ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು: ಗಿರಿಜಾದೇವಿಗೆ ಪತ್ರ ಬರೆದ ಭಕ್ತ!
“ತಾಯಿ…. ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು” ಹೀಗೆಂದು ಭಕ್ತನೋರ್ವ ದೇವರಿಗೆ ಬೇಡಿಕೆಯಿಟ್ಟ ಘಟನೆ ನಡೆದಿದ್ದು, ಯುವಕ ತಾನು ಪ್ರಪಂಚದಲ್ಲೇ ಸರ್ವ ಸುಂದರನಾಗಬೇಕು ಎಂದು ಹಂಬಲಿಸಿ ತಾಯಿ ಗಿರಿಜಾದೇವಿಗೆ ಪತ್ರ ಬರೆದಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ಕಳಸದ ಕಳಸೇಶ್ವರ ಸ್ವಾಮಿಯ ಕಾಣಿಕೆ ಹುಂಡಿಯಲ್ಲಿ ಈ ಪತ್ರ ದೊರಕಿದೆ. ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು, ನನ್ನ ಸೌಂದರ್ಯದ ಹೊಣೆ ನಿಮ್ಮ ಜವಾಬ್ದಾರಿ, ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು ಎಂದು ಯುವಕ ತನ್ನ ಪತ್ರದಲ್ಲಿ ದೇವರಿಗೆ ಬೇಡಿಕೆ ಇಟ್ಟಿದ್ದಾನೆ.
ರಕ್ಷಿತ್ ಎಂಬ ಹೆಸರಿನಲ್ಲಿ ಯುವಕ ಪತ್ರ ಬರೆದಿದ್ದಾನೆ. ಸರ್ವ ಸುಂದರಿಯಾದ ಗಿರಿಜಾದೇವಿಯಿಂದ ಆಶೀರ್ವಾದ ಬಯಸುತ್ತೇನೆ, ನನ್ನ ಕನಸನ್ನ ನನಸು ಮಾಡುವ ಜವಾಬ್ದಾರಿ ನಿಮ್ಮದು…! ಈ ನಿನ್ನ ಭಕ್ತನ ಬೇಡಿಕೆ, ಪ್ರಾರ್ಥನೆಯನ್ನ ಈಡೇರಿಸು ತಾಯಿ ಎಂದು ಭಕ್ತ ದೇವರಿಗೆ ಪತ್ರ ಬರೆದಿದ್ದಾನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw