ಮತದಾರರ ಗುರುತಿನ ಚೀಟಿ ಕಳೆದು ಹೋದರೆ ಏನು ಮಾಡಬೇಕು?
ಯಾವುದೇ ಸರ್ಕಾರಿ ಸೇವೆಗಳಿಗೆ ಮತದಾರರ ಗುರುತಿನ ಚೀಟಿ ಅತ್ಯಗತ್ಯವಾಗಿದೆ. ಆದರೆ ಕೆಲವೊಮ್ಮೆ ಮತದಾರರ ಗುರುತಿನ ಚೀಟಿ ಕಳೆದು ಹೋದರೆ, ಇಲ್ಲದ ಪಾಡುಪಡಬೇಕಾಗುತ್ತದೆ. ಆದರೆ ಇದೀಗ ನೀವು ನಮ್ಮ ಮತದಾರರ ಕಾರ್ಡ್ ನ್ನು ಆನ್ ಲೈನ್ ಮೂಲಕವೇ ಡೌನ್ ನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಮೊದಲು ಡಿಜಿಟಲ್ ವೋಟರ್ ಐಡಿಗಾಗಿ ಮತದಾರರ ಪೋರ್ಟಲ್ voterportal.eci.gov.in ಗೆ ಹೆಸರು ನೋಂದಾಯಿಸಬೇಕು. ಇದಾದ ಬಳಿಕ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ https://www.nvsp.in/account/login ಗೆ ಲಾಗಿನ್ ಆಗಬೇಕು. ಬಳಿಕ ಇಪಿಐಸಿ ಸಂಖ್ಯೆ ಅಥವಾ ಫಾರ್ಮ್ ರೆಫರೆನ್ಸ್ ಸಂಖ್ಯೆಯನ್ನು ನಮೂದಿಸಬೇಕು. ಆಗ ನೋಂದಾಯಿತ ಸಂಖ್ಯೆಗೆ ಒಟಿಪಿ ಬರುತ್ತದೆ. ಒಟಿಪಿಯನ್ನು ವೆಬ್ ಪೋರ್ಟಲ್ ನಲ್ಲಿ ನಮೂದಿಸಬೇಕು. ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಇ-ಇಪಿಐಸಿ ಮೇಲೆ ಕ್ಲಿಕ್ ಮಾಡಬೇಕು.
ಆ ಬಳಿಕ ಡಿಜಿಟಲ್ ಮತದಾರರ ಐಡಿಯನ್ನು ಪಿಡಿಎಫ್ ರೂಪದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಇದಲ್ಲದೇ ಕಲರ್ ಮತ್ತು ಪ್ಲಾಸ್ಟಿಕ್ ಮತದಾರರ ಗುರುತಿನ ಚೀಟಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಮೊದಲು ಈ ಕಾರ್ಡ್ ಗಾಗಿ ನೀವು ಅರ್ಜಿಸಲ್ಲಿಸಬೇಕಾಗುತ್ತದೆ. ಕಾರ್ಡ್ ತಯಾರಿಕೆಗೆ 30 ರೂಪಾಯಿ ಖರ್ಚು ತಗಲಬಹುದು.
ಇನ್ನೂ ನಿಮಗೆ ವೋಟರ್ ಐಡಿಗೆ ಸಂಬಂಧಿಸಿದಂತೆ ಯಾವುದೇ ಅನುಮಾನಗಳಿದ್ದರೆ, ನೀವು ಟೋಲ್ ಫ್ರೀ ನಂಬರ್ 1950ಗೆ ಕರೆ ಮಾಡಿ ವಿಚಾರಿಸಬಹುದಾಗಿದೆ.
ಇನ್ನಷ್ಟು ಸುದ್ದಿಗಳು…
ಬೆಟ್ಟದಿಂದ ಉರುಳಿದ ಬೃಹತ್ ಬಂಡೆಗಳು: 9 ಮಂದಿ ಸಾವು | ಭಯಾನಕ ವಿಡಿಯೋ ವೈರಲ್
ಮಠಾಧಿಪತಿಗಳಿಗೆ ಸಿಎಂ ಆಗುವ ಕನಸು | ಮಠಾಧಿಪತಿಗಳನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಿ ಎಂದ ಸ್ವಾಮೀಜಿ
ಮಾಟಮಂತ್ರ ಮಾಡುತ್ತಿದ್ದಾಳೆಂದು ಆರೋಪಿಸಿ ಬುಡಕಟ್ಟು ಮಹಿಳೆಯ ಶಿರಚ್ಛೇದನ!
ಪ್ರೇಯಸಿಯ ಮನೆಗೆ ಬಂದಿದ್ದ ಯುವಕನನ್ನು ಥಳಿಸಿ, ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ!
ಯುವಕನ ಲಾಕಪ್ ಡೆತ್ ವಿರೋಧಿಸಿ ಪೊಲೀಸ್ ಠಾಣೆಗೆ ನುಗ್ಗಿದ ಗ್ರಾಮಸ್ಥರು | ಮಹಿಳಾ ಪೇದೆ ಸ್ಥಳದಲ್ಲಿಯೇ ಸಾವು