ಕೊರೊನಾದಿಂದ ಮೃತಪಟ್ಟ ವೃದ್ಧನ ಮೃತದೇಹದ ತಲೆಯಲ್ಲಿ ಗಾಯದ ಗುರುತು!
ಉತ್ತರಕನ್ನಡ: ಕೊರೊನಾ ಸೋಂಕಿನ ಶಂಕೆಯಿಂದ ಸಾವನ್ನಪ್ಪಿದ್ದ ವೃದ್ಧನ ಮೃತದೇಹದಲ್ಲಿ ಗಾಯ ಕಂಡು ಬಂದಿದ್ದು, ಇದರಿಂದ ಇದೀಗ ಹಲವು ಅನುಮಾನಗಳು ಸೃಷ್ಟಿಯಾಗಿವೆ.
70 ವರ್ಷ ವಯಸ್ಸಿನ ಮಂಜುನಾಥ ದ್ಯಾವ ಮಡಿವಾಳ ಅವರಿಗೆ ಮಂಗಳವಾರ ಉಸಿರಾಟದ ತೊಂದರೆ ಕಾಣಿಸಿತ್ತು. ಇದರಿಂದಾಗಿ ಅವರು ಶಿರಸಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಗೆ ದಾಖಲಿಸಿದ ಕೆಲವೇ ಹೊತ್ತಿನಲ್ಲಿ ಅವರು ಮೃತಪಟ್ಟಿದ್ದು, ಅವರ ಮೃತದೇಹವನ್ನು ಸಾಗಿಸಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಕೂಡ ಇಲ್ಲದ ಕಾರಣ ಖಾಸಗಿ ವಾಹನದಲ್ಲಿಯೇ ಮೃತದೇಹವನ್ನು ತರಲಾಗಿದೆ.
ವೃದ್ಧನ ಕುಟುಂಬಸ್ಥರು ಅಂತ್ಯಕ್ರಿಯೆಗೆ ರುಧ್ರಭೂಮಿಗೆ ತಂದ ವೇಳೆ ಪ್ಲಾಸ್ಟಿಕ್ ಚೀಲದೊಳಗಿದ್ದ ಮೃತದೇಹದ ತಲೆಯಿಂದ ರಕ್ತಸ್ರಾವವಾಗುತ್ತಿರುವುದು ಕಂಡು ಬಂದಿದೆ. ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವ ವೃದ್ಧನ ತಲೆಯಿಂದ ರಕ್ತಸ್ರಾವವಾಗಿದ್ದು ಹೇಗೆ? ಎಂಬ ಅನುಮಾನ ವ್ಯಕ್ತವಾಗಿದೆ.
ಇನ್ನೂ ಆಸ್ಪತ್ರೆಯವರು ವೃದ್ಧನ ಸಾವಿಗೆ ಕಾರಣ ಏನು ಎಂದು ತಿಳಿಸಿಲ್ಲ. ವೃದ್ಧನ ತಲೆಯಿಂದ ರಕ್ತ ಒಸರುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಜನರಲ್ಲಿ ಆತಂಕ ಮೂಡಿದೆ.