ಮೃತಪಟ್ಟ ಹುಲಿಯ ಕೊರಳು, ಕಾಲಲ್ಲಿ ತಂತಿ: ವ್ಯಾಘ್ರನ ಕೊಂದರೇ ಹುಲಿ ಹಂತಕರು…!?
ಚಾಮರಾಜನಗರ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರ ವಲಯದ ವ್ಯಾಪ್ತಿಗೆ ಒಳಪಡುವ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರದ ಕೆರೆಯಲ್ಲಿ ಸಿಕ್ಕ ಹುಲಿ ಕಳೇಬರ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ಸಾಮಾನ್ಯವಾಗಿ ಕಾಡುಪ್ರಾಣಿಗಳು ತೀರಾ ದಣಿದು ನೀರು ಕುಡಿದ ವೇಳೆ ಹೃದಯಾಘಾತದಿಂದ ಮೃತಪಡುತ್ತವೆ. ಮೇಲ್ನೋಟಕ್ಕೆ ಇದೇ ಕಾರಣ ಎಂದು ಶಂಕಿಸಲಾಗಿತ್ರು ಆದರೆ, ಬುಧವಾರ ಹುಲಿ ಕಳೇಬರವನ್ನು ಮೇಲಕ್ಕೆತ್ತಿದ ವೇಳೆ, ಅದರ ಕೊರಳಲ್ಲಿ ಮತ್ತು ಕಾಲುಗಳಲ್ಲಿ ತಂತಿ ಸಿಕ್ಕಿಹಾಕಿಕೊಂಡಿರುವುದು ಹುಲಿ ಹಂತಕರ ಮೇಲೆ ಅನುಮಾನ ಮೂಡಿದೆ.
ಹುಲಿಯ ಕಾಲಿಗೆ ತಂತಿಯಿಂದ ಕಲ್ಲು ಕಟ್ಟಿ ಕೆರೆಗೆ ಎಸೆದಿರುವುದು ಮೇಲ್ನೋಟಕ್ಕೆ ಖಚಿತವಾಗಿದ್ದು, ಬೇರೆ ಸ್ಥಳದಲ್ಲಿ ಮೃತಪಟ್ಟಿರುವ ಹುಲಿಯನ್ನು ಕೆರೆಗೆ ತಂದು ಬಿಸಾಡಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಉರುಳಿನಿಂದ ಮೃತಪಟ್ಟಿಲ್ಲ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರು ಧೃಡಪಡಿಸಲಾಗಿದ್ದು ಇನ್ಯಾವ ರೀತಿಯಲ್ಲಿ ಇದನ್ನು ಕೊಂದಿರಬಹುದು ಎಂಬ ಜಿಜ್ಞಾಸೆ ಅಧಿಕಾರಿಗಳದ್ದಾಗಿದೆ.
ಎರಡು ಮೂರು ದಿನಗಳಿಂದ ಕೆರೆ ನೀರಿನಲ್ಲಿ ದೇಹ ಕೊಳೆತದ್ದರಿಂದ ಮರಣೋತ್ತರ ಪರೀಕ್ಷೆ ಯಲ್ಲಿ ಸಾವಿಗೆ ನಿಕರವಾದ ಕಾರಣ ಕಂಡು ಹಿಡಿಯಲು ಆಗಿಲ್ಲ, ಹುಲಿಯ ಅಂಗಾಂಗಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವನ್ಯಪ್ರಾಣಿ ವೈದ್ಯ ವಾಸೀಂ ಮೀರ್ಜಾ ಮಾಹಿತಿ ಕೊಟ್ಟಿದ್ದಾರೆ.
ಹುಲಿಯ ಸಾವಿನ ಬಗ್ಗೆ ಖಚಿತ ಮಾಹಿತಿ ಪಡೆಯಲು ಮತ್ತು ಆರೋಪಿಗಳ ಬಂಧನಕ್ಕಾಗಿ ತಂಡವನ್ನು ರಚಿಸಲಾಗುವುದು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ.
ಮೃತಪಟ್ಟಿರುವ ಹುಲಿ ಗಂಡಾಗಿದ್ದು 5 ವರ್ಷ ಬರಬಹುದು ಎಂದು ಅಂದಾಜು ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಎನ್ಟಿಸಿಎ ನಿರ್ದೇಶನದಂತೆ ಕಳೇಬರ ಸುಡಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw