4 ರಾಜ್ಯಗಳಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ರು: ಕೊನೆಗೂ ಖತರ್ನಾಕ್ ಅಂತಾರಾಜ್ಯ ಕಳ್ಳರು ಅಂದರ್ - Mahanayaka
10:56 AM Sunday 22 - September 2024

4 ರಾಜ್ಯಗಳಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ರು: ಕೊನೆಗೂ ಖತರ್ನಾಕ್ ಅಂತಾರಾಜ್ಯ ಕಳ್ಳರು ಅಂದರ್

14/09/2023

ಇವರು ಅಂತಿಂತಹ ಕಳ್ಳರಲ್ಲ. ಅತ್ತ ಅಪಾರ್ಟ್ ಮೆಂಟ್ ಗಳಲ್ಲಿ ಕಳ್ಳತನ ಮಾಡಿ ಇತ್ತ ನಾಲ್ಕು ರಾಜ್ಯಗಳಲ್ಲಿ ಕಳ್ಳತನ ಮಾಡಿ ತಮ್ಮ ಕರಾಮತ್ತನ್ನು ತೋರಿಸಿದ್ದರು. ಕದ್ದವ ಸಿಕ್ಕದೇ ಇರುತ್ತಾನ..? ಅಮರಾವತಿಯ ವಾರಂಗಲ್ ಜಿಲ್ಲೆಯಲ್ಲಿ ಸರಣಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರ ಗ್ಯಾಂಗ್ ‌ಇದೀಗ ಪೊಲೀಸರ ಬಲೆಗೆ ಬಿದ್ದಿದೆ.

ಇದರ ಬೆನ್ನಲ್ಲೇ ಈ ಖತರ್ನಾಕ್‌ ಕಳ್ಳರ ಒಂದೊಂದು ಅಸಲಿಯತ್ತು ಬಯಲಿಗೆ ಬಂದಿದೆ. ಈ ಕಳ್ಳರ ತಂಡ ಕೆಲವು ದಿನಗಳ ಹಿಂದೆ ಐದು ಅಪಾರ್ಟ್‌ಮೆಂಟ್‌ಗಳಲ್ಲಿ ಕಳ್ಳತನ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶದ ನಾಲ್ವರನ್ನು ಬಂಧಿಸಲಾಗಿದೆ.

ಅವರಿಂದ 2 ಕೋಟಿ ರೂಪಾಯಿ ಮೌಲ್ಯದ 2 ಕೆಜಿ 380 ಗ್ರಾಂ ಚಿನ್ನ, ವಜ್ರಾಭರಣ, 5.20 ಲಕ್ಷ ರೂಪಾಯಿ ಮೌಲ್ಯದ 104 ಕೆಜಿ ಗಾಂಜಾ, 5000 ನಗದು, ಪಿಸ್ತೂಲ್, 5 ಬುಲೆಟ್, 2 ವಾಕಿ ಟಾಕಿ, ಕಾರು, 4 ನಕಲಿ ಆಧಾರ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ.


Provided by

ಅಲ್ಲದೇ ಈ ದರೋಡೆಕೋರರ ದಂಡು ನಾಲ್ಕು ರಾಜ್ಯಗಳಲ್ಲಿ ಕಳ್ಳತನ ಮಾಡಿದೆ. ಕಳ್ಳತನ ಮಾಡಿದ 24 ಗಂಟೆಯೊಳಗೆ ಕರ್ನೂಲ್ ಜಿಲ್ಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಕಾರಿನ ನಂಬರ್ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕಳ್ಳರನ್ನು ಬಂಧಿಸಲಾಗಿದೆ. ಈ ಗ್ಯಾಂಗ್ ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸರಣಿ ಕಳ್ಳತನ ಮಾಡಿದೆ.

ಇತ್ತೀಚಿನ ಸುದ್ದಿ