ವಿಷಪೂರಿತ ಮದ್ಯ ಸೇವಿಸಿ ನಾಲ್ವರ ದಾರುಣ ಸಾವು | 15 ಜನರು ಅಸ್ವಸ್ಥ - Mahanayaka
11:52 AM Wednesday 30 - October 2024

ವಿಷಪೂರಿತ ಮದ್ಯ ಸೇವಿಸಿ ನಾಲ್ವರ ದಾರುಣ ಸಾವು | 15 ಜನರು ಅಸ್ವಸ್ಥ

08/01/2021

ಲಕ್ನೋ: ವಿಷಪೂರಿತ ಮದ್ಯ ಸೇವಿಸಿ ನಾಲ್ವರು ಮೃತಪಟ್ಟು 15ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಪಟ್ಟಂತೆ ಕರ್ತವ್ಯ ಲೋಪದ ಆರೋಪದಡಿಯಲ್ಲಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಸಿಕಂದರಾಬಾದ್ ಪ್ರದೇಶದ ಜೀತ್ ಗಡಿ ಗ್ರಾಮದಲ್ಲಿ ಗುರುವಾರ ರಾತ್ರಿ ಮದ್ಯಸೇವಿಸಿ ಮನೆಗೆ ಹೋಗಿದ್ದ ಸಂತ್ರಸ್ತರು ಎರಡು ಮೂರು ಗಂಟೆಗಳ ನಂತರ ವಾಂತಿ ಮಾಡಲು ಆರಂಭಿಸಿದ್ದಾರೆ. ಆ ಬಳಿಕ ನಾಲ್ವರು ಮೃತಪಟ್ಟಿದ್ದಾರೆ. ಒಟ್ಟು 15 ಜನರು ಅಸ್ವಸ್ಥಗೊಂಡಿದ್ದಾರೆ.

ಘಟನೆ ಸಂಬಂಧ ಬುಲಂದ್ ಶಹರ್ ಸ್ಟೇಷನ್ ಇನ್ ಚಾರ್ಜ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಸೂಕ್ತಪರಿಶೀಲನೆ ನಡೆಸದೆ ಮದ್ಯ ಮಾರಾಟ ಮಾಡಲಾಗಿದೆ. ಉತ್ತರಪ್ರದೇಶದಲ್ಲಿ ಮದ್ಯ ಸೇವಿಸಿ ಸಾವಿಗೀಡಾಗುತ್ತಿರುವ ಪ್ರಕರಣಗಳು ಸಾಮಾನ್ಯ ಎಂಬಂತೆ ನಿರಂತರವಾಗಿ ನಡೆಯುತ್ತಲೇ ಇದೆ.

ಇತ್ತೀಚಿನ ಸುದ್ದಿ