ತರಗತಿಯಲ್ಲಿ ಸಾವರ್ಕರ್ ಫೋಟೋ: ಮಂಗಳೂರಿನ ಕಾಲೇಜಿನಲ್ಲಿ ಮತ್ತೊಂದು ವಿವಾದ!
ಮಂಗಳೂರು: ಹಿಜಾಬ್ ವಿವಾದದ ಬಳಿಕ ಮಂಗಳೂರಿನ ಹಂಪನಕಟ್ಟೆ ಬಳಿ ಇರುವ ವಿವಿ ಘಟಕದ ಕಾಲೇಜಿನಲ್ಲಿ ಇದೀಗ ಸಾವರ್ಕರ್ ಫೋಟೋ ವಿವಾದ ಆರಂಭವಾಗಿದ್ದು, ಯಾರೋ ವಿದ್ಯಾರ್ಥಿಗಳು ತರಗತಿಯಲ್ಲಿ ಸಾವರ್ಕರ್ ಫೋಟೋ ಅಳವಡಿಸಿದ್ದು ಇದರಿಂದಾಗಿ ಮತ್ತೆ ವಿವಾದ ಸೃಷ್ಟಿಯಾಗಿದೆ.
ತರಗತಿಯಲ್ಲಿ ಸಾವರ್ಕರ್ ಫೋಟೋ ಅಳವಡಿಸಿದ್ದನ್ನು ಕಾಲೇಜಿನ ಇತರ ವಿದ್ಯಾರ್ಥಿಗಳು ಪ್ರಾಂಶುಪಾಲರ ಗಮನಕ್ಕೆ ತಂದ ಬಳಿಕ ತೆರವು ಮಾಡಲಾಗಿದೆ. ಕಾಮರ್ಸ್ ವಿಭಾಗದ ಕೆಲವು ವಿದ್ಯಾರ್ಥಿಗಳು ಈ ಕೆಲಸ ಮಾಡಿದ್ದು,ಸದ್ಯ ವಿದ್ಯಾರ್ಥಿಗಳ ಬಳಿ ಪ್ರಾಂಶುಪಾಲರು ತಪ್ಪೊಪ್ಪಿಗೆ ಬರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಮಂಗಳೂರಿನ ಇತಿಹಾಸದಲ್ಲೇ ಉತ್ತಮ ಹೆಸರಿರುವ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾಲಯಕ್ಕೆ ಇತ್ತೀಚೆಗೆ ನಡೆಯುತ್ತಿರುವ ಕೆಲವು ವಿದ್ಯಮಾನಗಳು ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಈ ಕಾಲೇಜು ಇದೀಗ ರಾಜಕೀಯ ಪಕ್ಷಗಳ ವೇದಿಕೆಯಂತಾಗಿರುವುದು ಮಂಗಳೂರಿನಾದ್ಯಂತ ಚರ್ಚೆಗೀಡಾಗಿದೆ.
ತರಗತಿಯಲ್ಲಿ ಸಾವರ್ಕರ್ ಫೋಟೋವನ್ನು ಈ ಹಿಂದಿನಿಂದಲೇ ಅಳವಡಿಸುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಕೆಲವರು ಹೊಸ ಸಂಪ್ರದಾಯಗಳನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿರುವುದು ಚರ್ಚೆಗೀಡಾಗಿದೆ.
ಒಂದು ಕಾಲದಲ್ಲಿ ಕಾಲೇಜಿನಲ್ಲಿ ಯೂನಿಫಾರ್ಮ್ ಸಿಸ್ಟಮ್ ಇರಲಿಲ್ಲ. ಆದರೆ, ಕೆಲವು ವರ್ಷಗಳಿಂದ ಆರಂಭವಾಗಿರುವ ಯುನಿಫಾರ್ಮ್ ಸಿಸ್ಟಮ್ ಗೆ ವಿದ್ಯಾರ್ಥಿಗಳ ಬೆಂಬಲ ಕೂಡ ಇತ್ತು. ಆದರೆ ಇದೀಗ ಹಿಜಾಬ್ ವಿಚಾರದಲ್ಲಿ ಪದವಿ ಕಾಲೇಜಿನಲ್ಲೂ ವಿವಾದ ಸೃಷ್ಟಿಯಾಗಿರುವುದು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಈ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಮೊದಲಾದ ಘಟನೆಗಳ ಬಗ್ಗೆ ಹಳೆಯ ವಿದ್ಯಾರ್ಥಿಗಳು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೊನೆಗೂ ತನ್ನನ್ನು ತಾನೇ ಮದುವೆಯಾಗಿ ಸಪ್ತಪದಿ ತುಳಿದ ಯುವತಿ
ಸ್ವಾಮೀಜಿಗಳ ವೇಷ ತೊಟ್ಟು ದುಡ್ಡು ಕಲೆಕ್ಷನ್: ಮೂವರ ಬಂಧನ
ಕೇರಳದಲ್ಲಿ ಪತ್ತೆಯಾದ ಜೀರುಂಡೆ ಜ್ವರ: ವಿದ್ಯಾರ್ಥಿ ಸಾವು
ಖ್ಯಾತ ನಟಿ ನಯನತಾರಾ, ವಿಘ್ನೇಶ್ ಶಿವ ಅದ್ದೂರಿ ವಿವಾಹ