ವಿವಾಹಿತ ಮಹಿಳೆ ಪ್ರಿಯಕರನ ಮನೆಯಲ್ಲಿ ನೇಣಿಗೆ ಶರಣು - Mahanayaka
6:10 AM Thursday 12 - December 2024

ವಿವಾಹಿತ ಮಹಿಳೆ ಪ್ರಿಯಕರನ ಮನೆಯಲ್ಲಿ ನೇಣಿಗೆ ಶರಣು

chithradurga
18/10/2021

ಚಿತ್ರದುರ್ಗ: ವಿವಾಹಿತ ಮಳೆಯೊಬ್ಬರು  ತಮ್ಮ ಪ್ರಿಯತಮನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲಾಪುರದಲ್ಲಿ ಭಾನುವಾರ ನಡೆದಿದೆ.

ಮಲ್ಲಾಪುರದ 25 ವರ್ಷ ವಯಸ್ಸಿನ ಲಕ್ಷ್ಮಿ ಎಂಬವರು ಮೃತ ಮಹಿಳೆಯಾಗಿದ್ದು, ಹೇಮಂತ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಲಕ್ಷ್ಮಿ ಅವರು ಎಂಟು ವರ್ಷಗಳ ಹಿಂದೆ ಚಾಲಕರೊಬ್ಬರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ-ಪತ್ನಿ ನಡುವೆ ಗಲಾಟೆ ಉಂಟಾಗಿ ವರ್ಷದ ಹಿಂದಿನಿಂದ ಪ್ರತ್ಯೇಕವಾಗಿದ್ದರು. ಆ ಬಳಿಕ ಲಕ್ಷ್ಮಿ ಅವರು ಹೇಮಂತ್ ಎಂಬಾತನ ಜೊತೆಗಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಹೇಮಂತ್ ಹಾಗೂ ಲಕ್ಷ್ಮಿ ನಡುವೆ ಕಲಹ ಉಂಟಾಗಿದೆ. ಶೀಲ ಶಂಕಿಸಿದ ಪ್ರಿಯಕರನೊಂದಿಗೆ ಮಹಿಳೆ ಗಲಾಟೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಅ.16ರಂದು  ತವರು ಮನೆಯಲ್ಲಿ ದಸರಾ ಹಬ್ಬ ಮುಗಿಸಿ ಮರಳಿದ ಲಕ್ಷ್ಮೀ, ಸೀರೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಉಪ ಚುನಾವಣೆ ಮುಗಿದ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ್ ಬೊಮ್ಮಾಯಿ

ಜಾತಿನಿಂದನೆ ಪ್ರಕರಣ: ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ಧಾರ್ಮಿಕ ಬಲಾತ್ಕಾರ:  ಚರ್ಚ್ ಗೆ ನುಗ್ಗಿ ದುರ್ನಡತೆ ತೋರಿದ ಬಿಜೆಪಿ ಪರಿವಾರ

ಎಳೆನೀರು ಸೇವನೆಯಿಂದ ನಮ್ಮ ದೇಹಕ್ಕೆ ಆಗುವ ಅದ್ಬುತ ಪ್ರಯೋಜನಗಳು

KSRTCಯಲ್ಲಿ ಕೆಲಸದ ಆಫರ್ ನೀಡಿ 500 ಮಂದಿಯನ್ನು ವಂಚಿಸಿದ ಇಬ್ಬರು ಅರೆಸ್ಟ್

BigNews: ಆರೆಸ್ಸೆಸ್ ನ ಹಿರಿಯ ಮುಖಂಡನಿಂದ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ

ಅಮಾನವೀಯ ಘಟನೆ: ಹೊಲದಲ್ಲಿ ಗನ್ ಪಾಯಿಂಟ್ ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ

ಇತ್ತೀಚಿನ ಸುದ್ದಿ