ಬಲಪಂಥೀಯರ ಬಾಯ್ಕಾಟ್ ಬೆದರಿಕೆ ನಡುವೆಯೇ 15 ಕೋಟಿ ಬಾಚಿದ ಸಾಯಿ ಪಲ್ಲವಿ ಚಿತ್ರ!
ನವದೆಹಲಿ: ಬಲಪಂಥೀಯರ ಬಯ್ಕಾಟ್ ಬೆದರಿಕೆಯ ನಡುವೆಯೇ ಸಾಯಿ ಪಲ್ಲವಿ ನಟನೆಯ ‘ವಿರಾಟ ಪರ್ವಂ’ ಚಿತ್ರ ಭರ್ಜರಿ ಗೆಲುವು ಸಾಧಿಸಿದ್ದು, ಬಾಯ್ಕಾಟ್ ಗೆ ಜನರು ಕವಡೆ ಕಾಸಿನ ಕಿಮ್ಮತ್ತೂ ನೀಡಿಲ್ಲ.
ಚಿತ್ರ ಬಿಡುಗಡೆಯಾದ ಮೊದಲ ದಿನವೇ ಚಿತ್ರ ದಾಖಲೆ ಸೃಷ್ಟಿಸಿದ್ದು, 15 ಕೋಟಿ ರೂಪಾಯಿ ಬಾಚಿ ಕೊಂಡಿದೆ. ಕೇವಲ ತೆಲುಗಿನಲ್ಲಿ ಮಾತ್ರವೇ ರಿಲೀಸ್ ಆಗಿರುವ ಈ ಚಿತ್ರ ಮೊದಲ ದಿನವೇ ದಾಖಲೆಯ ಮೊತ್ತ ಬಾಚಿದೆ.
ಕಾಶ್ಮೀರ ಪಂಡಿತರ ಹತ್ಯೆ ಮತ್ತು ಗೋವಿನ ಹೆಸರಿನಲ್ಲಿ ಹತ್ಯೆ ನಡೆಸುವುದು ಇವೆರಡೂ ಒಂದೇ ಎಂದು ಸಾಯಿ ಪಲ್ಲವಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಬಹುತೇಕ ಬಲಪಂಥೀಯ ಮಾಧ್ಯಮಗಳು ತಿರುಚಿ ವಿವಾದ ಸೃಷ್ಟಿಸಿದ್ದು, ಇದರಿಂದಾಗಿ ಸಾರ್ವಜನಿಕರಿಗೂ ತಪ್ಪು ಸಂದೇಶ ಹೋಗಿತ್ತು.
ಈ ನಡುವೆ ಸಾಯಿ ಪಲ್ಲವಿ ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದರು. ಆದರೆ, ಸಾಯಿ ಪಲ್ಲವಿಯ ಸ್ಪಷ್ಟನೆಯನ್ನು ಬಲಪಂಥೀಯ ಮಾಧ್ಯಮಗಳು ಕ್ಷಮೆ ಯಾಚನೆ ಎಂದು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿರುವುದು ಕಂಡು ಬಂದಿದೆ.
ಇನ್ನೂ ಇಂದು ಸ್ಪಷ್ಟನೆ ನೀಡಿದ್ದ ಸಾಯಿ ಪಲ್ಲವಿ, ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವುದು ಪಾಪ. ಗುಂಪು ಹಲ್ಲೆಯನ್ನು ಕೆಲವರು ಸಮರ್ಥಿಸಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.
ಬೇರೆಯವರ ಜೀವವನ್ನು ತೆಗೆಯುವ ಹಕ್ಕು ನಮಗಿಲ್ಲ. ನಾನು ಎಂಬಿಬಿಎಸ್ ಪದವೀಧರೆಯಾಗಿ, ಎಲ್ಲ ಜೀವವೂ ಮುಖ್ಯ ಎಂದು ನಂಬಿದ್ದೇನೆ. ಎಲ್ಲ ಭಾರತೀಯರೂ ಸಹೋದರರಿದ್ದಂತೆ ಎಂದು ಹೇಳುತ್ತಾ ಬೆಳೆದವಳು. ನನ್ನ ಮನಸ್ಸಲ್ಲಿ ಅದು ಆಳವಾಗಿ ಕುಳಿತಿದೆ. ಹಾಗಾಗಿ ನಾನು ಯಾವಾಗಲೂ ತಟಸ್ಥವಾಗಿ ಮಾತನಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ನಾನು ಮಾತನಾಡಿರುವುದನ್ನು ಕೆಲವರು ಬೇರೆ ರೀತಿಯ ಅರ್ಥದಲ್ಲಿ ಅರ್ಥೈಸಿದ್ದು ನಿಜಕ್ಕೂ ಬೇಸರ ತರಿಸುವಂತಹದ್ದಾಗಿದೆ. ಪೂರ್ತಿ ಸಂದರ್ಶನವನ್ನು ನೋಡದೇ ಕೆಲವರು ಮಾತನಾಡಿರುವುದು ಬೇಸರದ ಸಂಗತಿಯಾಗಿದೆ. ನನ್ನ ಪರವಾಗಿ ನಿಂತವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಸಾಯಿ ಪಲ್ಲವಿ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮೋದಿ ಬಂದು ಹೋಗಲಿ, ಕಾಲೇಜಿಗಳಿಗೆ ರಜೆ ಏಕೆ?: ಡಿ.ಕೆ.ಶಿವಕುಮಾರ್
ಆಕಾಶದಲ್ಲೇ ವಿಮಾನದ ರೆಕ್ಕೆಗೆ ಹತ್ತಿಕೊಂಡ ಬೆಂಕಿ!
ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಅನ್ನೋವಷ್ಟರಲ್ಲಿ ಎಣ್ಣೆ ಹೊಡೆದು ತೂರಾಡುತ್ತಾ ಬಂದ ಸತ್ತ ವ್ಯಕ್ತಿ!