ಐಐಟಿ ಪ್ರೊಫೆಸರ್ ಎಂದು ನಂಬಿಸಿ ವೈದ್ಯೆಯನ್ನು ಮದುವೆಯಾದ ಗೂಡಂಗಡಿ ಮಾಲಿಕ ಅರೆಸ್ಟ್
ಚೆನ್ನೈ: ಐಐಟಿ ಮದ್ರಾಸ್ ನ ಪ್ರೊಫೆಸರ್ ಎಂದು ಸುಳ್ಳು ಹೇಳಿ ವೈದ್ಯೆಯನ್ನು ಮದುವೆಯಾದ ಗೂಡಂಗಡಿಯ ಮಾಲಿಕನನ್ನು ಪೋಲಿಸರು ಬಂಧಿಸಿದ ಘಟನೆ ನಡೆದಿದೆ.
ಚೆನ್ನೈ ಅಶೋಕ್ ನಗರ ಜಾಫರಖಾನಪೇಟೆ ವಿ. ಪ್ರಭಾಕರ (34) ಬಂಧಿತ ಆರೋಪಿಯಾಗಿದ್ದು, ಪ್ರಭಾಕರನ್ 2019 ರಲ್ಲಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದು,ಈ ಸಂಬಂಧದಲ್ಲಿ ಒಂದು ಮಗು ಇದೆ. ಇದೀಗ ವೈದ್ಯೆಯನ್ನು ವಂಚಿಸಿ ಮದುವೆಯಾಗಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ವರದಕ್ಷಿಣೆ ಪಡೆದು ಸಾಲ ತೀರಿಸುವ ಉದ್ದೇಶಿದಿಂದ ಈತ ಮದುವೆಯಾಗಿದ್ದ ಎನ್ನಲಾಗಿದೆ. ತಾನು ಐಐಟಿಯಲ್ಲಿ ಬಯೋಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕ ಎಂದು ಹೇಳಿಕೊಂಡಿರುವ ಪ್ರಭಾಕರನ್ ಯುವತಿ ಹಾಗೂ ಯುವತಿಯ ಪೋಷಕರನ್ನು ನಂಬಿಸಿದ್ದ.
ವರದಕ್ಷಿಣೆಯಾಗಿ 110 ಪವನ್ ಚಿನ್ನ, 15 ಲಕ್ಷ ಮೌಲ್ಯದ ಕಾರು ಹಾಗೂ 20 ಲಕ್ಷ ರೂ.ಗಳನ್ನು ಆರೋಪಿ ಪಡೆದುಕೊಂಡಿದ್ದ. ಮದುವೆಯ ನಂತರ ಅನುಮಾನಗೊಂಡ ಮಯೂರಿ ಪ್ರಶ್ನಿಸಿದಾಗ ಸಮಸ್ಯೆಗಳು ಪ್ರಾರಂಭವಾಗಿತ್ತು. ಇದರ ಬೆನ್ನಲ್ಲೇ ಪ್ರಭಾಕರನ್ ಮಯೂರಿಗೆ ದೈಹಿಕವಾಗಿ ಹಿಂಸೆ ನೀಡಲು ಆರಂಭಿಸಿದ್ದ ಎಂದು ಆರೋಪಿಸಲಾಗಿದೆ.
ಪ್ರಭಾಕರನ್ ಕುಟುಂಬ ಹಾಗೂ ಆತನ ಉದ್ಯೋಗದ ಬಗ್ಗೆ ಅನುಮಾನ ಮೂಡಿದಾಗ ಮಯೂರಿ ಐಐಟಿಯಲ್ಲಿ ವಿಚಾರಣೆ ನಡೆಸಿದ್ದು, ಈ ವೇಳೆ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.
ವರದಕ್ಷಿಣೆಯ ಚಿನ್ನ ಮಾರಿ ಪ್ರಭಾಕರ ಸಾಲ ತೀರಿಸಿ, ಮನೆ ರಿಪೇರಿ ಮಾಡಿ ಅಂಗಡಿ ಸುಧಾರಿಸಿಕೊಂಡಿದ್ದನು. ಮಯೂರಿ ಅಶೋಕ್ ನಗರ ಮಹಿಳಾ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಪ್ರಭಾಕರನನ್ನು ಬಂಧಿಸಲಾಗಿದೆ. ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka