ಬುರ್ಖಾ ಧರಿಸಿ ಬಂದ ಮತದಾರರನ್ನು ಪರೀಕ್ಷೆಗೆ ಒಳಪಡಿಸಿ: ಬಿಜೆಪಿ ವಿವಾದಾತ್ಮಕ ಹೇಳಿಕೆ
ಉತ್ತರ ಪ್ರದೇಶದ 9 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು ಬುರ್ಖಾ ಧರಿಸಿ ಬಂದ ಮತದಾರರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿಯ ಮುಖಂಡ ಅಖಿಲೇಶ್ ಕುಮಾರ್ ಅವಸ್ತಿ ಈ ಕುರಿತಂತೆ ಪತ್ರ ಬರೆದಿದ್ದಾರೆ. ಇದೇ ವೇಳೆ ಬುರ್ಖಾ ಧರಿಸಿ ಬಂದ ಮತದಾರರ ಐಡಿ ಕಾರ್ಡ್ ಅನ್ನು ಪೊಲೀಸರು ಪರಿಶೀಲಿಸುತ್ತಿರುವ ಚಿತ್ರವನ್ನು ಸಮಾಜವಾದಿ ಪಕ್ಷ ಬಿಡುಗಡೆಗೊಳಿಸಿದೆ.
ಬುರ್ಖಾ ಧರಿಸಿದ ಇಬ್ಬರು ಯುವತಿಯರ ವೋಟರ್ ಐಡಿಯನ್ನು ಪರಿಶೀಲಿಸುವುದಕ್ಕೆ ಪೊಲೀಸರು ಮುಂದಾಗುತ್ತಿರುವುದು ವಿಡಿಯೋದಲ್ಲಿದೆ. ಇದೇ ವೇಳೆ ಹೀಗೆ ಮತದಾರರ ಐಡಿ ಕಾರ್ಡ್ ಅನ್ನು ತಪಾಸನೆ ನಡೆಸಿದ ಪೊಲೀಸರನ್ನು ಸಸ್ಪೆಂಡ್ ಮಾಡಿರುವುದಾಗಿ ಕಾನ್ಪುರ್ ಪೊಲೀಸ್ ಪ್ರತಿಕ್ರಯಿಸಿದೆ. ಚುನಾವಣೆಯ ವೇಳೆ ಕಾನ್ಪುರ ಪೊಲೀಸರು ಚುನಾವಣಾ ಆಯೋಗದ ನಿಯಂತ್ರಣದಲ್ಲಿದ್ದಾರೆ ಎಂದು ಕೂಡ ಕಾನ್ಪುರ ಪೊಲೀಸರು ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj