ರಾತ್ರಿ ಫೋನ್ ನಲ್ಲಿ ಪತಿ-ಪತ್ನಿ ನಡುವೆ ವಾಗ್ವಾದ | ವಿವಾಹವಾಗಿ 8 ತಿಂಗಳಲ್ಲಿ ನಡೆಯಿತು ದುರಂತ! - Mahanayaka
12:50 AM Tuesday 16 - September 2025

ರಾತ್ರಿ ಫೋನ್ ನಲ್ಲಿ ಪತಿ-ಪತ್ನಿ ನಡುವೆ ವಾಗ್ವಾದ | ವಿವಾಹವಾಗಿ 8 ತಿಂಗಳಲ್ಲಿ ನಡೆಯಿತು ದುರಂತ!

pramood sneha
03/08/2021

ಚೆನ್ನೈ: ರಾತ್ರಿ ತನ್ನ ಪತಿಯ ಜೊತೆಗೆ ಫೋನ್ ನಲ್ಲಿ ವಾಗ್ವಾದ ನಡೆಸಿದ ನವವಿವಾಹಿತೆ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದು, ಮದುವೆಯಾಗಿ ಕೇವಲ 8 ತಿಂಗಳಿನಲ್ಲಿಯೇ ಈ ದುರಂತ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.


Provided by

ಚೆನ್ನೈನ ಪಣೈಯೂರಿನ 25 ವರ್ಷ ವಯಸ್ಸಿನ ಪ್ರಮೋದ್ ಹಾಗೂ 19 ವರ್ಷ ವಯಸ್ಸಿನ ಸ್ನೇಹಾ ಕಳೆದ ಕೊರೊನಾ ಸಂದರ್ಭದಲ್ಲಿ ವಿವಾಹವಾಗಿದ್ದರು.  ಮದುವೆಯಾದ ಬಳಿಕ ಇಬ್ಬರು ಕೂಡ ಅನ್ಯೋನ್ಯತೆಯಿಂದಿದ್ದರು. ಆದರೆ ಇತ್ತೀಚೆಗೆ ಪ್ರಮೋದ್ ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸಲು ಆರಂಭಿಸಿದ್ದ ಎಂದು ಹೇಳಲಾಗಿದೆ.

ವರದಕ್ಷಿಣೆ ವಿಚಾರ ಪತಿ ಹಾಗೂ ಪತ್ನಿಯ ನಡುವೆ ಕಂದಕವನ್ನೇ ಏರ್ಪಡಿಸಿತ್ತು. ಹೀಗಾಗಿ ಪತಿಯ ಜೊತೆಗೆ ಹೊಂದಾಣಿಕೆ ಸಾಧ್ಯವಾಗದೇ ಸ್ನೇಹಾ ತನ್ನ ಸೆಲೆಯೂರಿನಲ್ಲಿರುವ ತವರು ಮನೆಗೆ ಬಂದಿದ್ದಾಳೆ. ಆಕೆ ತನ್ನ ತವರಿಗೆ ಬಂದರೂ ಪತಿ ಪ್ರಮೋದ್ ನ ಕಾಟ ಆಕೆಗೆ ತಪ್ಪಿರಲಿಲ್ಲ. ಆಕೆಗೆ ಕರೆ ಮಾಡಿ ನಿರಂತವಾಗಿ ಆತ ಜಗಳವಾಡುತ್ತಿದ್ದ ಎನ್ನಲಾಗಿದೆ.

ಘಟನೆ ನಡೆದ ದಿನವೂ ಪ್ರಮೋದ್, ಪತ್ನಿ ಸ್ನೇಹಾ ಜೊತೆಗೆ ಬಹಳಷ್ಟು ಹೊತ್ತು ಫೋನ್ ನಲ್ಲಿ ಮಾತನಾಡಿದ್ದ, ಪತ್ನಿಯನ್ನು ಫೋನ್ ನಲ್ಲಿ ಗದರಿದ್ದ ಎಂದು ಹೇಳಲಾಗಿದೆ. ಇದರಿಂದ ಆಕೆ ತೀವ್ರವಾಗಿ ನೊಂದು ತನ್ನ ಕೋಣೆಯಲ್ಲಿಯೇ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇನ್ನೂ ಘಟನೆ ಸಂಬಂಧ ಸ್ನೇಹಾಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪತಿಯು ವರದಕ್ಷಿಣೆಗಾಗಿ ಒತ್ತಡ ಹಾಕಿರುವುದರಿಂದ ನೊಂದು ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

 

ಚಟ್ನಿ ರುಚಿಕರವಾಗಿ ತಯಾರಿಸಿಲ್ಲ ಎಂದು ಪತ್ನಿಯನ್ನು ಹೊಡೆದುಕೊಂದ ಪತಿ!

ಕೇರಳ-ಪುತ್ತೂರು ಅಧಿಕೃತ ರಸ್ತೆ ಹೊರತು ಪಡಿಸಿ ಉಳಿದ ರಸ್ತೆಗೆ ಮಣ್ಣು ಹಾಕಿ ಮುಚ್ಚಲು ಶಾಸಕರಿಂದ ಸೂಚನೆ

ಪ್ರೀತಿಸಿಲು ನಿರಾಕರಿಸಿದ ಬಾಲಕಿಯನ್ನು ದಾರಿ ಮಧ್ಯೆ ತಡೆದು ಯುವಕನಿಂದ ಘೋರ ಕೃತ್ಯ!

“ಓ ಲಾರ್ಡ್ ಜೀಸಸ್, ಪ್ಲೀಸ್ ಹೆಲ್ಪ್ ಮೀ” ಎಂದು ಎನ್.ಮಹೇಶ್ ಬೇಡುತ್ತಿರುವ ವಿಡಿಯೋ ವೈರಲ್

ಒಂದು ದೇಹದಲ್ಲಿ ಎರಡು ಜೀವ | ಸರ್ಕಾರ ಮತ್ತು ಕಾನೂನಿಗೆ ಸವಾಲಾದ ಸಹೋದರರು

ಇತ್ತೀಚಿನ ಸುದ್ದಿ