ಹೃದಯ ವಿದ್ರಾವಕ ಘಟನೆ: ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವು - Mahanayaka

ಹೃದಯ ವಿದ್ರಾವಕ ಘಟನೆ: ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವು

esamudra
13/07/2021

ಚಿತ್ರದುರ್ಗ: ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ ಮತ್ತಿಬ್ಬರು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ನಡೆದಿದೆ.

ನಿನ್ನೆ ರಾತ್ರಿ ರಾಗಿ ಮುದ್ದೆ ಸಾರು ಸೇವನೆಯ ಬಳಿಕ ಕುಟುಂಬಸ್ಥರು ಅಸ್ವಸ್ಥರಾಗಿದ್ದು, ತಕ್ಷಣವೇ ಅಸ್ವಸ್ಥರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ  ಚಿಕಿತ್ಸೆ ಫಲಿಸದೇ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

46 ವರ್ಷ ವಯಸ್ಸಿನ  ತಿಪ್ಪಾನಾಯ್ಕ್ ಹಾಗೂ ಇವರ ಪತ್ನಿ 43 ವರ್ಷ ವಯಸ್ಸಿನ ಸುಧಾಬಾಯಿ, 75 ವರ್ಷ ವಯಸ್ಸಿನ ವೃದ್ಧೆ ಗುಂಡಿಬಾಯಿ  ಮೃತಪಟ್ಟವರಾಗಿದ್ದು, ಕುಟುಂಬದ ಮೂವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.  ಘಟನೆ ಸಂಬಂಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಸುದ್ದಿಗಳು:

‘ಒಂದು ಮಗು ನೀತಿ’ಯನ್ನು ಕೈಬಿಡಬೇಕು | ಯೋಗಿ ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ ಮನವಿ!

ಅಮೀರ್ ಖಾನ್ ನಂತಹವರಿಂದ ದೇಶದ ಜನಸಂಖ್ಯೆ ಹೆಚ್ಚಾಗಿದೆ | ಬಿಜೆಪಿ ಸಂಸದ

ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದು 11 ಮಂದಿ ದಾರುಣ ಸಾವು

ಇಂದು ಭೂಮಿಗೆ ಅಪ್ಪಳಿಸಲಿದೆ ಸೌರ ಬಿರುಗಾಳಿ: ಏನಿದು ಸೌರ ಬಿರುಗಾಳಿ?

 

ಇತ್ತೀಚಿನ ಸುದ್ದಿ