ವ್ಯಾಪಾರಿಗಳ ತರಕಾರಿಗಳನ್ನು ಕಾಲಿನಿಂದ ಒದ್ದು ಅಮಾನವೀಯತೆ ಮೆರೆದ ಪಿಎಸ್‌ ಐ ಅಮಾನತು - Mahanayaka
7:22 PM Saturday 14 - December 2024

ವ್ಯಾಪಾರಿಗಳ ತರಕಾರಿಗಳನ್ನು ಕಾಲಿನಿಂದ ಒದ್ದು ಅಮಾನವೀಯತೆ ಮೆರೆದ ಪಿಎಸ್‌ ಐ ಅಮಾನತು

psi ajam
20/06/2021

ರಾಯಚೂರು: ನಗರದ ರಸ್ತೆ ಪಕ್ಕದಲ್ಲಿ ಭಾನುವಾರ ತರಕಾರಿ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಧಾವಿಸಿ, ಕಾಲಿನಿಂದ ತರಕಾರಿಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಅಸಭ್ಯವಾಗಿ ವರ್ತಿಸಿದ ಸದರ್ ಬಜಾರ್ ಠಾಣೆಯ ಪಿಎಸ್‌ ಐ ಆಜಮ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ‌ಅವರು ಸೇವೆಯಿಂದ ಅಮಾನತು ಮಾಡಿದ್ದಾರೆ.

ವಾರಾಂತ್ಯ ಲಾಕ್ ಡೌನ್ ಜಾರಿ ಇದ್ದರೂ ನಗರದ ಚಂದ್ರಮೌಳೇಶ್ವರ ವೃತ್ತದಲ್ಲಿ ಕೆಲವು ಗ್ರಾಮೀಣ ಭಾಗದ ತರಕಾರಿ ವ್ಯಾಪಾರಿಗಳು ಕುಳಿತುಕೊಂಡಿದ್ದರು. ಪೊಲೀಸ್ ವಾಹನದಲ್ಲಿ ಸ್ಥಳಕ್ಕೆ ಆಗಮಿಸಿದ ಪಿಎಸ್‌ ಐ ಅವರು ಕೊತ್ತಂಬರಿ ಸೊಪ್ಪು, ನಿಂಬೆಹಣ್ಣು ಹಾಗೂ ಟೊಮೆಟೊ ಹಾಗೂ ಇತರೆ ಸೊಪ್ಪಿನ ತರಕಾರಿಗಳನ್ನು ಕಾಲಿನಿಂದ ಒದೆಯುತ್ತಿರುವ ವಿಡಿಯೋ ತುಣುಕುಗಳು ವೈರಲ್ ಆಗಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿ