ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಫ್ಘಾನಿಸ್ತಾನಕ್ಕೆ ಹೋಗಿ ಎಂದ ಬಿಜೆಪಿ ನಾಯಕ!
ನವದೆಹಲಿ: ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ನೀವು ತಾಲಿಬಾನ್ ಹಿಡಿತದಲ್ಲಿರುವ ಅಫ್ಘಾನಿಸ್ತಾನಕ್ಕೆ ಹೋಗಿ ಎಂದು ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ಹೇಳಿಕೆ ನೀಡಿದ್ದು, ಇದೀಗ ಸಾರ್ವಜನಿಕರನ್ನು ತೀವ್ರವಾಗಿ ಕೆರಳಿಸಿದೆ.
ಬಿಜೆಪಿ ನಾಯಕ ರಾಮ್ ರತನ್ ಪಾಯಲ್ ಈ ಹೇಳಿಕೆ ನೀಡಿದ್ದು, ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಪೆಟ್ರೋಲ್ ದರದ ಬಗ್ಗೆ ಪ್ರಶ್ನಿಸಿದ ವೇಳೆ ತಾಲಿಬಾನ್ ಆಡಳಿತ ಇರುವ ಅಫ್ಘಾನಿಸ್ತಾನಕ್ಕೆ ಹೋಗಿ ಎಂದು ಬೇಜವಾಬ್ದಾರಿತನದ ಹೇಳಿಕೆಯನ್ನು ನೀಡಿದ್ದಾರೆ.
ನೀವು ತಾಲಿಬಾನ್ ನಿಂದ ಪೆಟ್ರೋಲ್ ತನ್ನಿ ಅಲ್ಲಿ ಪೆಟ್ರೋಲ್ ಕೇವಲ 50 ರೂಪಾಯಿಗೆ ಸಿಗುತ್ತದೆ. ಆದರೆ, ಅಲ್ಲಿ ಅದನ್ನು ಬಳಸಲು ಯಾರೂ ಇಲ್ಲ. ಇಲ್ಲಿ ಕನಿಷ್ಠ ಪಕ್ಷ ಸುರಕ್ಷತೆ ಆದರೂ ಇದೆ ಎಂದು ಹೇಳಿಕೆ ನೀಡುವ ಮೂಲಕ ಸಾರ್ವಜನಿಕರನ್ನು ರೊಚ್ಚಿಗೆಬ್ಬಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣವೇ ನಟಿಯ ಬೆಡ್ ರೂಂ ದೃಶ್ಯ ವೈರಲ್ ! | ನಟಿಯ ಪ್ರತಿಕ್ರಿಯೆ ಏನು?
ಬಿಜೆಪಿಯ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಕಳ್ಳರ ಕಾಟ | ಕಾರ್ಯಕರ್ತರ ಜೇಬಿಗೆ ಕತ್ತರಿ
ಅಫ್ಘಾನ್ ನಲ್ಲಿ ತಾಲಿಬಾನಿಗಳ ವಿಜಯ: ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು | ತಜ್ಞರ ಎಚ್ಚರಿಕೆ
ಲೈಂಗಿಕ ಬಯಕೆ ಈಡೇರಿಸಲು ಹೋಗುತ್ತಿದ್ದ ಪುರುಷರಿಗೆ ಬಿಗ್ ಶಾಕ್ ನೀಡುತ್ತಿದ್ದ ಮಹಿಳೆಯರು !