ವಿಮಾನದೊಳಗೆ ಸಿಗರೇಟ್ ಸೇದಿದ ಮಹಿಳೆ: ಸಹ ಪ್ರಯಾಣಿಕರು ವಿರೋಧಿಸಿದರೂ ಕ್ಯಾರೇ ಅನ್ನಲಿಲ್ಲ
ಫ್ಲೋರಿಡಾ: ಮಹಿಳೆಯೊಬ್ಬರು ವಿಮಾನದ ಕ್ಯಾಬಿನ್ ನಲ್ಲಿಯೇ ಕುಳಿತು ಸಿಗರೇಟ್ ಸೇದಿದ ಘಟನೆ ಫ್ಲೋರಿಡಾಕ್ಕೆ ತೆರಳುವ ಸ್ಪಿರಿಟ್ ಏರ್ ಲೈನ್ಸ್ ನಲ್ಲಿ ನಡೆದಿದ್ದು, ಈ ವೇಳೆ ಸಮೀಪದಲ್ಲಿದ್ದ ಇತರ ಪ್ರಯಾಣಿಕರು ಮಹಿಳೆಯ ಕೆಲಸವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.
ಸಹ ಪ್ರಯಾಣಿಕರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯ ಬಳಿಯಲ್ಲಿ ಬ್ಯಾಗ್ ಇದೆಯೇ ಎಂದು ವಿಚಾರಿಸಿ ವಿಮಾನದಿಂದ ಹೊರಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಮಹಿಳೆಯನ್ನು ಬಂಧಿಸಲಾಗಿಲ್ಲ ಎಂದು ಸಹ ಪ್ರಯಾಣಿಕರು ತಿಳಿಸಿದ್ದಾರೆ.
ಮಹಿಳೆ ಸಿಗರೇಟ್ ಸೇದುತ್ತಿದ್ದ ಸಂದರ್ಭದಲ್ಲಿ ಸಹ ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದರೂ ಆಕೆ ಕೇಳಲು ತಯಾರಿರಲಿಲ್ಲ. ವಿಮಾನದೊಳಗೆ ಧೂಮಪಾನ ಮಾಡುವುದು ನಿಷೇಧಿಸಲಾಗಿದ್ದು, ಈ ನಿಯಮವನ್ನು ಮೀರಿದರೆ, 4 ಸಾವಿರ ಡಾಲರ್ ದಂಡ ವಿಧಿಸಲು ಅವಕಾಶವಿದೆ.
ಇನ್ನಷ್ಟು ಸುದ್ದಿಗಳು…
ಮಮತಾ ಬ್ಯಾನರ್ಜಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಪ್ರಾಧ್ಯಾಪಕ!
ಮದುವೆಯಾದ ಮೂರೇ ದಿನದಲ್ಲಿ ಮದುಮಗಳು ಸಾವು: ಸಂಭ್ರಮದ ಮನೆಯಲ್ಲಿ ಮಡುಗಟ್ಟಿದ ಶೋಕ
ಯೋಗಿ ವಿರುದ್ಧ ಸ್ಪರ್ಧಿಸುತ್ತೇನೆ ಎಂದಿದ್ದ ಮಾಜಿ ಐಪಿಎಸ್ ಅಧಿಕಾರಿ ಅರೆಸ್ಟ್!
ಸಾಮೂಹಿಕ ಅತ್ಯಾಚಾರ ಪ್ರಕರಣ: ಬಂಧಿತ ಐದು ಮಂದಿಯ ಪೈಕಿ ಓರ್ವ ಅಪ್ರಾಪ್ತ ವಯಸ್ಕ
ಬೆತ್ತಲೆ ವಿಡಿಯೋ ಕಾಲ್ ಮಾಡಿದ ಯುವತಿ, ಆಟೋ ಚಾಲಕನನ್ನೂ ಬೆತ್ತಲೆಗೊಳಿಸಿ ವಿಡಿಯೋ ವೈರಲ್ ಮಾಡಿಸಿದಳು!
ಅಮಾನವೀಯ ಘಟನೆ: ಪತ್ನಿಯ ಖಾಸಗಿ ಅಂಗಕ್ಕೆ ಸೂಜಿದಾರದಿಂದ ಹೊಲಿಗೆ ಹಾಕಿದ ಪತಿ
ಪುರುಷರು ಮಾಡಿದ ತಪ್ಪಿಗೆ ಮಹಿಳೆಯರನ್ನೇ ಯಾಕೆ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತಿದೆ | ನಟಿ ರಮ್ಯಾ ಪ್ರಶ್ನೆ