ವಕ್ಫ್ ಬಿಲ್ ತಿದ್ದುಪಡಿ ವಿವಾದ: ಹೊಸ ಹೋರಾಟಕ್ಕಿಳಿದ ಮುಸ್ಲಿಂ ಪರ್ಸನಲ್ ಲಾ ಬೋರ್ಡ್

ವಕ್ಫ್ ಬಿಲ್ ಮತ್ತು ಸಮಾನ ನಾಗರಿಕ ಸಂಹಿತೆಯ ಮೂಲಕ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ತರಲು ಹೊರಟಿರುವ ಪ್ರಭುತ್ವದ ನೀತಿಯನ್ನು ವಿರೋಧಿಸುವುದಕ್ಕಾಗಿ ಸಿಖ್ ದಲಿತ್ ಮತ್ತು ಇತರ ಬುಡಕಟ್ಟು ಸಮುದಾಯಗಳನ್ನು ಒಳಗೊಂಡ ವಿಶಾಲ ಒಕ್ಕೂಟವನ್ನು ರಚಿಸಲು ಆಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮುಂದಾಗಿದೆ.
ತಮ್ಮ ಹಕ್ಕುಗಳ ರಕ್ಷಣೆಗಾಗಿ ಈ ದಮನಿತ ಸಮುದಾಯಗಳು ಜಂಟಿ ಅಭಿಯಾನವನ್ನ ಆರಂಭಿಸಿವೆ.
ಈ ದೇಶದಲ್ಲಿರುವ ದಮನಿತ ಸಮುದಾಯದ 85 ಶೇಕಡ ಜನರು ಕೂಡ ಅಸುರಕ್ಷಿತ ಯ ಭಾವವನ್ನು ಹೊಂದಿದ್ದಾರೆ. ಅವರ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ದಾಳಿ ಆಗುತ್ತಿದೆ. ಇವರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಪ್ರಭುತ್ವ ದಮನಿಸುತ್ತಿದೆ. ಆದರೆ ನಾವು ಎಂದೂ ಶರಣಾಗಲಾರೆವು. ನಮ್ಮ ಕೊನೆಯ ಉಸಿರಿನ ತನಕ ನಾವು ಹೋರಾಡುತ್ತೇವೆ ಎಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಉಪಾಧ್ಯಕ್ಷ ಮೌಲಾನ ಆಜ್ಮಿ ಹೇಳಿದ್ದಾರೆ.
ಸಿಖ್ ಪರ್ಸನಲ್ ಬೋರ್ಡ್ ಮತ್ತು ಇತರ ಸಮುದಾಯಗಳ ವೈಯಕ್ತಿಕ ಹಕ್ಕುಗಳ ಮಂಡಳಿಯ ಜೊತೆ ಸೇರಿ ಫೆಬ್ರವರಿ 16ರಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿರುವ ಅಭಿಯಾನ ಎಂದು ಈ ಕಾರ್ಯಗಾರಕ್ಕೆ ಹೆಸರಿಟ್ಟಿತ್ತು.
ಸಿಖ್ ಪರ್ಸನಲ್ ಬೋರ್ಡ್ ಸಹಿತ ಹಲವು ಮುಖಂಡರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಹಕ್ಕುಗಳಿಗಾಗಿ ಜಂಟಿ ಹೋರಾಟದ ಕರೆ ನೀಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj