ದಾರಿ ತಪ್ಪಲು ನಾವೇನು ಮಕ್ಕಳೇ? | ಮೋಹನ್ ಭಾಗವತ್ ಹೇಳಿಕೆಗೆ ಓವೈಸಿ ತಿರುಗೇಟು - Mahanayaka

ದಾರಿ ತಪ್ಪಲು ನಾವೇನು ಮಕ್ಕಳೇ? | ಮೋಹನ್ ಭಾಗವತ್ ಹೇಳಿಕೆಗೆ ಓವೈಸಿ ತಿರುಗೇಟು

26/10/2020

ನವದೆಹಲಿ: ಪೌರತ್ವ ತಿದ್ದುಪಡಿ ವಿಚಾರವಾಗಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ AIMIM ಪಕ್ಷದ ಸಂಸದ ಅಸಾದುದ್ದಿನ್ ಓವೈಸಿ ತಿರುಗೇಟು ನೀಡಿದ್ದಾರೆ.

“ಮುಸ್ಲಿಮ್ ಸಹೋದರರನ್ನು ಸಿಎಎ ವಿಚಾರದಲ್ಲಿ ಕೆಲವರು ದಾರಿ ತಪ್ಪಿಸುತ್ತಿದ್ದಾರೆ” ಎಂದು ಮೋಹನ್ ಭಾಗವತ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಓವೈಸಿ, “ದಾರಿ ತಪ್ಪಲು ನಾವೇನು ಮಕ್ಕಳೇ?” ಎಂದು ಪ್ರಶ್ನಿಸಿದ್ದಾರೆ.

ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆಗಳು ಏನು ಮಾಡುತ್ತವೆ? ಎಂಬ ಬಗ್ಗೆ ಬಿಜೆಪಿ ಪಕ್ಷ ಈವರೆಗೆ ಒಂದು ಪದಗಳನ್ನು ಹೇಳಿಲ್ಲ. ಮುಸ್ಲಿಂ ವಿರೋಧಿ ತನ ಈ ಕಾಯ್ದೆಗಳಲ್ಲಿ ಎದ್ದು ಕಾಣಿಸುತ್ತಿವೆ. ಒಂದು ವೇಳೆ ಆ ಕಾಯ್ದೆಗಳು ಮುಸ್ಲಿಮರ ಬದುಕಿಗೆ ಧಕ್ಕೆ ತರುವುದಿಲ್ಲ ಎಂದಾದರೆ ಕಾಯ್ದೆಯಲ್ಲಿರುವ ಧರ್ಮದ ಎಲ್ಲಾ  ಉಲ್ಲೇಖಗಳನ್ನು ಕೂಡಲೇ ತೆಗೆದುಹಾಕಿ ಎಂದು ಅವರು ಸವಾಲು ಹಾಕಿದರು.

ಭಾರತೀಯತೆಯನ್ನು ಸಾಬೀತುಪಡಿಸಲು ಇಂತಹ ಕಾನೂನುಗಳು ಚಾಲ್ತಿಯಲ್ಲಿ ಇರುವವರೆಗೂ ನಾವು ಮತ್ತೆ ಮತ್ತೆ ಪ್ರತಿಭಟಿಸುತ್ತೇವೆ” ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ,

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ನಿಮ್ಮ ಸುದ್ದಿಗಳನ್ನು ಕಳುಹಿಸಿ: mahanayakain@gmail.com

ಇತ್ತೀಚಿನ ಸುದ್ದಿ