂಡು ತಾಲೂಕಿನ ತಗಡೂರು ಬಳಿಯ ಕಪಿಲಾ ನದಿ ದಡಕ್ಕೆ ತೆರಳಿ ಕಪಿಲೆಗೆ ಪೂಜೆ ಸಲ್ಲಿಸಿ, ಬಿಂದಿಗೆಗೆ ಕಪಿಲಾ ಜಲವನ್ನು ತುಂಬಿಸಿಕೊಂಡು ಕಾಲ್ನಡಿಗೆ ಮೂಲಕ ಗ್ರಾಮ ಸೇರುತ್ತಾರೆ.
4 ಬಿಂದಿಗೆಗಳ ನೀರು ಸಿದ್ಧರಾಮೇಶ್ವರನ ಅಭಿಷೇಕಕ್ಕೆ, 1 ಬಿಂದಿಗೆ ನೀರು ಇನ್ನಿತರ ದೇವರ ಅಭಿಷೇಕಕ್ಕೆ ಹಾಗೂ ಗ್ರಾಮದ ಮನೆಗಳಿಗೆ ತೀರ್ಥ ರೂಪದಲ್ಲಿ ಹಂಚಿಕೆಯಾಗುವುದು ಇಲ್ಲಿನ ವಿಶೇಷವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw