ಪ್ರೇಯಸಿ ಕೊವಿಡ್ ಗೆ ಬಲಿಯಾದ ಸುದ್ದಿ ತಿಳಿದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪ್ರಿಯಕರ - Mahanayaka
10:05 AM Tuesday 14 - October 2025

ಪ್ರೇಯಸಿ ಕೊವಿಡ್ ಗೆ ಬಲಿಯಾದ ಸುದ್ದಿ ತಿಳಿದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪ್ರಿಯಕರ

rohith kumar
22/07/2021

ವಿಶಾಖಪಟ್ಟಣ: ಪ್ರೇಯಸಿಯ ಮರಣ ವಾರ್ತೆಯನ್ನು ಕೇಳಿ ಪ್ರಿಯಕರ ತಾನು ಕೂಡ ಸಾವಿನ ಮೊರೆ ಹೋದ ದಾರುಣ ಘಟನೆಯೊಂದು ಆಂಧ್ರಪ್ರದೇಶದ ವಿಶಾಖಪಟ್ಟಣದ ಗಾಜುವಾಕ ಕಣತಿ ನಗರದಲ್ಲಿ ನಡೆದಿದೆ.


Provided by

25 ವರ್ಷ ವಯಸ್ಸಿನ ರೋಹಿತ್ ಕುಮಾರ್ ಅವರ ಪ್ರೇಯಸಿ ಮೂರು ದಿನಗಳ ಹಿಂದೆ ಕೊವಿಡ್ ನಿಂದ  ಮೃತಪಟ್ಟಿದ್ದರು.  ಈಕೆ ಅನಕಾಪಲ್ಲಿ ನಿವಾಸಿಯಾಗಿದ್ದು, ಗುಂಟೂರಿನಲ್ಲಿ ಸಾವನ್ನಪ್ಪಿದ್ದಳು.  ಪ್ರೇಯಸಿಯ ಸಾವನ್ನು ಅರಗಿಸಿಕೊಳ್ಳಲಾಗದೆ ರೋಹಿತ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪರವಾಡ ತಾಲೂಕಿನ ದೇಶಪಾತ್ರುಪಾಲೇ ಗ್ರಾಮದ ನಿವಾಸಿ ದಟ್ಟಿ ಕೃಷ್ಣಾರಾವು ಹಾಗೂ ಶಾಂತಿ ದಂಪತಿ ಪುತ್ರನಾಗಿರುವ ರೋಹಿತ್, ಇಂಟರ್ ಮೀಡಿಯೇಟ್ ವರೆಗೆ ವ್ಯಾಸಂಗ ಮಾಡಿದ್ದರು. ಹೊಟೇಲ್ ಆನ್ ಲೈನ್  ಪಾರ್ಸೆಲ್ ಸರ್ವಿಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಸ್ನೇಹಿತರೊಡನೆ ಕಣತಿ ರಸ್ತೆ ನಗರದಲ್ಲಿ ವಾಸಿಸುತ್ತಿದ್ದ ರೋಹಿತ್, ತನ್ನ ಪ್ರೇಯಸಿಯ ಸಾವಿನ ಸುದ್ದಿ ಕೇಳಿದ ಬಳಿಕ ತನ್ನ ರೂಮ್ ಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ನೂ ರೋಗಿತ್ ಅನಕಾಪಲ್ಲಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಮೂರು ದಿನಗಳ ಹಿಂದೆ ಆಕೆ ಕೊವಿಡ್ ನಿಂದ ಮೃತಪಟ್ಟಿದ್ದಳು. ನಿನಗೆ ಬೇರೆ ಯುವತಿಯ ಜೊತೆಗೆ ಮದುವೆ ಮಾಡುತ್ತೇವೆ ಎಂದು ಹೇಳಿದರೂ, ಆತ ಆಕೆಯ ಸಾವನ್ನೇ ನೆನಪು ಮಾಡಿಕೊಳ್ಳುತ್ತಿದ್ದ. ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರೋಹಿತ್ ನ ತಂದೆ ಗಳಗಳನೆ ಅತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ರಾಜ್ ಕುಂದ್ರಾ ತಯಾರಿಸುತ್ತಿದ್ದ ನೀಲಿ ಚಿತ್ರ ಯಾವ ಆ್ಯಪ್ ನಲ್ಲಿ ಬಿಡುಗಡೆಯಾಗುತ್ತಿತ್ತು? | ಪೊಲೀಸರು ನೀಡಿದ ಆ ಮಾಹಿತಿ ಏನು?

ಸಿದ್ದಲಿಂಗ ಶ್ರೀಗಳು ನಡೆದಾಡುವ ದೇವರಾಗಬೇಕು, ನಡೆದಾಡುವ ರಾಜಕಾರಣಿಯಾಗಬಾರದು | ಹೆಚ್.ವಿಶ್ವನಾಥ್

ಆಸ್ಕರ್ ಫರ್ನಾಂಡಿಸ್ ಆರೋಗ್ಯ ಸ್ಥಿತಿ ನೆನೆದು ಗಳಗಳನೇ ಅತ್ತ ಜನಾರ್ದನ ಪೂಜಾರಿ

25-30 ಮಕ್ಕಳ ಮೇಲೆ ಬಾಣಸಿಗನಿಂದ ಲೈಂಗಿಕ ದೌರ್ಜನ್ಯ | ಕಿರುಕುಳದ ಬಳಿಕ ಈತ ಮಾಡುತ್ತಿದ್ದದ್ದೇನು ಗೊತ್ತಾ?

ಇತ್ತೀಚಿನ ಸುದ್ದಿ