ವಯನಾಡ್ ದುರಂತ: ಕಣ್ಣೀರು ತರಿಸಿದ ಕಾರ್ಯಾಚರಣೆ ವೇಳೆಯ ಹೃದಯವಿದ್ರಾವಕ ದೃಶ್ಯಗಳು - Mahanayaka
6:04 PM Wednesday 30 - October 2024

ವಯನಾಡ್ ದುರಂತ: ಕಣ್ಣೀರು ತರಿಸಿದ ಕಾರ್ಯಾಚರಣೆ ವೇಳೆಯ ಹೃದಯವಿದ್ರಾವಕ ದೃಶ್ಯಗಳು

31/07/2024

ವಯನಾಡ್‌ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಂತೆ ಹೃದಯವಿದ್ರಾವಕ ದೃಶ್ಯಗಳು ಅನಾವರಣಗೊಳ್ಳುತ್ತಿದೆ. ಈ ದುರ್ಘಟನೆಯಲ್ಲಿ ಈವರೆಗೆ 156 ಮಂದಿ ಮೃತಪಟ್ಟಿದ್ದು, 197 ಮಂದಿ ಗಾಯಗೊಂಡಿದ್ದಾರೆ ಎಂಬ ವರದಿ ಬಂದಿದೆ.

ತೊಂದರೆಗೀಡಾಗಿರುವ ಸ್ಥಳಗಳಲ್ಲಿ ಗಾಯಗೊಂಡಿರುವವರನ್ನು ಏರ್ ಲಿಫ್ಟ್ ಮಾಡಲು ಹೆಲಿಕಾಪ್ಟರ್ ಗಳನ್ನು ಬಳಸಲಾಗುತ್ತದೆ.
ಈ ದುರಂತದಲ್ಲಿ ಕಾಣೆಯಾಗಿರುವವರ ಸಂಖ್ಯೆಯನ್ನು ನಿರ್ಧರಿಸಲು ಬುಧವಾರ ವಯನಾಡ್ ನ ಜಿಲ್ಲಾಡಳಿತವು ದತ್ತಾಂಶ ಸಂಗ್ರಹಕ್ಕೆ ಚಾಲನೆ ನೀಡಿದೆ. ಈ ದುರಂತದಲ್ಲಿ ನಾಪತ್ತೆಯಾಗಿರುವವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು,

ಈ ದುರ್ಘಟನೆಯಲ್ಲಿ ತಮ್ಮ ಪ್ರೀತಿ ಪಾತ್ರರು ಇನ್ನೂ ಪತ್ತೆಯಾಗಿಲ್ಲ ಎಂದು ಹಲವಾರು ಕುಟುಂಬಗಳ ಸದಸ್ಯರು ವರದಿ ಮಾಡಿದ್ದಾರೆ. ವಯನಾಡ್ ನಲ್ಲಿ 45 ಪರಿಹಾರ ಶಿಬಿರಗಳನ್ನು ನಿರ್ಮಾಣ ಮಾಡಲಾಗಿದ್ದು, 3,069 ಮಂದಿಗೆ ಆಶ್ರಯ ಒದಗಿಸಲಾಗಿದೆ. ಈ ನಡುವೆ, ಹಲವಾರು ರಕ್ಷಣಾ ಸಂಸ್ಥೆಗಳು ಇಂದು ಬೆಳಗ್ಗೆ ಈ ದುರಂತದಲ್ಲಿ ಮಣ್ಣಿನಡಿ ಸಿಲುಕಿಕೊಂಡಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಲು ತಮ್ಮ ರಕ್ಷಣಾ ಕಾರ್ಯಾಚರಣೆಯನ್ನು ಪುನಾರಂಭಿಸಿವೆ. ಈ ದುರ್ಘಟನೆಯಲ್ಲಿ ಈವರೆಗೆ 156 ಮಂದಿ ಮೃತಪಟ್ಟಿದ್ದು, 197 ಮಂದಿ ಗಾಯಗೊಂಡಿದ್ದಾರೆ.

ನಾಗರಿಕರ ಕುಂದುಕೊರತೆಗಳನ್ನು ಆಲಿಸಲು ಕೇರಳ ಸರಕಾರವು ಎರಡು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ