ವಿಶ್ವಕ್ಕೆ ಕೊರೊನಾ ಬಂದಿರುವ ವಿಚಾರ ಈತನಿಗೆ ಇನ್ನೂ ಗೊತ್ತೇ ಇಲ್ವಂತೆ! - Mahanayaka
4:19 AM Wednesday 5 - February 2025

ವಿಶ್ವಕ್ಕೆ ಕೊರೊನಾ ಬಂದಿರುವ ವಿಚಾರ ಈತನಿಗೆ ಇನ್ನೂ ಗೊತ್ತೇ ಇಲ್ವಂತೆ!

09/02/2021

ನಾಟಿಂಗ್ ಹ್ಯಾಮ್: ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾಕ್ಕೆ ಹೋಗಿದ್ದ ಬ್ರಿಟನ್ ಯುವಕ ಜೋಸೆಫ್ ಫ್ಲಾವಿಲ್ ಒಂದು ವರ್ಷದ ಬಳಿಕ ಕೋಮಾದಿಂದ ಹೊರ ಬರುತ್ತಿದ್ದಾರೆ. ಕೋವಿಡ್ ಕಾಲ ಇಡೀ ಕೋಮಾದಲ್ಲಿದ್ದ ಜೋಸೆಫ್ ಗೆ ಕೊರೊನಾದಂತಹ ಮಹಾಮಾರಿ ರೋಗ ತನಗೂ 2 ಬಾರಿ ಬಂದು ಹೋಗಿದೆ ಎನ್ನುವ ವಿಚಾರ ಕೂಡ ತಿಳಿದಿಲ್ಲ.

ಬರ್ಟನ್ ನ ಸೆಂಟ್ರಲ್ ಇಂಗ್ಲಿಷ್ ಟೌನ್ ನಲ್ಲಿ 2020 ಮಾರ್ಚ್ 1ರಂದು ಸಂಭವಿಸಿದ ಅಪಘಾತದಲ್ಲಿ 19 ವರ್ಷದ ಜೋಸೆಫ್ ಫ್ಲಾವಿಲ್ ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿ ತಲುಪಿದ್ದರು.  ಈ ಸಮಯದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಲಾಕ್ ಡೌನ್ ಘೋಷಿಸಿತ್ತು.

ಕೊರೊನಾ ಲಾಕ್ ಡೌನ್ ನಂತಹ ಸಂದರ್ಭದಲ್ಲಿ ಜೋಸೆಫ್ ಕುಟುಂಬ ಅಲ್ಲಿ ನಿಲ್ಲುವಂತೆ ಇರಲಿಲ್ಲ. ಅವರು ವಿಡಿಯೋ ಕಾಲ್ ಮೂಲಕವೇ ಜೋಸೆಫ್ ನನ್ನು ನೋಡಬೇಕಿತ್ತು. ಇದೀಗ ಜೋಸೆಫ್  ನಿಧನವಾಗಿ ಚೇತರಿಸುತ್ತಿದ್ದ ಕಣ್ಣಗಳ ಮೂಲಕ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾನೆ . ಖುಷಿ ಕೊಡುವಂತಹ ವಿಷಯಗಳಿಗೆ ಆತ ಕಣ್ಣಿಲ್ಲಿಯೇ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾನೆ.

ಇನ್ನೂ ಜೋಸೆಫ್ ಗೆ ಸಂಪೂರ್ಣ ಪ್ರಜ್ಞೆ ಬಂದ ಬಳಿಕ ಜೋಸೆಫ್ ಈ ಲಾಕ್ ಡೌನ್ ಕಥೆಗಳನ್ನು ನಂಬುತ್ತಾನೋ ಇಲ್ಲವೋ ಗೊತ್ತಿಲ್ಲ.  ಆತ ಸಹಜ ಸ್ಥಿತಿಗೆ ಬರಲು ಬಹಳಷ್ಟು ದಿನಗಳ ಬೇಕಾಗುತ್ತವೆ ಎಂದು  ವೈದ್ಯರು ಹೇಳಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ