ವಿಶಾಲ್ ರನ್ನು ನೋಡಿದಾಗ ನನ್ನ ತಮ್ಮನನ್ನು ನೋಡಿದ ಹಾಗೆಯೇ ಆಗುತ್ತದೆ, ಅಪ್ಪು ಬಳಿಯೂ ಇದನ್ನು ಹೇಳಿದ್ದೆ | ಶಿವರಾಜ್ ಕುಮಾರ್
ಬೆಂಗಳೂರು: ಎಲ್ಲ ನಟರಲ್ಲಿಯೂ ನನ್ನ ತಮ್ಮ ಅಪ್ಪುವನ್ನು ನೋಡುತ್ತೇನೆ. ಧ್ರುವ, ಯಶ್, ಸುದೀಪ್, ವಿಜಯ್, ಗಣೇಶ್ ಹೀಗೆ ಎಲ್ಲರಲ್ಲಿಯೂ ನನ್ನ ತಮ್ಮನನ್ನು ನೋಡುತ್ತೇನೆ ಎಂದು ಶಿವರಾಜ್ ಕುಮಾರ್ ಅವರು ಹೇಳಿದರು.
ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಪುನೀತ್ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್ ಕುಮಾರ್ ಅವರು, ನಾನು ವಿಶಾಲ್ ಗೆ ಹೇಳುತ್ತಿದೆ. ನಿಮ್ಮನ್ನು ನೋಡಿದರೆ, ನನ್ನ ತಮ್ಮನನ್ನು ನೋಡಿದ ಹಾಗೆ ಆಗುತ್ತಿದೆ ಅಂತ. ಅಪ್ಪು ಬಳಿಯಲ್ಲಿಯೂ ಇದನ್ನು ಹೇಳಿದ್ದೆ ಎಂದು ಶಿವರಾಜ್ ಕುಮಾರ್ ಇದೇ ವೇಳೆ ಹೇಳಿದರು.
ಕಷ್ಟದ ಸಮಯದಲ್ಲಿ ಎಲ್ಲರೂ ಬಂದು ನಾವಿದ್ದೇವೆ ಎಂದು ಹೇಳಿದಾಗ ಮನಸ್ಸಿಗೆ ತುಂಬಾ ನೆಮ್ಮದಿಯಾಗುತ್ತದೆ. ಅಪ್ಪು ಅಷ್ಟೊಂದು ಪ್ರೀತಿ ಗಳಿಸಿದ್ದಾನೆ. ಪುನೀತ್ ಗೆ ನಾನು ದೀಪ ಹಚ್ಚುವುದಿಲ್ಲ, ಅದು ನನ್ನಿಂದ ಸಾಧ್ಯವಾಗುವುದಿಲ್ಲ. ನನ್ನ ತಂದೆ ತಾಯಿಗೆ ಕೂಡ ದೀಪ ಹಚ್ಚಲು ಮನಸ್ಸು ಒಪ್ಪದಾಗ ಅಪ್ಪುವಿಗೆ ಹೇಗೆ ತಾನೆ ದೀಪ ಹಚ್ಚುತ್ತೇನೆ ಎಂದು ಅವರು ಭಾವುಕರಾದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
ವಾಯು ಮಾಲಿನ್ಯದಿಂದ ಕಂಗೆಟ್ಟ ದೆಹಲಿ: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಮದ್ರಸದಿಂದ ಬರುತ್ತಿದ್ದ ಬಾಲಕನ ಮೇಲೆ ಎರಗಿದ ಹುಚ್ಚುನಾಯಿ!
ಪುನೀತ್ ಅವರಿಗೆ ‘ಕರ್ನಾಟಕ ರತ್ನ’ದ ಜೊತೆಗೆ ರಾಷ್ಟ್ರಮಟ್ಟದ ಉನ್ನತ ಗೌರವಕ್ಕೂ ಶಿಫಾರಸು | ಸಿಎಂ ಬಸವರಾಜ್ ಬೊಮ್ಮಾಯಿ
ಒಂದು ಕೆನ್ನೆಗೆ ಹೊಡೆದಾಗ ಇನ್ನೊಂದು ಕೆನ್ನೆ ತೋರಿಸಿದರೆ, ಸಿಗೋದು ಸ್ವಾತಂತ್ರ್ಯ ಅಲ್ಲ, ಭಿಕ್ಷೆ | ಮತ್ತೆ ಕಂಗನಾ ಟೀಕೆ
“ಸತ್ಯ ನುಡಿದಿದ್ದಕ್ಕೆ ಹಂಸಲೇಖ ಕ್ಷಮೆಯಾಚಿಸಿದರು” | ಹಂಸಲೇಖ ಅವರಿಗೆ ವ್ಯಕ್ತವಾಗುತ್ತಿದೆ ಭಾರೀ ಬೆಂಬಲ
ಪರೀಕ್ಷೆ ಬರೆದು ಪಾಸ್ ಆದ 104 ವರ್ಷದ ಕುಟ್ಟಿಯಮ್ಮಗೆ ಅಭಿನಂದನೆಗಳ ಮಹಾಪೂರ