ನಮ್ಮವರ ಹರಕು ಬಾಯಿಯಿಂದಲೇ ಇಂದು ನಾವು ಸೋತಿದ್ದೇವೆ: ರೇಣುಕಾಚಾರ್ಯ ಕಿಡಿ
ದಾವಣಗೆರೆ: ಹರಕು ಬಾಯಿ ನಾಯಕರಿಂದಲೇ ಬಿಜೆಪಿಗೆ ಸೋಲಾಗಿದೆ ಎಂದು ಯತ್ನಾಳ್ ಹಾಗೂ ಟೀಮ್ ವಿರುದ್ಧ ಬಿಜೆಪಿ ನಾಯಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಉಪ ಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವು ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ ಅವರು ಯತ್ನಾಳ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
2023 ರ ಚುನಾವಣೆಯಲ್ಲಿ ವಿಧಾನಸೌಧದ ಹೊರಗೆ ಒಳಗೆ ನಾಲಗೆ ಹರಿಬಿಟ್ಟಿದ್ರು. ಇವರಿಗೆ ಟಿ ಆರ್ ಪಿ ಬೇಕು. ಬಾಯ ಚಟಕ್ಕೆ ಏನೇನೋ ಮಾತನಾಡುತ್ತಾರೆ. 2023 ರ ಚುನಾವಣೆಯ ಸೋಲಿಗೆ ಅವರೇ ಕಾರಣ, ಹರಕು ಬಾಯಿಯಿಂದ ಯಾರು ಮಾತನಾಡುತ್ತಿದ್ದಾರೋ ಅವರೇ 2023 ರ ಚುನಾವಣೆಯಲ್ಲಿ ಸೋಲಿಗೆ ಕಾರಣ ಎಂದರು.
ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದು ಹೈಕಮಾಂಡ್. ವಿಜಯೇಂದ್ರ ಅವರನ್ನ ವಿರೋಧ ಮಾಡುವುದು ಒಂದೇ, ಹೈಕಮಾಂಡ್ ವಿರುದ್ಧ ಮಾತನಾಡುವುದು ಒಂದೇ ಎಂದು ಹೇಳಿದ್ದಾರೆ.
ಯಡಿಯೂರಪ್ಪ, ವಿಜಯೇಂದ್ರ, ಹೈಕಮಾಂಡ್ ಬಗ್ಗೆಯೂ ಟೀಕೆ ಮಾಡ್ತಾರೆ. ಆದರೆ ಕಾಂಗ್ರೆಸ್ ವಿರುದ್ಧ ಹೋರಾಟ ಬೇಡ ಎಂದು ಹೇಳಿ ಕಾಂಗ್ರೆಸ್ ಜೊತೆಯೇ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ. ಮಂತ್ರಿ ಆಗಿಲ್ಲಾ ಎಂಬ ಒಂದೇ ಕಾರಣಕ್ಕೆ ನಾಲಿಗೆ ಹರಿ ಬಿಟ್ಟು ಈ ರೀತಿ ಮಾತನಾಡುತ್ತಾರೆ. ನಮ್ಮವರ ಹರಕು ಬಾಯಿಯಿಂದಲೇ ಇಂದು ನಾವು ಸೋತಿದ್ದೇವೆ ಎಂದು ಯತ್ನಾಳ್ ಗೆ ಟಾಂಗ್ ನೀಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: