ವ್ಯಕ್ತಿಯ ಮೂಗಿನಿಂದ 6 ಇಂಚು ಉದ್ದದ ಜಿಗಣೆ ಹೊರ ತೆಗೆದ ವೈದ್ಯರು!
ವ್ಯಕ್ತಿಯೊಬ್ಬರ ಮೂಗಿನಿಂದ ಸುಮಾರು 6 ಇಂಚು ಉದ್ದದ ಜಿಗಣೆಯೊಂದನ್ನು ವೈದ್ಯರು ಯಶಸ್ವಿಯಾಗಿ ಹೊರ ತೆಗೆದ ಅಚ್ಚರಿಯ ಘಟನೆಯೊಂದು ಉತ್ತರಾಖಂಡ್ ನಲ್ಲಿ ನಡೆದಿದೆ.
ಡೆಹ್ರಾಡೂನ್ ನ ತೆಹ್ರಿ ಹಿಂದೋಲಾಖಾಲ್ ಬ್ಲಾಕ್ ನಿವಾಸಿ ರಾಮಲಾಲ್ (55) ಎಂಬವರಿಗೆ ಕಳೆದ ಕೆಲವು ವಾರಗಳಿಂದ ಮೂಗಿನೊಳಗೆ ತೀವ್ರವಾದ ನೋವು ಹಾಗೂ ಕಚ್ಚಿ ಎಳೆದಂತಹ ಅನುಭವವಾಗುತ್ತಿತ್ತು. ಹೀಗಾಗಿ ಹಲವು ವೈದ್ಯರ ಬಳಿಗೆ ಹೋದರೂ ಸಮಸ್ಯೆ ನಿವಾರಣೆಯಾಗಿರಲಿಲ್ಲ.
ಕೊನೆಗೆ ಅವರು ಶ್ರೀನಗರದಲ್ಲಿ ಇಎನ್ ಟಿ ವೈದ್ಯರೊಬ್ಬರನ್ನು ಭೇಟಿಯಾಗಿದ್ದು, ಈ ವೇಳೆ ಅವರು ಮೂಗನ್ನು ಪರಿಶೀಲಿಸಿದಾಗ ಮೂಗಿನೊಳಗೆ ಜಿಗಣೆ ವಾಸವಿರುವುದು ಪತ್ತೆಯಾಗಿತ್ತು.
ಮೂಗಿನೊಳಗೆ ಜಿಗಣೆಯನ್ನು ಕಂಡ ವೈದ್ಯರೇ ಶಾಕ್ ಆಗಿದ್ದು, ಕೊನೆಗೆ ಜಿಗಣೆಯನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಸದ್ಯ ಅವರ ಆರೋಗ್ಯ ಸುಧಾರಿಸಿದೆ.
ರಾಮಲಾಲ್ ಅವರ ಮೂಗಿನೊಳಗೆ ಹೇಗೆ ಜಿಗಣೆ ಪ್ರವೇಶಿಸಿತು ಅನ್ನೋದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಗುಡ್ಡಗಾಡು ಪ್ರದೇಶಕ್ಕೆ ತೆರಳಿದ್ದ ವೇಳೆ ಮೂಗಿಗೆ ಸೇರಿಕೊಂಡಿರಬಹುದು ಎಂದು ಹೇಳಲಾಗಿದೆ. ಆದರೂ ಇಷ್ಟೊಂದು ದೊಡ್ಡ ಜಿಗಣೆ ಮೂಗಿಗೆ ಹೋದರೂ ಅವರಿಗೆ ತಿಳಿಯಲಿಲ್ಲವೇ ಅನ್ನೋ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw