ಚಂದ್ರನ ಮೇಲೆ ಲ್ಯಾಂಡರ್‌ ವಿಕ್ರಮ್‌ ಸಾಫ್ಟ್‌ ಲ್ಯಾಂಡ್‌ಗೆ ಇಸ್ರೋ ಸಿದ್ಧ - Mahanayaka

ಚಂದ್ರನ ಮೇಲೆ ಲ್ಯಾಂಡರ್‌ ವಿಕ್ರಮ್‌ ಸಾಫ್ಟ್‌ ಲ್ಯಾಂಡ್‌ಗೆ ಇಸ್ರೋ ಸಿದ್ಧ

23/08/2023

ಈ ದಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಚಂದ್ರನ ಮೇಲೆ ಲ್ಯಾಂಡರ್‌ ವಿಕ್ರಮ್‌ ಸಾಫ್ಟ್‌ ಲ್ಯಾಂಡ್‌ಗೆ ಇಸ್ರೋ ಸಿದ್ಧವಾಗಿದೆ. ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ (ಇಸ್ರೋ) ವಿಜ್ಞಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಆಗಸ್ಟ್‌ 23 ರ ಸಂಜೆ 5.43ರ ಸುಮಾರಿಗೆ ಲ್ಯಾಂಡರ್‌ ಮಾಡ್ಯೂಲ್‌ ವಿಕ್ರಮ್‌ ನಿಗದಿಪಡಿಸಲಾದ ಸ್ಥಳದಲ್ಲಿ ಲ್ಯಾಂಡ್‌ ಆಗಲಿದ್ದು ಇಸ್ರೋ ಕಚೇರಿಯಲ್ಲಿ ವಿಜ್ಞಾನಿಗಳು ಈ ಐತಿಹಾಸಿಕ ಕ್ಷಣಕ್ಕೆ ಸಿದ್ಧರಾಗಿದ್ದಾರೆ. ಜಗ್ತತಿನಾದ್ಯಂತ ಜನರು ಚಂದ್ರನ ಮೇಲಿಳಿಯುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದು ವಿಜ್ಞಾನಿಗಳಿಗೆ ಶುಭ ಹಾರೈಸುತ್ತಿದ್ದಾರೆ. ದೇಶದ ಹಲವೆಡೆ ಪೂಜೆ ಪುನಸ್ಕಾರ, ಪ್ರಾರ್ಥನೆಗಳು ಕೂಡ ನಡೆಯುತ್ತಿದೆ.

ಇತ್ತೀಚಿನ ಸುದ್ದಿ