ವಿಶ್ವದ ನಂಬರ್ 1 ಟೆನಿಸ್‌ ಆಟಗಾರ್ತಿ ಆಶ್ಲೆ ಬಾರ್ಟಿ ನಿವೃತ್ತಿ - Mahanayaka
9:56 AM Thursday 14 - November 2024

ವಿಶ್ವದ ನಂಬರ್ 1 ಟೆನಿಸ್‌ ಆಟಗಾರ್ತಿ ಆಶ್ಲೆ ಬಾರ್ಟಿ ನಿವೃತ್ತಿ

asle barti
23/03/2022

ಆಸ್ಟ್ರಿಯಾ: ವಿಶ್ವದ ನಂಬರ್ 1 ಟೆನಿಸ್‌ ಆಟಗಾರ್ತಿ ಆಸ್ಟ್ರಿಯಾದ ಆಶ್ಲೆ ಬಾರ್ಟಿ ಅವರು ಟೆನಿಸ್‌ ಆಟಕ್ಕೆ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ಕುರಿತು ಇಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಅವರು ‘ಇದೊಂದು ಕಣ್ಣೀರಿನ ವಿದಾಯ’ ಎಂದು ಹೇಳಿಕೊಂಡಿದ್ದಾರೆ.

ತಮ್ಮ ಆಪ್ತ ಸ್ನೇಹಿತೆ ಡಬಲ್ಸ್ ಪಾಲುದಾರೆ ಕೇಸಿ ಡೆಲಕ್ವಾ ಅವರೊಂದಿಗಿನ ವಿಡಿಯೊ ಸಂದೇಶದಲ್ಲಿ ಮಾತನಾಡಿರುವ ಬಾರ್ಟಿ, ‘ನಾನು ನನ್ನ ಟೆನಿಸ್‌ ಜೀವನದಿಂದ ತುಂಬಾ ಸಂತೋಷವಾಗಿದ್ದೇನೆ. ಟೆನಿಸ್ ನನಗೆ ನೀಡಿದ ಎಲ್ಲದಕ್ಕೂ ನಾನು ತುಂಬಾ ಕೃತಜ್ಞಳಾಗಿದ್ದೇನೆ. ಆದರೆ, ಅದರಿಂದ ದೂರ ಸರಿಯಲು ಮತ್ತು ಇತರ ಕನಸುಗಳನ್ನು ಬೆನ್ನಟ್ಟಲು ಇದು ಸರಿಯಾದ ಸಮಯ ಎಂದು ನನಗೆ ತಿಳಿದಿದೆ’ ಎಂದಿದ್ದಾರೆ.

ಎರಡು ಬಾರಿ ವಿಶ್ವದ ನಂಬರ್ 1 ಆಟಗಾರ್ತಿಯಾಗಿದ್ದ ಆಸ್ಟ್ರೇಲಿಯಾ ಮೂಲದ ಬಾರ್ಟಿ ಅವರು, ಮೂರು ಬಾರಿ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅವರು, ಮಾ. 24ರಂದು ನಡೆಸಲು ಉದ್ದೇಶಿಸಿರುವ ಸುದ್ದಿಗೋಷ್ಠಿಗೆ ಪೂರ್ವಭಾವಿಯಾಗಿ ಇನ್‍ಸ್ಟಾಗ್ರಾಂನಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ಆಶ್ಲೆ ಬಾರ್ಟಿ ಅವರು 2019 ರಲ್ಲಿ ಫ್ರೆಂಚ್ ಓಪನ್, 2021ರಲ್ಲಿ ವಿಂಬಲ್ಡನ್ ಮತ್ತು 2022ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೂಲಕ ಜನರನ್ನು ಸಂಘ ಪರಿವಾರ ಬೇರ್ಪಡಿಸುತ್ತಿದೆ: ಬೃಂದಾ ಕಾರಟ್ ಆರೋಪ

ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ: ಪಾಪ್ಯುಲರ್ ಫ್ರಂಟ್ ಪ್ರತಿಕ್ರಿಯೆ ಏನು?

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜಾತ್ರೋತ್ಸವದಲ್ಲಿ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ: ಸಿದ್ದರಾಮಯ್ಯ ಖಂಡನೆ

ಬರೋಬ್ಬರಿ 6 ಆಟೋಗಳನ್ನು ಕಳವು ಮಾಡಿದ್ದ 16 ವರ್ಷದ ಬಾಲಕನ ಸೆರೆ

 

ಇತ್ತೀಚಿನ ಸುದ್ದಿ