ಉಜ್ವಾಡ್ ಪತ್ರಿಕೆಯ ನೂತನ ಸಂಪಾದಕರಾಗಿ ವಂ ಆಲ್ವಿನ್ ಸಿಕ್ವೇರಾ ಅಧಿಕಾರ ಸ್ವೀಕಾರ

ಉಡುಪಿ: ಧರ್ಮಪ್ರಾಂತ್ಯದ ಪಾಕ್ಷಿಕ ಪತ್ರಿಕೆ ಉಜ್ವಾಡ್ ಇದರ ನೂತನ ಸಂಪಾದಕರಾಗಿ ವಂ ಆಲ್ವಿನ್ ಸಿಕ್ವೇರಾ ಅವರು ಅಧಿಕಾರ ವಹಿಸಿಕೊಂಡರು.
ಕಕ್ಕುಂಜೆ ಅಂಬಾಗಿಲು ಬಳಿಯ ಅನುಗ್ರಹ ಪಾಲನಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮನ ಸಂಪಾದಕರಾದ ವಂ| ರೊಯ್ಸನ್ ಫೆರ್ನಾಂಡಿಸ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ಉಜ್ವಾಡ್ ಪತ್ರಿಕೆಯು ದೀಪಾ ಟ್ರಸ್ಟ್ ಅಡಿಯಲ್ಲಿ ಪ್ರಕಟಗೊಳ್ಳುತ್ತಿದ್ದು, ಪ್ರಕಾಶಕರು ಹಾಗೂ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು ನೂತನ ಸಂಪಾದಕರಿಗೆ ಸ್ವಾಗತಿಸಿ ಶುಭ ಹಾರೈಸಿದರು. ಪತ್ರಿಕೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಕಾರ್ಮೆಲ್ ಸಭೆಯ ವತಿಯಿಂದ ಧರ್ಮಗುರುವನ್ನು ಒದಗಿಸಿದ್ದಕ್ಕಾಗಿ ಧರ್ಮಪ್ರಾಂತ್ಯದ ಪರವಾಗಿ ಸಭೆಯ ಮುಖಸ್ಥರಿಗೆ ಧನ್ಯವಾಧವಿತ್ತರು.
ನಿರ್ಗಮನ ಸಂಪಾದಕರಾದ ವಂ|ರೊಯ್ಸನ್ ಫೆರ್ನಾಂಡಿಸ್ ಅವರು ಉನ್ನತ ವ್ಯಾಸಂಗಕ್ಕಾಗಿ ರೋಮ್ ಗೆ ತೆರಳಲಿದ್ದಾರೆ.ದೀಪಾ ಟ್ರಸ್ಟ್ ಕಾರ್ಯದರ್ಶಿ ವಂ|ಹೆನ್ರಿ ಮಸ್ಕರೇನ್ಹಸ್, ಅನುಗ್ರಹ ಪಾಲನಾ ಕೇಂದ್ರದ ನಿರ್ದೇಶಕರಾದ ವಂ. ಹೆರಾಲ್ಡ್ ಪಿರೇರಾ, ಕಾರ್ಮಲ್ ಆಶ್ರಮದ ವಂ. ಪ್ರವೀಣ್ ಪಿಂಟೊ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw