ಓಟು ಕೇಳಲು ಬಂದು ಮತದಾರರ ಬಟ್ಟೆ ಒಗೆದುಕೊಟ್ಟ ಅಭ್ಯರ್ಥಿ! - Mahanayaka
5:22 AM Wednesday 11 - December 2024

ಓಟು ಕೇಳಲು ಬಂದು ಮತದಾರರ ಬಟ್ಟೆ ಒಗೆದುಕೊಟ್ಟ ಅಭ್ಯರ್ಥಿ!

thanga kathiravan
23/03/2021

ಚೆನ್ನೈ: ಮತದಾರರನ್ನು ಸೆಳೆಯಲು ರಾಜಕಾರಣಿಗಳು ಏನೇನೋ ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಇಲ್ಲೊಬ್ಬರು ಅಭ್ಯರ್ಥಿ ಹೊಸ ಪ್ರಚಾರ ತಂತ್ರವನ್ನು ಅನುಸರಿಸಿ ಸುದ್ದಿಯಲ್ಲಿದ್ದು, ತನಗೆ ಮತ ನೀಡಿ ಎಂದು ಮತಯಾಚಿಸಿದ ಅಭ್ಯರ್ಥಿ ಮತದಾರರ ಬಟ್ಟೆಗಳನ್ನು ಕೇಳಿ ಪಡೆದು ಚೆನ್ನಾಗಿ ತೊಳೆಯುವ ಮೂಲಕ ಮತದಾರರ ಮನವೊಲಿಸಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಪ್ರಚಾರ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಎಐಎಡಿಎಂಕೆ ಸಕ್ರಿಯ ಕಾರ್ಯಕರ್ತ 50 ವರ್ಷ ವಯಸ್ಸಿನ ಕಾತಿರವನ್  ಅವರು ಮತದಾರರ ಬಟ್ಟೆಗಳನ್ನು ತೊಳೆಯುವ ಮೂಲಕ ಮತಯಾಚಿಸುತ್ತಿದ್ದಾರೆ.

ಪ್ರಚಾರದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,  ತಾನು ಚುನಾವಣೆಯಲ್ಲಿ ಗೆದ್ದು ಬಂದರೆ, ಮಹಿಳೆಯರ ಕಷ್ಟಗಳನ್ನು ನೀಗಿಸಲು, ಪ್ರತೀ ಮನೆಗೂ ವಾಷಿಂಗ್ ಮೆಷಿನ್ ನೀಡುತ್ತೇನೆ ಎಂದು ಭರವಸೆ ನೀಡಲು ನಾನು ಎಲ್ಲರ ಬಟ್ಟೆಗಳನ್ನು ತೊಳೆದಿದ್ದೇನೆ ಎಂದು ಹೇಳಿದ್ದಾರೆ.

ಅಂದ ಹಾಗೆ ಕಾತಿರವನ್ ಅವರು ನಾಗಪಟ್ಟಿಣಂ ನಗರ ಸಭೆಯ ಅಧ್ಯಕ್ಷರೂ ಆಗಿದ್ದಾರೆ. ಇವರ ಜನಸೇವೆಯನ್ನು ಕಂಡು ಇದೇ ಮೊದಲ ಬಾರಿಗೆ  ಪಕ್ಷವು ವಿಧಾನಸಭಾ ಟಿಕೆಟ್ ನೀಡಿದೆ. ಇದೀಗ ತಮ್ಮ ಚುನಾವಣಾ ಪ್ರಚಾರದಲ್ಲಿ ಹೊಸ ಟ್ರಿಕ್ಸ್ ಬಳಸುವ ಮೂಲಕ ಕಾತಿರವನ್ ದೇಶಾದ್ಯಂತ ಸುದ್ದಿಯಾಗಿದ್ದಾರೆ.

ಯವ್ವನದಲ್ಲಿ ಪತ್ನಿ, ಮಕ್ಕಳು ಬೇಡ ಎಂದು ಹೋದ | ಹಾಸಿಗೆ ಹಿಡಿದಾಗ ಪತ್ನಿ ಬಳಿ ಬಂದು ಗೋಳಾಡಿದ

 

ಸಿನಿಮಾ ಹಾಲ್ ಗೆ ರಾತ್ರಿ ನುಗ್ಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ದಂಪತಿ | ವಿಡಿಯೋ ವೈರಲ್!

ಇತ್ತೀಚಿನ ಸುದ್ದಿ