ದುರ್ಗಾ ಪೂಜಾ ಪೆಂಡಾಲ್ ಭೇಟಿ ವಿಚಾರ: ಎಎಪಿ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಡುವೆ ವಾಕ್ಸಮರ
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ. ಕೆ. ಸಕ್ಸೇನಾ ಅವರು ಸಿಆರ್ ಪಾರ್ಕ್‌ನಲ್ಲಿರುವ ದುರ್ಗಾ ಪೂಜಾ ಮಂಟಪಕ್ಕೆ ಭೇಟಿ ನೀಡಿದ ನಂತರ ಎಎಪಿ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಡುವೆ ಮಾತಿನ ಚಕಮಕಿ ನಡೆದಿದೆ. ಎಎಪಿ ನಾಯಕ ಮತ್ತು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಮಾತನಾಡಿ, ವಿಐಪಿಗಳ ಸಂಚಾರದಿಂದಾಗಿ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದರಿಂದ ಸಾವಿರಾರು ಜನರು ಸಿಆರ್ ಪಾರ್ಕ್ ತಲುಪಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಅಕ್ಟೋಬರ್ 10ರಂದು ಸಿ. ಆರ್. ಪಾರ್ಕಲ್ಲಿ ನಡೆದ ದುರ್ಗಾ ಪೂಜಾ ಉತ್ಸವಕ್ಕೆ ಭೇಟಿ ನೀಡಲು ಮತ್ತು ಭಾಗವಹಿಸಲು ಸಾವಿರಾರು ಜನರಿಗೆ ಸಾಧ್ಯವಾಗಲಿಲ್ಲ ಎಂದು ಭಾರದ್ವಾಜ್ ಹೇಳಿದ್ದಾರೆ. ಸಿಆರ್ ಪಾರ್ಕ್ ದೆಹಲಿ ಸಚಿವರ ಕ್ಷೇತ್ರದ ಒಂದು ಭಾಗವಾಗಿದೆ.
ನಿನ್ನೆ ಮೊದಲ ಬಾರಿಗೆ ಸಾವಿರಾರು ಜನರು ಸಂಜೆ ಸಿಆರ್ ಪಾರ್ಕ್ ದುರ್ಗಾ ಪೂಜೆಗೆ ತಲುಪಲು ಸಾಧ್ಯವಾಗಲಿಲ್ಲ. ನಿನ್ನೆ ವಿಐಪಿಯಿಂದಾಗಿ ಇಡೀ ಸಂಜೆ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಸಾರ್ವಜನಿಕರಿಗೆ ಈ ರೀತಿ ಕಿರುಕುಳ ನೀಡುವುದು ಸರಿಯಲ್ಲ ಎಂದು ನಾನು ಅವರನ್ನು ವಿನಂತಿಸುತ್ತೇನೆ” ಎಂದು ಭಾರದ್ವಾಜ್ ಕಿಡಿಕಾರಿದ್ದಾರೆ.
ಜನರು ಈ ಪ್ರದೇಶಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಭಾರದ್ವಾಜ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ ನಿವಾಸ್ ಕಚೇರಿಯು, ದಾಖಲೆಯ ಸಂಖ್ಯೆಯ ಜನರು ಆಗಮಿಸಿದ್ದರು. ಮತ್ತು ಲೆಫ್ಟಿನೆಂಟ್ ಗವರ್ನರ್ ಅವರೊಂದಿಗೆ ಉತ್ಸವಗಳಲ್ಲಿ ಭಾಗವಹಿಸಿದರು ಎಂದು ಹೇಳಿದೆ.
ಸಿಆರ್ ಪಾರ್ಕಲ್ಲಿರುವ ಜನರು ರಸ್ತೆಗಳ ಕಳಪೆ ಸ್ಥಿತಿಯ ಬಗ್ಗೆ ವಿ. ಕೆ. ಸಕ್ಸೇನಾ ಅವರಿಗೆ ದೂರು ನೀಡಿದ್ದಾರೆ. ಇದರಿಂದಾಗಿ ಅವರಲ್ಲಿ ಕೆಲವರು ಸಂಚಾರ ದಟ್ಟಣೆಯಲ್ಲಿ ಗಂಟೆಗಳ ಕಾಲ ಕಾಯಬೇಕಾಯಿತು ಎಂದು ರಾಜ್ ನಿವಾಸ್ ಕಚೇರಿಯು ಹೇಳಿಕೊಂಡಿದೆ.
“ಈ ಪ್ರದೇಶದ ರಸ್ತೆಗಳ ಕಳಪೆ ಸ್ಥಿತಿಯು ಪ್ರತಿದಿನ ಗಂಟೆಗಳ ಕಾಲ ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ. ಜೊತೆಗೆ ಒಳಚರಂಡಿ ಉಕ್ಕಿ ಹರಿಯುವಿಕೆ ಮತ್ತು ಕಸದಿಂದಾಗಿ ಜೀವನ ನರಕವಾಗಿದೆ ಎಂದು ಸಾವಿರಾರು ಜನರು ವಿಐಪಿಗೆ ತಿಳಿಸಿದರು. ಪತ್ರಿಕಾಗೋಷ್ಠಿಯಿಂದಾಗಿ ಸ್ಥಳೀಯ ವಿವಿಐಪಿ ನಾಯಕ ಗೈರು ಹಾಜರಾಗಿದ್ದಾರೆ “ಎಂದು ರಾಜ್ ನಿವಾಸ್ ಕಚೇರಿ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth