ವ್ಯಕ್ತಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ: ತಂದೆ ಮಗನ ಬಂಧನ - Mahanayaka
10:06 PM Thursday 12 - December 2024

ವ್ಯಕ್ತಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ: ತಂದೆ ಮಗನ ಬಂಧನ

halle
17/08/2022

ಮಂಗಳೂರು: ವ್ಯಕ್ತಿಗೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ತಂದೆ, ಮಗನನ್ನು ಬಂಧಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ.

ಮಂಗಳೂರು, ನಗರದ ಬೋಳೂರಿನ ನವೀನ್ ಸಾಲ್ಯಾನ್ ಎಂಬುವವರಿಗೆ ಬೋಳೂರು ಜಾರಂದಾಯ ದೇವಸ್ಥಾನದ ಬಳಿ ಮಂಗಳವಾರ ಸಂಜೆ ಸ್ಥಳೀಯರಾದ ದೇವದಾಸ್ ಬೋಳೂರು ಮತ್ತವನ ಮಗ ಸಾಯಿ ಕಿರಣ್  ಎಂಬವರು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಗಾಯಗೊಂಡ ನವೀನ್ ಸಾಲ್ಯಾನ್ ಅವರನ್ನು ಮಂಗಳೂರು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ‌. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದೇವದಾಸ್ ಬೋಳೂರು ಮತ್ತವನ ಮಗ ಸಾಯಿ ಕಿರಣ್‌ ನನ್ನು ಪೊಲೀಸರು ಬಂಧಿಸಿದ್ದಾರೆ‌.

ಈ ಘಟನೆಗೆ ಬೋಳೂರು ಮೊಗವೀರ ಮಹಾಸಭಾ ಸಂಘದ ಆಡಳಿತದ ಭಿನ್ನಾಭಿಪ್ರಾಯ ಹಾಗೂ ಹಳೆ  ದ್ವೇಷವೇ ಕಾರಣ ಎನ್ನಲಾಗಿದೆ‌. ಆರೋಪಿಗಳ ವಿರುದ್ಧ ಕೊಲೆಯತ್ನ ಸಹಿತ ವಿವಿಧ ಪ್ರಕರಣ ದಾಖಲಾಗಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ