ಚಿನ್ನದ ರಸ್ತೆ ಎಲ್ಲಿದೆ ಅಂತ ಹುಡುಕುತ್ತಿದ್ದೇವೆ: ಸತೀಶ್ ಜಾರಕಿಹೊಳಿ ವ್ಯಂಗ್ಯ
ಬೆಳಗಾವಿ: ಹಿಂದೂ ಪದ ವಿಚಾರವಾಗಿ ಬೆಳಗಾವಿಯ ಯಮಕನಮರಡಿಯಲ್ಲಿ ಸತೀಶ್ ಜಾರಕಿಹೊಳಿಗೆ ಚಕ್ರವರ್ತಿ ಸೂಲಿಬೆಲೆ ಸವಾಲು ಹಾಕಿದ್ದರು. ಈ ಸವಾಲಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ಸೂಲಿಬೆಲೆ ಹೇಳಿರೋದು ಒಂದಾದ್ರೂ ನಡೆದಿದೆಯೇ? ಎಂದು ಪ್ರಶ್ನಿಸಿದ್ದಾರೆ.
ನಾವು ಓಪನ್ ಚರ್ಚೆಗೆ ಸಿದ್ಧರಿದ್ದೇವೆ. ಆದರೆ, ಸೂಲಿಬೆಲೆಯ 10 ವರ್ಷಗಳ ಹೇಳಿಕೆಯಲ್ಲಿ ಯಾವುದಾದರೂ ಒಂದು ಆಗಿದೆಯಾ? ಸೂಲಿಬೆಲೆ ಹೇಳಿದ್ದ ಚಿನ್ನದ ರಸ್ತೆ ಎಲ್ಲಿದೆ ಅಂತ ಹುಡುಕುತ್ತಿದ್ದೇವೆ ಬೆಳಿಗ್ಗೆ ಬೆಂಗಳೂರಿಂದ ಮಂಗಳೂರಿಗೆ ಹೋಗಿ ಸಂಜೆ ಮತ್ತೆ ಬೆಂಗಳೂರು ಊಟಕ್ಕೆ ಬರಬೇಕು ಅಂತಹ ರಸ್ತೆ ಎಲ್ಲಿದೆ ಎಂದು ಅವರು ವ್ಯಂಗ್ಯವಾಡಿದರು.
ಸೂಲಿಬೆಲೆ ಇಂತಹ ಹಲವು ಮಾತುಗಳನ್ನಾಡಿದ್ದಾರೆ. ಅವುಗಳಲ್ಲಿ ಒಂದಾದ್ರೂ ಸತ್ಯ ಆಗಿದ್ರೆ ನಾವು ಅವರ ಜೊತೆಗೆ ಚರ್ಚೆ ಮಾಡುತ್ತೇವೆ. ಈ ರೀತಿ ಮಾತುಗಳನ್ನಾಡುವ ವ್ಯಕ್ತಿಯ ಜೊತೆಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka