ಚರ್ಚ್ ನಲ್ಲಿ ಆಯುಧ ಪೂಜೆ: ನೂರಾರು ಕ್ರೈಸ್ತರಿಂದ ಸಂಭ್ರಮ!! - Mahanayaka

ಚರ್ಚ್ ನಲ್ಲಿ ಆಯುಧ ಪೂಜೆ: ನೂರಾರು ಕ್ರೈಸ್ತರಿಂದ ಸಂಭ್ರಮ!!

church 2
23/10/2023

ಚಾಮರಾಜನಗರ: ಹಿಂದೂಗಳ ಪವಿತ್ರ ಆಚರಣೆಯಾದ ಆಯುಧ ಪೂಜೆಯನ್ನು ಕ್ರೈಸ್ಥ ಸಮುದಾಯದವರು ಮಾಡುವ ಮೂಲಕ ಗಮನ ಸೆಳೆದ ಘಟನೆ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ನಡೆದಿದೆ.

ಮಾರ್ಟಳ್ಳಿ ಗ್ರಾಮದಲ್ಲಿ ಕ್ರೈಸ್ತ ಸಮುದಾಯವರೇ ಅಧಿಕ ಸಂಖ್ಯೆಯಲ್ಲಿದ್ದು ಇಂದು ವಾಹನಗಳನ್ನು ಶುಚಿಗೊಳಿಸಿ, ಅಲಂಕೃತಗೊಳಿಸಿ ಚರ್ಚ್ ಕೊಂಡೊಯ್ದು ಆಯುಧ ಪೂಜೆ ನೆರವೇರಿಸಿದ್ದಾರೆ. ಅಲ್ಲಿನ ಪಾದ್ರಿ ಪ್ರಾರ್ಥನೆ, ಶುಭ ಸಂದೇಶ ತಿಳಿಸಿ ಪವಿತ್ರ ಜಲವನ್ನು ನೂರಾರು ವಾಹನಗಳಿಗೆ ಪ್ರೋಕ್ಷಣೆ ಮಾಡಿ ಯಾವುದೇ ಅಪಘಾತಗಳಾಗದಿರಲಿ, ಶುಭ-ಲಾಭ ತರಲಿ ಎಂದು ಹಾರೈಸಿದ್ದಾರೆ‌.

ಹಿಂದಿನ ತಲೆಮಾರುಗಳಲ್ಲಿ ಇವರು ಹಿಂದೂಗಳೇ ಆಗಿದ್ದರಿಂದ ಅಂದು ನಡೆಸಿದ್ದ ಸಂಪ್ರದಾಯವನ್ನು ಮತ ಬದಲಿಸಿದ ನಂತರವೂ ಉಳಿಸಿಕೊಂಡು ಬಂದಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hv1TpXr73MfF0Cet1rPZjq

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ