ಭಾರತದ ಪ್ರತಿ ತಿಂಗಳಿನ ವೇತನ ಪಾಕಿಸ್ತಾನ, ನೈಜೀರಿಯಾಕ್ಕಿಂತಲೂ ಕೆಳಗಿದೆ: ವೆಲೋ ಸಿಟಿ ಗ್ಲೋಬಲ್ ವರದಿ - Mahanayaka

ಭಾರತದ ಪ್ರತಿ ತಿಂಗಳಿನ ವೇತನ ಪಾಕಿಸ್ತಾನ, ನೈಜೀರಿಯಾಕ್ಕಿಂತಲೂ ಕೆಳಗಿದೆ: ವೆಲೋ ಸಿಟಿ ಗ್ಲೋಬಲ್ ವರದಿ

16/07/2024

ಭಾರತದ ಪ್ರತಿ ತಿಂಗಳಿನ ವೇತನ ಪಾಕಿಸ್ತಾನ ಮತ್ತು ನೈಜೀರಿಯಾ ಮುಂತಾದ ರಾಷ್ಟ್ರಗಳಿಗಿಂತಲೂ ಕೆಳಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ವೆಲೋ ಸಿಟಿ ಗ್ಲೋಬಲ್ 2024 ವರದಿಯಲ್ಲಿ ಈ ವೇತನದ ಕುರಿತಂತೆ ಮಾಹಿತಿಗಳಿವೆ.

ಜಗತ್ತಿನಲ್ಲಿಯೇ ಅತಿ ಕಡಿಮೆ ವೇತನ ಇರುವ 10 ರಾಷ್ಟ್ರಗಳ ಪಟ್ಟಿಯನ್ನು ಕಾಂಗ್ರೆಸ್ ಮುಖಂಡ ಪವನ್ ಕೇರ ಹಂಚಿಕೊಂಡಿದ್ದು ಮೋದಿ ಸರಕಾರವನ್ನು ಕಟಕಟೆಯಲ್ಲಿ ನಿಲ್ಲಿಸಿದ್ದಾರೆ.

ಈ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅತ್ಯಂತ ಕೆಳಗಿನ ಸ್ಥಾನದಲ್ಲಿದೆ. ಭಾರತದಲ್ಲಿ ಕನಿಷ್ಠ ವೆಂದರೆ ತಿಂಗಳಿಗೆ 45 ಡಾಲರ್ ವೇತನ ಸಿಗುತ್ತಿದೆ. ಅಂದರೆ ಸುಮಾರು 3760 ರೂಪಾಯಿ. ಇದೇ ವೇಳೆ ನೈಜೀರಿಯಾದಲ್ಲಿ 6351 ರೂಪಾಯಿ ಪ್ರತಿ ತಿಂಗಳಿಗೆ ವೇತನ ಸಿಗುತ್ತಿದ್ದರೆ ಪಾಕಿಸ್ತಾನದಲ್ಲಿ 9526 ವೇತನ ಸಿಗುತ್ತಿದೆ ಎಂದು ಅವರು ಹೇಳಿದ್ದಾರೆ. ಭಾರತಕ್ಕಿಂತ ಕೆಳಗಿನ ಸ್ಥಾನದಲ್ಲಿ ಶ್ರೀಲಂಕಾ ಮತ್ತು ಕಿರ್ಗಿಸ್ತಾನ ಇರುವುದನ್ನು ಕೂಡ ಅವರು ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಪ್ರತಿ ತಿಂಗಳ ವೇತನ ಪಾಕಿಸ್ತಾನ ಮತ್ತು ನೈಜೀರಿಯಾ ಕ್ಕಿಂತಲೂ ಕೆಳಗಡೆ ಇದೆ ಎಂಬ ಈ ಮಾಹಿತಿಯು ಭಾರತೀಯರ ದುರ್ಬರ ಸ್ಥಿತಿಯನ್ನು ತೋರಿಸುತ್ತದೆ. ಜಿಡಿಪಿ ವೃದ್ಧಿಯನ್ನು ತೋರಿಸುತ್ತಾ ಭಾರತ ಜಗತ್ತಿನಲ್ಲಿ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿ ಎಂಬ ಕನಸನ್ನು ಕಟ್ಟುತ್ತಾ ಪ್ರಧಾನಿ ತಿರುಗುತ್ತಿದ್ದಾರೆ. ಆದರೆ ವಾಸ್ತವ ಇದಕ್ಕೆ ಭಿನ್ನವಾಗಿದೆ ಎಂದು ಪವನ್ ಕೇರ ಹೇಳಿದ್ದಾರೆ.


Advertisement

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ