500 ಕೊಟ್ರೆ 6 ಗಂಟೆ, 3 ಸಾವಿರ ಕೊಟ್ರೆ 1 ಗಂಟೆಯಲ್ಲಿ ಕೊವಿಡ್ ರಿಪೋರ್ಟ್ | ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರಿಸ್ಥಿತಿ ಏನು?
ಬೆಂಗಳೂರು: ಒಮಿಕ್ರಾನ್ ಭೀತಿಯ ನಡುವೆಯೇ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮವನ್ನು ಘೋಷಿಸಿದೆ. ಈ ನಡುವೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಗಳಿಂದ ಬರುತ್ತಿರುವ ಪ್ರಯಾಣಿಕರನ್ನು ಕೊವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದೆ. ಆದರೆ, ಇಲ್ಲಿನ ಅವ್ಯವಸ್ಥೆಯ ವಿರುದ್ಧ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ಬಂದ ತಕ್ಷಣವೇ ಒಂದು ಕ್ಯೂಆರ್ ಕೋಡ್ ನ ಪಾಂಪ್ಲೇಟ್ ನೀಡಿದ್ದಾರೆ. ಆದರೆ, ಅದು ಏನು ಎಂದು ವಿವರಣೆ ನೀಡದೇ, ಎಲ್ಲಾ ಕೂತ್ಕೊಳ್ಳಿ… ಕೂತ್ಕೊಳ್ಳಿ ಅಂದ್ರು. ವಿದೇಶದಿಂದ ಬಂದವರ ಬಳಿ ಇಂಟರ್ ನೆಟ್ ಇರುವುದಿಲ್ಲ. ಯಾಕೆಂದರೆ, ಅವರ ಬಳಿ ಇಂಡಿಯನ್ ಸಿಮ್ ಕಾರ್ಡ್ ಇರುವುದಿಲ್ಲ. ಕ್ಯೂಆರ್ ಕೋಡ್ ನಾವು ಹೇಗೆ ಸ್ಕ್ಯಾನ್ ಮಾಡುವುದು ಎಂದು ಪ್ರಯಾಣಿಕರೊಬ್ಬರು ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ, ಅಳಲು ತೋಡಿಕೊಂಡರು.
ಯಾರೂ ಹೆಲ್ಪ್ ಮಾಡುವವರಿಲ್ಲ, ಇದು ಫಸ್ಟ್ ಡೇ, ನಮ್ಗೆ ಅರ್ಥ ಆಗುತ್ತೆ, ಆದ್ರೆ, ಒಂಚೂರು ಪ್ಲಾನ್ ಮಾಡ್ಕೊಂಡು ನೀಟಾಗಿ ಎಕ್ಸ್ ಪ್ಲೈನ್ ಮಾಡಿದ್ರೆ, ಚೆನ್ನಾಗಿರೋದು. ಮತ್ತೆ, 500 ರೂಪಾಯಿ ಮಾಮೂಲಿ ಕೊರೊನಾ ಟೆಸ್ಟ್ ಗಂತೆ. ಈ ಟೆಸ್ಟ್ ರಿಪೋರ್ಟ್ ಬರೋಕೆ, 5—6 ಗಂಟೆ ಕಾಯ್ಬೇಕಂತೆ. 3 ಸಾವಿರ ರೂಪಾಯಿ ಕೊಟ್ರೆ 1 ಗಂಟೆಯಲ್ಲಿ ಕೊಡ್ತಾರಂತೆ. 5ರಿಂದ 6 ಗಂಟೆಯ ಯಾರು ಕಾಯ್ತಾರೆ? ಎಲ್ಲರೂ 3 ಸಾವಿರ ಕೊಟ್ಟಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಟೆಸ್ಟ್ ಮಾಡಿರುವ ಬಗ್ಗೆ ಕೂಡ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಲಂಡನ್ ನಲ್ಲಿ ಟೆಸ್ಟ್ ಮಾಡುವಾಗ ಮೂಗಿನಿಂದ ಸ್ಯಾಂಪಲ್ ಸರಿಯಾಗಿ ಕಲೆಕ್ಟ್ ಮಾಡುತ್ತಾರೆ. ಆದರೆ, ಇಲ್ಲಿ ಒಂದು ಟ್ಯೂಬ್ ಮೂಗಿಗೆ ಹಾಕಿ, ಪ್ಲಾಸ್ಟಿಕ್ ಕವರ್ ಗೆ ಹಾಕಿಕೊಂಡ್ರು, ಒಂದು ಗಂಟೆಯಲ್ಲಿ ರಿಪೋರ್ಟ್ ಬರುತ್ತೆ, ಹೋಗಿ ಸರ್ ಅಂದ್ರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಟೆಸ್ಟ್ ಗಳನ್ನು ಮಾಡುತ್ತಿರುವುದು ಯಾಕೆ? ಕೊವಿಡ್ ಹರಡ ಬಾರದು ಅಂತ ಅಲ್ವಾ? ಆದ್ರೆ, ಎಲ್ಲರೂ ಕ್ಯೂವಲ್ಲಿ ಗುಂಪುಗುಂಪಾಗಿ ನಿಂತಿದ್ರು, ಹೆಲ್ಪ್ ಮಾಡೋದಕ್ಕೆ ಅಂತ ಡೆಸ್ಕ್ ನಲ್ಲಿ ಇಬ್ಬರೇ ಇದ್ದಾರೆ ಪಾಪಾ. ಸೋಷಿಯಲ್ ಡಿಸ್ಟೆನ್ಸ್ ಇಲ್ಲ ಏನೂ ಇಲ್ಲ. ಸರ್ಕಾರದ ಟೆಸ್ಟ್ ನಿಂದ ಏನು ಪ್ರಯೋಜನ ಎಂದು ಪ್ರಯಾಣಿಕ ಪ್ರಶ್ನಿಸಿದರು.
ನಾವು ಐದು ಮುಕ್ಕಾಲಿಗೆ ಲ್ಯಾಂಡ್ ಆಗಿದ್ದೇವೆ. ಈಗ 9 ಗಂಟೆಯಾಗಿದೆ. 1 ಗಂಟೆಯಲ್ಲಿ ರಿಪೋರ್ಟ್ ಕೊಡುತ್ತೇವೆ ಅಂತ ಹೇಳಿ ನಮಗೆ ರಿಪೋರ್ಟ್ ಕೊಟ್ಟಿರೋದು 2ರಿಂದ 3 ಗಂಟೆಯ ಬಳಿಕ. ಅದಕ್ಕೆ ಏನು ರಿಫಂಡ್ ಕೊಡ್ತಾರಾ? ಎಂದು ಕೇಳಿದ್ರೆ, ಹೇಳುವವರಿಲ್ಲ ಕೇಳುವವರಿಲ್ಲ. ಇಮಿಗ್ರೇಷನ್ ಇವೆಲ್ಲ ಬೇಗನೇ ಆಯಿತು. ಆದ್ರೆ, ಇವರದ್ದೇ ತಡ. ಇಲ್ಲಿ ತುಂಬಾ ಗೊಂದಲವಾಗಿದೆ. ಇದರಿಂದ ಏನು ಕೂಡ ಪ್ರಯೋಜನವಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ವೈದ್ಯನ ಟಿಕ್ ಟಾಕ್ ಹುಚ್ಚು | ತಾಳ್ಮೆ ಕಳೆದುಕೊಂಡ ರೋಗಿ; ಕೆಲಸ ಕಳೆದುಕೊಂಡ ವೈದ್ಯ
ಎಲ್ ಪಿಜಿ ಗ್ರಾಹಕರಿಗೆ ಬಿಗ್ ಶಾಕ್: ವಾಣಿಜ್ಯ ಸಿಲಿಂಡರ್ ಗಳ ಬೆಲೆ 103.50ಕ್ಕೆ ಏರಿಕೆ
ಪೂಜೆ ಮಾಡುತ್ತೇನೆ ಎಂದು ಮಾಂಗಲ್ಯ ಸರ ಎಗರಿಸಿದ ಜ್ಯೋತಿಷಿ!
ವಿದ್ಯಾರ್ಥಿ ನಾಯಕನ ಹತ್ಯೆ ಆರೋಪಿ ಪೊಲೀಸ್ ವಾಹನ ಡಿಕ್ಕಿ ಹೊಡೆದು ಸಾವು!
ದನ ಸಾಗಾಟದ ವಾಹನ ತಡೆಯಲು ಯತ್ನಿಸಿದ ಯುವಕರ ಮೇಲೆ ಹತ್ತಿದ ಪಿಕಪ್: ಇಬ್ಬರಿಗೆ ಗಂಭೀರ ಗಾಯ