ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾರತ್ನ, ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆ
ಬೆಂಗಳೂರು: ರಾಜ್ಯದ ಕ್ರೀಡಾ ಇಲಾಖೆ ವತಿಯಿಂದ ನೀಡುವ 2020-21ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ, ಕ್ರೀಡಾರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ(Narayana Gowda) ಘೋಷಿಸಿದ್ದಾರೆ.
ವಿಕಾಸಸೌಧ(Vikasa Soudha(ದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕ್ರೀಡಾ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ ಕ್ರೀಡಾಪಟುಗಳು ಹಾಗೂ ತರಬೇತುದಾರರಿಗೆ ಕೊಡಲ್ಪಡುವ ಕ್ರೀಡಾಪಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
2020-21ನೇ ಸಾಲಿನಲ್ಲಿ ಏಕಲವ್ಯ ಪ್ರಶಸ್ತಿಗೆ 151, ಕರ್ನಾಟಕ ಕ್ರೀಡಾರತ್ನ 53, ಕ್ರೀಡಾ ಪೋಷಕ 25 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ 28 ಅರ್ಜಿಗಳು ಸ್ವೀಕೃತವಾಗಿದ್ದವು. ಇದರಲ್ಲಿ ಪ್ರಶಸ್ತಿ ಆಯ್ಕೆಗೆ ನೇಮಿಸಲಾಗಿದ್ದ ತಜ್ಞರ ಸಮಿತಿ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿದೆ. ಏಕಲವ್ಯ ಪ್ರಶಸ್ತಿಗೆ 15, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ 14, ಕರ್ನಾಟಕ ಕ್ರೀಡಾಪೋಷಕ ಪ್ರಶಸ್ತಿಗೆ 10 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ, ದಿನಾಂಕವನ್ನು ನಿಗದಿಮಾಡಿ ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಹೇಳಿದ್ದಾರೆ.
ಅಥ್ಲೆಟಿಕ್ಸ್ನಲ್ಲಿ ಜೀವನ್ ಕೆಎಸ್, ನೆಟ್ ಬಾಲ್ ನಿತಿನ್, ಬ್ಯಾಡ್ಮಿಂಟನ್ ಅಶ್ವಿನಿ ಭಟ್, ರೋಯಿಂಗ್ ಜಿ ತರುಣ್ ಕೃಷ್ಣಪ್ರಸಾದ್, ಬ್ಯಾಸ್ಕೆಟ್ ಬಾಲ್ ಲೋಪಮುದ್ರಾ ತಿಮ್ಮಯ್ಯ, ಈಜು ಲಿಖಿತ್ ಎಸ್ಪಿ, ಕ್ರಿಕೆಟ್ ಕರುಣ್ ನಾಯರ್, ಟೇಬಲ್ ಟೆನ್ನಿಸ್ ಅನರ್ಘ್ಯ ಮಂಜುನಾಥ್, ಸೈಕ್ಲಿಂಗ್ ದಾನಮ್ಮ ಚಿಚಖಂಡಿ, ವಾಲಿಬಾಲ್ ಅಶ್ವಲ್ ರೈ, ಜುಡೋ ವಸುಂಧರಾ ಎಂ ಎನ್, ಹಾಕಿ ಪ್ರಧಾನ್ ಸೋಮಣ್ಣ, ಕಬಡ್ಡಿ ಪ್ರಶಾಂತ್ ಕುಮಾರ್ ರೈ, ಪ್ಯಾರಾ ಅಥ್ಲೆಟಿಕ್ಸ್ ರಾಧಾ ವಿ, ಖೋಖೋ ಮುನೀರ್ ಬಾಷಾ ಏಕಲವ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಇನ್ನು ಜೀವಮಾನ ಸಾಧನಾ ಪ್ರಶಸ್ತಿಗೆ ಅಥ್ಲೆಟಿಕ್ಸ್ನಲ್ಲಿ ಗಾವಂಕರ್ ಜಿವಿ, ಕಯಾಕಿಂಗ್ ಮತ್ತು ಕನೋಯಿಂನಲ್ಲಿ ಕ್ಯಾಪ್ಟನ್ ದಿಲೀಪ್ ಕುಮಾರ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಆಟ್ಯಾ-ಪಾಟ್ಯಾ ಪೂಜಾಗಾಲಿ, ಬಾಲ್ ಬ್ಯಾಡ್ಮಿಂಟನ್ ಬಿಎನ್ ಕಿರಣ್ ಕುಮಾರ್, ಕಂಬಳ ಗೋಪಾಲ ನಾಯ್ಕ್, ಖೋಖೋ ದೀಕ್ಷಾ ಕೆ, ಗುಂಡುಕಲ್ಲು ಎತ್ತುವುದು ಶಿವಯೋಗಿ ಬಸಪ್ಪ ಬಾಗೇವಾಡಿ, ಕುಸ್ತಿ ಲಕ್ಷ್ಮೀ ಬಿರೆಡೆಕರ್, ಯೋಗ ಪಿ ಗೋಪಾಲಕೃಷ್ಣ, ಪವರ್ ಲಿಫ್ಟಿಂಗ್ ರಾಘವೇಂದ್ರ ಎಸ್ ಹೊಂಡದಕೇರಿ, ಸಂಗ್ರಾಣಿ ಕಲ್ಲು ಎತ್ತುವುದು ಸಿದ್ದಪ್ಪ ಪಾಂಡಪ್ಪ ಹೊಸಮನಿ, ಕುಸ್ತಿ ಸೂರಜ್ ಎಸ್ ಅಣ್ಣಿಕೇರಿ, ಪ್ಯಾರಾ ಈಜು ಶಶಾಂಕ್ ಬಿಎಂ, ಯೋಗ ಡಿ ನಾಗರಾಜು, ಜಿಮ್ನ್ಯಾಸ್ಟಿಕ್ ಶ್ರೀವರ್ಷಿಣಿ, ಜುಡೋ ಅವಿನಾಶ್ ನಾಯ್ಕ ಆಯ್ಕೆ ಆಗಿದ್ದಾರೆ.
ಕ್ರೀಡಾ ಪೋಷಕ ಪ್ರಶಸ್ತಿಗೆ ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಟ್ರಸ್ಟ್ ಉಜಿರೆ, ಬೆಂಗಳೂರು ನಗರ ಜಿಲ್ಲೆಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ, ಬೆಂಗಳೂರು ನಗರ ಜಿಲ್ಲೆಯ ಆರ್ ವಿ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು ನಗರ ಜಿಲ್ಲೆಯ ಹೂಡಿ ಸ್ಪೋರ್ಟ್ಸ್ ಕ್ಲಬ್, ಧಾರವಾಡ ಜಿಲ್ಲೆಯ ಬಾಲ ಮಾರುತಿ ಸಂಸ್ಥೆ, ಬೆಂಗಳೂರು ನಗರ ಜಿಲ್ಲೆ ಎಮಿನೆಂಟ್ ಶೂಟಿಂಗ್ ಹಬ್, ದಕ್ಷಿಣ ಕನ್ನಡ ಜಿಲ್ಲೆಯ ಬಾಲಾಂಜನೇಯ ಜಿಮ್ನಾಶಿಯಂ (ರಿ.) ಮಂಗಳೂರು, ಬೆಂಗಳೂರು ನಗರ ಜಿಲ್ಲೆಯ ಬಸವನಗುಡಿ ಅಕ್ವಾಟಿಕ್ ಸೆಂಟರ್, ಬೆಂಗಳೂರು ನಗರ ಜಿಲ್ಲೆಯ ದ್ರಾವಿಡ್ ಪಡುಕೋಣೆ ಅಕಾಡೆಮಿ, ಮಂಡ್ಯ ಜಿಲ್ಲೆಯ ಪೀಪಲ್ ಎಜುಕೇಷನ್ ಟ್ರಸ್ಟ್ ಆಯ್ಕೆಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಎಚ್ಚರ: ನಿದ್ದೆ ಕೆಟ್ಟರೆ ನೀವು ಈ ಗಂಭೀರ ಕಾಯಿಲೆಗಳಿಗೆ ತುತ್ತಾಗಬೇಕಾದೀತು!
ರಾಜ್ಯದಲ್ಲಿ ಬಜರಂಗದಳದವರು ಸಿಎಂ ಆಗಿದ್ದಾರೆ ಅಂತ ಅನ್ನಿಸ್ತಿದೆ: ಪ್ರಿಯಾಂಕ್ ಖರ್ಗೆ ಕಿಡಿ ನುಡಿ
ಸಣ್ಣ ವಯಸ್ಸಲ್ಲೇ ಪ್ರೀತಿಸಿದರು, ಮದುವೆಯೂ ಆಯ್ತು, ಆದರೆ ಪ್ರಕೃತಿ ಆಟಕ್ಕೆ ದುರಂತವೇ ನಡೆದು ಹೋಯ್ತು!
ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಹೆಜ್ಜೇನು ದಾಳಿ: ಐವರಿಗೆ ಗಾಯ, ಮಹಿಳೆಯ ಸ್ಥಿತಿ ಗಂಭೀರ