ವೃದ್ಧೆಯ ಹತ್ಯೆಗೆ ಬಿಗ್ ಟ್ವಿಸ್ಟ್:  ಸಂಬಂಧಿಕನಿಂದಲೇ ನಡೆಯಿತು ಕ್ರೂರ ಕೃತ್ಯ - Mahanayaka
4:19 AM Wednesday 11 - December 2024

ವೃದ್ಧೆಯ ಹತ್ಯೆಗೆ ಬಿಗ್ ಟ್ವಿಸ್ಟ್:  ಸಂಬಂಧಿಕನಿಂದಲೇ ನಡೆಯಿತು ಕ್ರೂರ ಕೃತ್ಯ

belal case
24/07/2022

ಬೆಳ್ತಂಗಡಿ:  ಬೆಳಾಲಿನಲ್ಲಿ ಮನೆಗೆ ನುಗ್ಗಿ ವೃದ್ದೆಯ ಹತ್ಯೆಗೈದು ಚಿನ್ನಾಭರಣಗಳನ್ನು ದರೋಡೆ ಮಾಡಿದ ಪ್ರಕರಣದ  ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ಕಾನರ್ಪ ನಿವಾಸಿ ಮೃತ ವೃದ್ದೆಯ ಸಂಬಂಧಿಕನಾಗಿರುವ   ಅಶೋಕ್( 28) ಎಂಬಾತನಾಗಿದ್ದಾನೆ.  ಈತ ವೃದ್ದೆಯ ಹತ್ಯೆಗೈದು ಚಿನ್ನಾಭರಣ ಹಾಗೂ ನಗದು ಅಪಹರಿಸಿ ಪರಾರಿಯಾಗಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತ ಕಳೆದ ಕೆಲ ದಿನಗಳಿಂದ ಇಲ್ಲಿ ಬಂದು  ಹೋಗುತ್ತಿದ್ದ ಎನ್ನಲಾಗಿದ್ದು, ಹಣಕ್ಕಾಗಿ ವೃದ್ದೆಯ ಹತ್ಯೆ ಮಾಡಿದ್ದಾನೆ. ಕೊಲೆ ನಡೆದ ಮನೆಯ ಸಮೀಪ ಈತ ಹೋಗುತ್ತಿರುವುದನ್ನು ಸ್ಥಳೀಯ ವ್ಯಕ್ತಿಯೋರ್ವ ಕಂಡಿದ್ದು , ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.  ಈ ಸುಳಿವನ್ನು ಅನುಸರಿಸಿ ಹುಡುಕಾಟ ನಡೆಸಿದಾಗ ಆರೋಪಿಯ ಬಗ್ಗೆ ಮಾಹಿತಿ ಲಭಿಸಿದ್ದು, ಆರೋಪಿಯನ್ಬು ಬಂಧಿಸಿದ್ದಾರೆ.

ಆರೋಪಿಯ ಹಿನ್ನಲೆ :

ಕೊಲೆ‌ ಮಾಡಿ ದರೋಡೆ ಮಾಡಿದ ಆರೋಪಿ  ಕಡುರುದ್ಯಾವರ ಗ್ರಾಮದ ಕಾನರ್ಪದ ಕುಮೇರು ಮನೆಯ ಅಶೋಕ್ ಆಗಿದ್ದ. ಈತ ಐಸ್ ಕ್ರೀಮ್ ವಾಹನದಲ್ಲಿ ಕೆಲಸ ಮಾಡಿಕೊಂಡಿದ್ದ. ಸಂಬಂಧಿಯಾಗಿದ್ದ ಕಾರಣ ಅಕ್ಕು ಮನೆಗೆ ಬಂದು ಹೋಗುತ್ತಿದ್ದ. ಈ ವೇಳೆ ಹಣ ಕೂಡ ಕೇಳಿ ಪಡೆದು ಹೋಗುತ್ತಿದ್ದ. ಈತನಿಗೆ ಕುಡಿಯುವ ಚಟ ಕೂಡ ಇದ್ದು, ಕೆಲ ಸಮಯದಿಂದ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದ , ಹಣ ಇಲ್ಲದ ಕಾರಣ ಇದೀಗ ಸಂಬಂಧಿಕರನ್ನೇ ಕೊಲೆ ಮಾಡಿ ದರೋಡೆ ಮಾಡಿದ್ದು,  ಇದರ ಹಣದಿಂದ ಮಜಾ ಮಾಡುವ ಮೊದಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾ‌ನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ