6 ಕೋಟಿ ಕನ್ನಡಿಗರಿಗೆ 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ | ಯಾರಿಗೆ ಏನೇನು ಸಿಗಲಿದೆ? - Mahanayaka
7:09 PM Thursday 12 - December 2024

6 ಕೋಟಿ ಕನ್ನಡಿಗರಿಗೆ 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ | ಯಾರಿಗೆ ಏನೇನು ಸಿಗಲಿದೆ?

bs yeddyurappa
19/05/2021

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಲಾಕ್ ಡೌನ್ ನಿಂದ ಜನತೆ ಸಂಕಷ್ಟಕ್ಕೀಡಾಗಿದ್ದು, ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ 1,250 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಪ್ರತಿ ಹೆಕ್ಟೇರ್​ ಹೂವು ಹಾನಿಗೆ 10 ಸಾವಿರ ರೂಪಾಯಿ ಪರಿಹಾರ ಧನ, ರಾಜ್ಯದ ರೈತರಿಗೆ 12.73 ಕೋಟಿ ರೂಪಾಯಿ ಮೌಲ್ಯದಲ್ಲಿ ನೆರವು ನೀಡಲಿದ್ದೇವೆ, ಆಟೋ, ಮ್ಯಾಕ್ಸಿ ಕ್ಯಾಬ್​ ಚಾಲಕರಿಗೆ 3 ಸಾವಿರ ರೂಪಾಯಿ ನೀಡಲಾಗುತ್ತದೆ. ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ರೂಪಾಯಿ ನೀಡಲಿದ್ದೇವೆ. ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ರೂಪಾಯಿ ಪರಿಹಾರ ಸಿಗಲಿದೆ.ರಸ್ತೆ ಬದಿ ವ್ಯಾಪಾರಿಗಳಿಗೂ ತಲಾ 2 ಸಾವಿರ ರೂಪಾಯಿ ಪರಿಹಾರ ನೀಡಲಿದ್ದೇವೆ ಎಂದು ತಿಳಿಸಿದರು.

ಸಹಕಾರಿ ಸಂಘಗಳಿಂದ ಸಾಲ ಪಡೆದವರು ಕಂತು ಪಾವತಿಸುವ ಅವಧಿಯನ್ನ ಜುಲೈ 30ರವರೆಗೂ ಮುಂದೂಡಲಾಗಿದೆ.  ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಆಹಾರ ಸಿಗಲಿದೆ. ಕೊರೊನಾ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ. ಕಲಾವಿದರು ಹಾಗೂ ಕಲಾ ತಂಡದವರಿಗೆ ತಲಾ 3 ಸಾವಿರ ರೂಪಾಯಿ ಪರಿಹಾರ ಧನವನ್ನ ನೀಡಲಾಗುವುದು ಎಂದು ಹೇಳಿದರು.

ಪ್ರಧಾನ್​ ಮಂತ್ರಿ ಗರೀಬ್ ಕಲ್ಯಾಣ್​ ಯೋಜನೆಯಡಿಯಲ್ಲಿ ಬಿಪಿಎಲ್​ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 5 ಕೆಜಿ ಅಕ್ಕಿ ಉಚಿತವಾಗಿ ಸಿಗಲಿದೆ. ಎಪಿಎಲ್​ ಕಾರ್ಡ್​ದಾರರಿಗೆ 15 ರೂಪಾಯಿಯಂತೆ ಐದು ಕೆಜಿ ಅಕ್ಕಿ ಸಿಗಲಿದೆ. ಅಲ್ಲದೇ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೂ ಉಚಿತ ಪಡಿತರ ಸಿಗಲಿದೆ. ಗ್ಯಾಸ್​ ವಿತರಕರು, ಕೆಇಬಿ ಲೈನ್‌ ಮ್ಯಾನ್ ಹಾಗೂ ಶಿಕ್ಷಕರಿಗೆ ಆದ್ಯತೆಯ ಮೇರೆ ಕೊರೊನಾ ಲಸಿಕೆ ಸಿಗಲಿದೆ. ಗ್ರಾಮೀಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಎನ್ ಡಿಆರ್‌ ಎಫ್​ ನಿಧಿಯನ್ನು ಬಳಕೆ ಮಾಡಬಹುದು ಎಂದು ಹೇಳಿದರು.

ಇತ್ತೀಚಿನ ಸುದ್ದಿ