ಶಾಕಿಂಗ್ ನ್ಯೂಸ್: ಮತ್ತೋರ್ವ ನಟಿ ಆತ್ಮಹತ್ಯೆಗೆ ಶರಣು - Mahanayaka
1:13 PM Wednesday 5 - February 2025

ಶಾಕಿಂಗ್ ನ್ಯೂಸ್: ಮತ್ತೋರ್ವ ನಟಿ ಆತ್ಮಹತ್ಯೆಗೆ ಶರಣು

09/12/2020

ಚೆನ್ನೈ: ಖ್ಯಾತ ಧಾರಾವಾಹಿ ನಟಿಯೊಬ್ಬರು ಚೆನ್ನೈನ ಹೊಟೇಲ್ ರೂಮ್ ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು,  ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.

ತಮಿಳು ಸೀರಿಯಲ್ ಪಾಂಡಿಯನ್ ಸ್ಟೋರ್ಸ್  ನಲ್ಲಿ ನಟಿಸುತ್ತಿದ್ದ 28 ವರ್ಷದ ಚಿತ್ರಾ ನಿನ್ನೆ ರಾತ್ರಿ ಚಿತ್ರೀಕರಣ ಮುಗಿಸಿದ ಬಳಿಕ ರಾತ್ರಿ 2:30ರ ಸುಮಾರಿಗೆ ಹೊಟೇಲ್ ರೂಮ್ ಗೆ ಬಂದಿದ್ದರು. ಬೆಳಗ್ಗೆ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇನ್ನೂ ಮೃತ ನಟಿಯ ಮರಣೋತ್ತರ ಪರೀಕ್ಷೆಯನ್ನು  ಕಿಲ್ಪಾಕ್ ವೈದ್ಯಕೀಯ ಕಾಲೇಜಿನಲ್ಲಿ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ನಜ್ರತ್ ಪೇಟೆ ಠಾಣೆಯ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಟಿಯ ಅನಿರೀಕ್ಷಿತ ಸಾವಿನಿಂದಾಗಿ ಅವರ ಅಭಿಮಾನಿಗಳು ಕಂಗಾಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವನ್ನು ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.



ಇತ್ತೀಚಿನ ಸುದ್ದಿ