ಊರಿಗೆ ಹೋಗಲು ಬಸ್ ಸಿಗದೇ ಮತದಾರರ ಪರದಾಟ - Mahanayaka

ಊರಿಗೆ ಹೋಗಲು ಬಸ್ ಸಿಗದೇ ಮತದಾರರ ಪರದಾಟ

bus problem
09/05/2023

ಬೆಂಗಳೂರು: ಬೆಂಗಳೂರಿನಿಂದ ಸ್ವಕ್ಷೇತ್ರದ ಮತದಾನಕ್ಕೆ ತೆರಳಲು ಬಸ್ ಸಿಗದೇ ಜನರು ಪರದಾಡಿದ್ದು ಕಂಡುಬಂದಿತು.


Provided by

ಬುಧವಾರ ನಡೆಯಲಿರುವ ಚುನಾವಣೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಬಿಎಂಟಿಸಿ ಮತ್ತು ಕೆಎಸ್‌ ಆರ್‌ ಟಿಸಿ ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಮಂಗಳವಾರ ಕೇವಲ 4,900 ಬಸ್‌ ಗಳ ಸೇವೆಗಳಿದ್ದು, 3,700 ಬಸ್‌ಗಳು ಹಾಗೂ ಚಾಲಕರನ್ನು ಚುನಾವಣಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ.

ಇದರಿಂದಾಗಿ ಸ್ವಗ್ರಾಮಕ್ಕೆ ತೆರಳುವವರು ಬಸ್ ಸಿಗದೇ ಸಮಸ್ಯೆ ಎದುರಿಸುವಂತಾಯಿತು.ಬರುವ ಕೆಲವು ಬಸ್‌ಗಳ ತುಂಬಾ ಜನರಿದ್ದು, ಕುಳಿತುಕೊಳ್ಳಲು ಸೀಟ್ ಇಲ್ಲದೇ ಕೆಲವು ಪ್ರಯಾಣಿಕರು ಊರಿಗೆ ಹೋಗದೇ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.


Provided by

ಅನೇಕರು ತಮ್ಮ ಚಿಕ್ಕ ಮಕ್ಕಳನ್ನು ಕಿಟಕಿಯ ಮೂಲಕ ಒಳಗೆ ನುಗ್ಗಿಸಿ ತಮ್ಮ ಸೀಟನ್ನು ಕಾಯ್ದಿರಿಸಿದ್ದಾರೆ. ಇನ್ನುಳಿದ ಪ್ರಯಾಣಿಕರು ಮತದಾನ ಮಾಡಲೇಬೇಕು ಎಂಬ ಸಲುವಾಗಿ ಬರುವ ಕೆಲವೇ ಕೆಲವು ಬಸ್‌ ಗಳ ಮೇಲೇರಿ ಕುಳಿತು ಊರಿಗೆ ಪ್ರಯಾಣ ಬೆಳೆಸಿದ್ದು ಸಹ ಕಂಡು ಬಂದಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ