“ವಾಷಿಂಗ್ ಮೆಶಿನ್ ಆನ್ ಮಾಡಿ ಮನೆಯಿಂದ ಹೊರ ಹೋಗಲೇ ಬೇಡಿ” - Mahanayaka
11:53 AM Thursday 12 - December 2024

“ವಾಷಿಂಗ್ ಮೆಶಿನ್ ಆನ್ ಮಾಡಿ ಮನೆಯಿಂದ ಹೊರ ಹೋಗಲೇ ಬೇಡಿ”

washing machine
31/03/2021

ಸ್ಕಾಟ್ಲೆಂಡ್: ವಾಷಿಂಗ್ ಮೆಶಿನ್ ಅನ್ನು  ಆನ್ ಮಾಡಿಟ್ಟು ಮನೆಯಿಂದ ಹೊರಗೆ ಹೋಗಲೇ ಬಾರದಂತೆ, ಹೀಗೆಂದು ಮಹಿಳೆಯೋರ್ವರು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ತಮಗೆ ಆಗಿರುವ ಕೆಟ್ಟ ಅನುಭವವನ್ನು ಅವರು ವಿವರಿಸಿದ್ದಾರೆ.

ಸ್ಕಾಟ್ಲೆಂಡ್ ನ ಗ್ಲ್ಯಾಸ್ಗೋದಲ್ಲಿ ವಾಸಿಸುತ್ತಿರುವ ಲಾರಾ ಬೈರೆಲ್ ಎಂಬ ಗೃಹಿಣಿಯೋರ್ವರು ಯಾವುದೋ ಕೆಲಸಕ್ಕಾಗಿ ಮನೆಯಿಂದ ಹೊರ ಹೋಗಿದ್ದಾರೆ. ಕೆಲಸ ಮುಗಿಸಿ ಮನೆಗೆ ವಾಪಸ್ ಆದಾಗ, ತನ್ನ ಮನೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿರುವಂತಹ ದೃಶ್ಯವನ್ನು ಗಮನಿಸಿ ಬೆಚ್ಚಿ ಬಿದ್ದಿದ್ದಾರೆ.

ತಕ್ಷಣವೇ ಅವರಿ ಇದೇನಾಗಿದೆ ಎಂದು ತಿಳಿದುಕೊಳ್ಳಲು ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಮನೆಯೊಳಗೆ ಸಂಪೂರ್ಣವಾಗಿ ಹೊಗೆಯಾಡುತ್ತಿತ್ತು.  ಗಾಜಿನ ಲೋಟ, ಪಾತ್ರೆಗಳು ಛಿದ್ರಗೊಂಡಿದ್ದವು. ಕಿಟಕಿ ಗಾಜು ಒಡೆದು ಹೋಗಿತ್ತು. ಮನೆಯೊಳಗಿನ ಪಾತ್ರೆಗಳು ಚೆಲ್ಲಾಪಿಲ್ಲಿಯಾಗಿತ್ತು.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಏನು ಸ್ಫೋಟಗೊಂಡಿದೆ ಎಂದು ಪರಿಶೀಲನೆ ನಡೆಸಿದಾಗ ವಾಷಿಂಗ್ ಮೆಶಿನ್ ಸ್ಫೋಟಗೊಂಡಿರುವುದು ತಿಳಿದು ಬಂದಿದೆ. ತಾನು ಮನೆಯಿಂದ ಹೊರ ಹೋಗುವಾಗ ವಾಷಿಂಗ್ ಮೆಶಿನ್ ಆನ್ ಮಾಡಿಟ್ಟು ಹೋಗಿದ್ದೇನೆ ಎನ್ನುವುದು ಆಗ ಮಹಿಳೆಯ ಅರಿವಿಗೆ ಬಂದಿದೆ.

ಈ ಘಟನೆಯ ಬಳಿಕ ಮಹಿಳೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ತಾನು ತನ್ನ ಅನುಭವವನ್ನ ಹೇಳುತ್ತಿದ್ದೇನೆ. ದಯವಿಟ್ಟು ಯಾರು ಕೂಡ ಮನೆಯಿಂದ ಹೊರ ಹೋಗುವಾಗ ವಾಷಿಂಗ್ ಮೆಶಿನ್ ಆನ್ ಮಾಡಿಟ್ಟು ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ