ಕಾರಾಗೃಹದ ಗೋಡೆ ಕುಸಿದು 22 ಕೈದಿಗಳಿಗೆ ಗಂಭೀರ ಗಾಯ! - Mahanayaka
6:19 AM Thursday 12 - December 2024

ಕಾರಾಗೃಹದ ಗೋಡೆ ಕುಸಿದು 22 ಕೈದಿಗಳಿಗೆ ಗಂಭೀರ ಗಾಯ!

madhya pradesh jail
31/07/2021

ಮಧ್ಯಪ್ರದೇಶ: ಎಡೆ ಬಿಡದೇ ಸುರಿದ ಮಳೆಯ ಕಾರಣ ಕಾರಾಗೃಹದ ಗೋಡೆ ಕುಸಿದಿದ್ದು, ಪರಿಣಾಮವಾಗಿ 22 ಕೈದಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಶನಿವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಕಾರಾಗೃಹದ ಕೊಠಡಿ ಸಂಖ್ಯೆ 6ರ ಗೋಡೆ ಕುಸಿದಿದೆ. ಘಟನೆಯಲ್ಲಿ 22 ಕೈದಿಗಳು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಆತನನ್ನ ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್ ಗೆ ಕರೆದೊಯ್ಯಲಾಗಿದೆ ಎಂದು ಭಿಂದ್ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.

ಘಟನೆಯ ಸಂದರ್ಭದಲ್ಲಿ 255 ಕೈದಿಗಳಿದ್ದರು.  ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಕಾರಾಗೃಹ ಕಟ್ಟಡವು ಸಾಕಷ್ಟು ಹಳೆಯದ್ದಾಗಿದ್ದರಿಂದಾಗಿ ತೀವ್ರ ಮಳೆಯ ಹಿನ್ನೆಲೆಯಲ್ಲಿ ಕುಸಿದು ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಘಟನೆಯು ಕಾರಾಗೃಹದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ. ಇನ್ನೂ ಘಟನೆ ಸಂಬಂಧ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ಕುರಿ, ಕೋಳಿ, ಮೀನಿನ ಬದಲು ಗೋಮಾಂಸ ಸೇವಿಸಿ ಎಂದು ಕರೆ ನೀಡಿದ ಬಿಜೆಪಿ ಸಚಿವ!

ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಸಿಡಿ ಭೀತಿ!

ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡ ಬಾಲಕ ಆತ್ಮಹತ್ಯೆಗೆ ಶರಣು

46.1 ಲಕ್ಷ ಮೊಬೈಲ್ ಬಳಕೆದಾರರನ್ನು ಕಳೆದುಕೊಂಡ ಏರ್ ಟೆಲ್!

ವಿಚ್ಛೇದನದ ಬಳಿಕ ಜೊತೆಯಾಗಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ಸಹೋದರಿಯರ ಬರ್ಬರ ಹತ್ಯೆ!

ಸೆಕ್ಸ್ ವಿಡಿಯೋ ತಯಾರಿಸುವುದು ಕೂಡ ಒಂದು ಉದ್ಯೋಗ | ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ

ಬಿ.ಎಲ್.ಸಂತೋಷ್ ಗೆ ಸಿಎಂ ಸ್ಥಾನ ಇಲ್ಲ? | ಸಿಎಂ ಸ್ಥಾನ ಕೈತಪ್ಪಲು ಜವಾಬ್ದಾರಿಗಳೇ ಕಾರಣವಾಗುತ್ತಾ?

ಇತ್ತೀಚಿನ ಸುದ್ದಿ