“ರೇಪ್ ತಡೆಯಲು ಆಗದಿದ್ದರೆ, ಮಲಗಿ ಎಂಜಾಯ್ ಮಾಡಬೇಕು” | ತನ್ನ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೇಳಿದ ರಮೇಶ್ ಕುಮಾರ್ - Mahanayaka
6:10 AM Saturday 21 - September 2024

“ರೇಪ್ ತಡೆಯಲು ಆಗದಿದ್ದರೆ, ಮಲಗಿ ಎಂಜಾಯ್ ಮಾಡಬೇಕು” | ತನ್ನ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೇಳಿದ ರಮೇಶ್ ಕುಮಾರ್

ramesh kumar
17/12/2021

ಬೆಂಗಳೂರು: ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದ ಪಡಬೇಕು ಎಂದು ವಿಧಾನ ಸಭಾ ಅಧಿವೇಶನದಲ್ಲಿ ಹೇಳಿಕೆ  ನೀಡಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಈ ಹೇಳಿಕೆ ವಿವಾದವಾಗುತ್ತಿದ್ದಂತೆಯೇ ಕ್ಷಮೆ ಯಾಚಿಸಿದ್ದಾರೆ.

ಸದನದಲ್ಲಿ ಅತಿವೃಷ್ಟಿ ಕುರಿತು ಮಾತನಾಡುತ್ತಿರುವಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಎಲ್ಲರೂ ಮಾತನಾಡಬೇಕು ಎನ್ನುತ್ತಾರೆ, ಆದರೆ, ಇದು ನಿಮ್ಮದೇ ಸದನ, ಈಗ ನನ್ನ ಪರಿಸ್ಥಿತಿ ಹೇಗಾಗಿದೆ ಎಂದರೆ, ಲೆಟ್ಸ್ ಎಂಜಾಯ್ ಸಿಚುವೇಷನ್ ಅನ್ನೋ ರೀತಿಯಾಗಿದೆ ರಮೇಶ್ ಕುಮಾರ್ ಎಂದು ಹೇಳಿದರು.

ತಮ್ಮ ಹೆಸರು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಎದ್ದು ನಿಂತು ಮಾತನಾಡಿದ ರಮೇಶ್ ಕುಮಾರ್,  ರೇಪ್ ಆಗುವಾಗ ತಡೆಯಲು ಆಗದಿದ್ದರೆ, ಮಲಗಿಕೊಂಡು ಎಂಜಾಯ್ ಮಾಡಬೇಕು ಅಂತ ಹೇಳುತ್ತಿದ್ದೀರಿ ಎಂದು ವ್ಯಂಗ್ಯವಾಡಿದ್ದರು. ಈ ವ್ಯಂಗ್ಯವನ್ನು ವಿರೋಧಿಸದೇ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ನಕ್ಕಿದ್ದರು. ಸದನದ ಯಾವುದೇ ಸದಸ್ಯರು ಇದನ್ನು ವಿರೋಧಿಸಲಿಲ್ಲ.


Provided by

ರಮೇಶ್ ಕುಮಾರ್ ಅವರು ಉದಾಹರಣೆಯಾಗಿ ನೀಡಿದ ಈ ಹೇಳಿಕೆ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಚಾರ ತಿಳಿಯುತ್ತಿದ್ದಂತೆಯೇ ರಮೇಶ್ ಕುಮಾರ್ ಅವರು ಟ್ವೀಟ್ ಮಾಡಿದ್ದು, ಅತ್ಯಾಚಾರದ ಕುರಿತು ವಿಧಾನಸಭೆಯಲ್ಲಿ ನಾನು ಅಸಡ್ಡೆ ಮತ್ತು ನಿರ್ಲಕ್ಷ್ಯತನದ ಕಮೆಂಟ್ ಮಾಡಿದ್ದಕ್ಕಾಗಿ  ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಘೋರ ಅಪರಾಧವನ್ನು ಹಗುರಗೊಳಿಸುವುದು ನನ್ನ ಉದ್ದೇಶವಲ್ಲ. ಇನ್ನು ಮುಂದೆ ನನ್ನ ಮಾತುಗಳಲ್ಲಿ ಎಚ್ಚರಿಕೆ ವಹಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಗುವನ್ನು ಬಕೆಟ್ ನಲ್ಲಿ ಮುಳುಗಿಸಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಮಹಿಳೆ!

ಕುಟುಂಬ ರಾಜಕಾರಣ: ವಿಧಾನ ಪರಿಷತ್ ತುಂಬ ರಾಜಕಾರಣಿಗಳ ಕರುಳ ಕುಡಿಗಳು

ಉಪ್ಪಿನಂಗಡಿ ಪೊಲೀಸರ ಕಟ್ಟುಕಥೆಗಳು: ಲಾಠಿಚಾರ್ಜ್ ಪ್ರಮಾದ ಮುಚ್ಚಿ ಹಾಕುವ ಪಿತೂರಿ: ಪಾಪ್ಯುಲರ್ ಫ್ರಂಟ್ ಆರೋಪ

ಮೊಟ್ಟೆ ವಿತರಣೆ ಕೈಬಿಡಿ, ಇಲ್ಲವೇ ಪ್ರತ್ಯೇಕ ವೆಜ್- ನಾನ್ ವೆಜ್ ಶಾಲೆ ತೆರೆಯಿರಿ | ದಯಾನಂದ ಸ್ವಾಮೀಜಿ ಒತ್ತಾಯ

ಬಿಜೆಪಿಯವ್ರು ಮಂಚ ಮುರಿಯೋದು, ತೋರಿಸ್ ಬ್ಯಾಡ್ರೀ ಅಂತ ಸ್ಟೇ ತರೋದು | ಸಿಎಂ ಇಬ್ರಾಹಿಂ ವ್ಯಂಗ್ಯ

ಮತಾಂತರ ನಿಷೇಧ ಕಾಯ್ದೆಗೆ ಜೆಡಿಎಸ್ ಬೆಂಬಲಿಸುವುದಿಲ್ಲ | ಹೆಚ್.ಡಿ.ಕುಮಾರಸ್ವಾಮಿ

 

ಇತ್ತೀಚಿನ ಸುದ್ದಿ