ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ ಇದೆ ಹಲವು ಗುಪ್ತ ಕಾಯಿಲೆಗಳು!
ಉಕ್ರೇನ್ ವಿರುದ್ಧ ದಾಳಿ ಮಾಡುವುದಿಲ್ಲ ಎಂದು ಹೇಳುತ್ತಲೇ, ದಾಳಿ ನಡೆಸಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಗ್ಗೆ ರಷ್ಯಾದ ಪ್ರಾಧ್ಯಾಪಕರೊಬ್ಬರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದು, ಪುಟಿನ್ ಮಾನಸಿಕ ಹಾಗೂ ದೈಹಿಕ ಅನಾರೋಗ್ಯ ಸಮಸ್ಯೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ತನ್ನ ಕುಟುಂಬವನ್ನು ಸುರಕ್ಷಿತವಾಗಿರಿಸಿ, ಉಕ್ರೇನ್ ಮೇಲೆ ಅನುಬಾಂಬ್ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದು ಇದೇ ಪ್ರಾಧ್ಯಾಪಕ ಹೇಳಿಕೆ ನೀಡಿದ್ದು, ಇದೀಗ ರಷ್ಯಾದ ಜನರಲ್ಲಿ ಕೂಡ ಆತಂಕಕ್ಕೆ ಕಾರಣವಾಗಿದೆ.
ಈ ಅಧ್ಯಾಪಕ ಹೇಳುತ್ತಿರುವಂತೆ, ಪುಟಿನ್ ಗೆ ಹಲವು ಗುಪ್ತ ಕಾಯಿಲೆಗಳಿವೆ ಎಂದು ಹೇಳಿದ್ದಾರೆ. 61 ವರ್ಷ ವಯಸ್ಸಿನ ವ್ಯಾಲೆರಿ ಸೊಲೊವೆಯ್ ಈ ವಿಚಾರವನ್ನು ಹೇಳುತ್ತಿದ್ದು, ಪುಟಿನ್ ಗೆ ದೈಹಿಕ ಹಾಗೂ ಮಾನಸಿಕವಾದ ಗುಪ್ತ ಕಾಯಿಲೆಗಳಿವೆ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಸಂಬಂಧಿಸಿದಂತೆ ರಷ್ಯಾ ಅಧಿಕಾರಿಗಳು ವ್ಯಾಲೆರಿ ಅವರನ್ನು 7 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದರು ಎಂದು ಹೇಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅಣುಬಾಂಬ್ ಪ್ರಯೋಗಕ್ಕೆ ಸಿದ್ಧವಾಗ್ತಿದೆಯಾ ರಷ್ಯಾ? | ತನ್ನ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಪುಟಿನ್
ಗುಂಡಿನ ಚಕಮಕಿ: ಓರ್ವ ನಕ್ಸಲ್ ಹತ್ಯೆ
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ: ಸುರಕ್ಷಿತವಾಗಿ ಕೀವ್ ತೊರೆದ ಭಾರತೀಯರು; ಕಾರ್ಯಾಚರಣೆಗೆ 26 ವಿಮಾನ ಬಳಕೆ