ಆಯುಧಪೂಜೆ ವೇಳೆ ಕೇಸರಿ ಹಾಕಿದ್ದ ಖಾಕಿಪಡೆಗೆ ಜಾಡಿಸಿದ ಡಿಸಿಎಂ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಪೊಲೀಸ್ ಇಲಾಖೆ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಧರ್ಮ ನುಸುಳಿತ್ತು. ಪೊಲೀಸರು ಆಯುಧ ಪೂಜೆ ಮಾಡುವಾಗ ಕೇಸರಿ ವಸ್ತ್ರ ಧರಿಸಿ ಕಾಣಿಸಿಕೊಂಡಿದ್ದರು. ಆಗಲೇ ಸಿದ್ದರಾಮಯ್ಯ ಪೊಲೀಸರನ್ನು ಎಚ್ಚೆರಿಸುವ ಕೆಲಸ ಮಾಡಿದ್ದರು.
ಒಂದು ಧರ್ಮದ ಪರವಾಗಿ ಕಾಣಿಸಿಕೊಳ್ಳುವುದು ಬೇರೊಂದು ಧರ್ಮದ ಜನರನ್ನು ಭಯಭೀತರನ್ನಾಗಿ ಮಾಡಿದಂತೆ ಆಗುತ್ತದೆ. ಸಂವಿಧಾನದ ಆಶಯದಲ್ಲಿ ಕೆಲಸ ಮಾಡುವ ಆರಕ್ಷಕರು ತಮ್ಮ ಯೂನಿಫಾರಂ ಮಾತ್ರ ಬಳಸಬೇಕು. ಕೇಸರಿ ವಸ್ತ್ರಗಳನ್ನು ಠಾಣೆಯಲ್ಲಿ ಹಾಕಿಕೊಂಡು ಬಂದಿದ್ದು ಸರಿಯಲ್ಲ ಎನ್ನುವ ವಾದ ಮಂಡನೆ ಮಾಡಿದ್ದರು.
ಇನ್ನು ಬಿಜೆಪಿ ನಾಯಕರು ಸೇರಿದಂತೆ ಹಿರಿಯ ಪೊಲೀಸ್ ಆಧಿಕಾರಿಗಳು, ಆಯುಧ ಪೂಜೆ ದಿನ ತಮ್ಮಿಷ್ಟದ ಧಿರಿಸು ಧರಿಸಿಕೊಂಡು ಬಂದು ಪೂಜೆ ಮಾಡುವುದು ವಾಡಿಕೆ. ಇದರಲ್ಲಿ ವಿಶೇಷ ಏನೂ ಇಲ್ಲ ಎನ್ನುವ ಮೂಲಕ ಪೊಲೀಸ್ ಅಧಿಕಾರಿಗಳನ್ನು ಸಮರ್ಥಿಸಿಕೊಂಡಿದ್ದರು. ಆದರೆ ಮೊದಲ ಸಭೆಯಲ್ಲಿ ಪೊಲೀಸರಿಗೆ ಕಾಂಗ್ರೆಸ್ ಸರ್ಕಾರ ಖಡಕ್ ವಾರ್ನಿಂಗ್ ಮಾಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw