ಬುಧವಾರದ  6.11.2024 ದಿನ ಭವಿಷ್ಯ - Mahanayaka
11:24 PM Tuesday 24 - December 2024

ಬುಧವಾರದ  6.11.2024 ದಿನ ಭವಿಷ್ಯ

ganapati
06/11/2024

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು   ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ  9535156490  ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

🕉️ಮೇಷ🕉️

ಉದ್ಯೋಗದಲ್ಲಿ ಇದ್ದ ಅಡ್ಡಿ ಆತಂಕಗಳು ಕ್ರಮೇಣವಾಗಿ ಮರೆಯಾಗುತ್ತವೆ. ತೆಗೆದುಕೊಳ್ಳುವ ತೀರ್ಮಾನದ ಮೇಲೆ ಇವರ ಜೀವನ ಅವಲಂಬಿಸಿರುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಹಣದ ಕೊರತೆ ಕಡಿಮೆಯಾಗುತ್ತದೆ. ನೀವು ಆಡುವ ಪ್ರತಿ ಮಾತಿಗೂ ಎಲ್ಲರ ಗೌರವ ಲಭಿಸುತ್ತದೆ. ಹಣಕಾಸಿನ ಕೊರತೆ ಕಡಿಮೆಯಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಮಕ್ಕಳ ವಿಚಾರದಲ್ಲಿ ಸಂದರ್ಭೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ವಿದ್ಯಾರ್ಥಿಗಳು ಕ್ರಮೇಣವಾಗಿ ಕಲಿಕೆಯಲ್ಲಿ ಆಸಕ್ತಿ ಗಳಿಸುತ್ತಾರೆ. ತ್ವರಿತಗತಿಯಲ್ಲಿ ಕೆಲಸ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ಸಫಲರಾಗುವಿರಿ. ನಿಮ್ಮ ಮನದ ದೊಡ್ಡ ಆಸೆಯೊಂದು ಬೇರೆಯವರ ಸಹಾಯದಿಂದ ಈಡೇರಲಿದೆ.

🕉️ವೃಷಭ🕉️

ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸಲು ಇಷ್ಟಪಡುವುದಿಲ್ಲ. ಬೇರೆಯವರ ತಪ್ಪುಗಳನ್ನು ಸರಿಪಡಿಸುವುದು ನಿಮಗೆ ಇಷ್ಟವಾಗುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಬಲ್ಲಿರಿ. ಕುಟುಂಬದ ಶ್ರೇಯೋಭಿವೃದ್ಧಿಗಾಗಿ ನಿಮ್ಮ ಸ್ವಂತ ವಿಚಾರಗಳನ್ನು ಮರೆಯುವಿರಿ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಮನೆಯನ್ನು ನವೀಕರಣಗೊಳಿಸುವ ಕೆಲಸವನ್ನು ಆರಂಭಿಸಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ಕುಟುಂಬದ ಜನರ ಜೊತೆ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವಿರಿ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವ ಕಾರಣ ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಹಣದ ಕೊರತೆ ಇರುವುದಿಲ್ಲ.

🕉️ಮಿಥುನ🕉️

ಕುಟುಂಬದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರಲಿದೆ. ಕೆಲಸ–ಕಾರ್ಯಗಳಲ್ಲಿ ಹಿನ್ನೆಡೆ ಇದ್ದರೂ ಕಾಲ ಕ್ರಮೇಣ ಯಶಸ್ಸನ್ನು ಕಾಣುವಿರಿ. ಕುಟುಂಬದ ಸ್ತ್ರೀಯರ ಆರೋಗ್ಯದಲ್ಲಿ ಮಹತ್ತರ ಬದಲಾವಣೆಗಳು ಇರಲಿವೆ. ಸೋದರ ಅಥವಾ ಸೋದರಿಯ ಜೊತೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುತ್ತವೆ. ಆದಾಯದಲ್ಲಿ ಪ್ರಗತಿ ಕಾಣಲಿದೆ. ಒಳ್ಳೆಯ ಕೆಲಸಗಳಿಗೆ ಹಣ ಖರ್ಚು ಮಾಡುವಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ನಿರತರಾಗಿರುವವರು ಆತ್ಮೀಯರ ಸಹಾಯವನ್ನು ಪಡೆಯುತ್ತಾರೆ. ವಂಶದ ಉನ್ನತ ಅಧಿಕಾರ ನಿಮಗೆ ದೊರೆಯಲಿದೆ. ಹೆಚ್ಚಿನ ಪ್ರಯತ್ನ ಪಟ್ಟಲ್ಲಿ ಮಾತ್ರ ವಾಸ ಸ್ಥಳವನ್ನು ಬದಲಿಸಲು ಸಾಧ್ಯವಾಗುತ್ತದೆ.

🕉️ಕಟಕ🕉️

ನಿಮ್ಮ ಪರಿಶ್ರಮಕ್ಕೆ ತಕ್ಕಂತಹ ಫಲಿತಾಂಶವು ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ನಿರೀಕ್ಷಿಸಿದ ಪ್ರಗತಿ ಕಾಣಲಿದೆ. ಮನದಲ್ಲಿದ್ದ ದೊಡ್ಡ ಚಿಂತೆಯು ದೂರವಾಗುತ್ತದೆ. ಕುಟುಂಬದವರ ಸಹಾಯ ಸಹಕಾರವು ಸದಾ ಕಾಲ ನಿಮ್ಮದಾಗಲಿದೆ. ಆತುರದಿಂದ ಮಾತನ್ನು ಆಡಿದರೆ ತೊಂದರೆಗೆ ಸಿಲುಕುವಿರಿ. ಮೌನವಾಗಿ ಕೆಲಸ ಸಾಧಿಸಲು ಪ್ರಯತ್ನಿಸುವಿರಿ. ನಿಮ್ಮದಲ್ಲದ ವಿಚಾರಗಳಿಂದ ದೂರ ಉಳಿಯುವಿರಿ. ಸ್ನೇಹ ಪ್ರೀತಿಯಿಂದ ವರ್ತಿಸಿ. ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ನಿಮ್ಮ ಸ್ವಂತ ಚಿಂತನೆಗಳನ್ನು ಮರೆಯುವಿರಿ. ಅತಿಯಾದ ಆತುರದಿಂದ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳದಿರಿ. ಸ್ವತಂತ್ರವಾಗಿ ಸಂಘ ಸಂಸ್ಥೆಗಳನ್ನು ನಿರ್ವಹಿಸಬಲ್ಲಿರಿ. ಸಮಾಜದ ನೇತಾರರಾಗಿ ಬಾಳುವಿರಿ.

🕉️ಸಿಂಹ🕉️

ಯಾವುದೇ ಸಮಸ್ಯೆಗಳು ಎದುರಾಗದಂತೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಆರಂಭಿಸಿದ ಕೆಲಸವು ಪೂರ್ಣಗೊಳ್ಳುವವರೆಗೂ ಹೊಸ ಯೋಜನೆ ಆರಂಭಿಸುವುದಿಲ್ಲ. ನಿಮ್ಮ ಸಲಹೆ ಸೂಚನೆಗಳನ್ನು ಎಲ್ಲರೂ ಪಾಲಿಸುತ್ತಾರೆ. ಕುಟುಂಬದ ಹಣಕಾಸಿನ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗಲಿದೆ. ಜನ ಮೆಚ್ಚುವ ಕೆಲಸಗಳನ್ನಷ್ಟೇ ಮಾಡಲು ಇಚ್ಚಿಸುವವರಿಗೆ ಸಮಾಜ ಸೇವೆಯಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸುವಿರಿ. ಗುರು ಹಿರಿಯರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುತ್ತದೆ. ಉತ್ತಮ ಆದಾಯ ವಿರುದ್ಧದ ಅಲ್ಪ ಪ್ರಮಾಣದ ಹಣವನ್ನು ಉಳಿಸುವಲ್ಲಿ ಸಫಲರಾಗುವಿರಿ. ಸೋಲುವ ವೇಳೆ ಸಿಡುಕುತನದಿಂದ ವರ್ತಿಸುವಿರಿ.

🕉️ಕನ್ಯಾ🕉️

ಯಾವುದೇ ಕೆಲಸಗಳನ್ನು ಸಹ ಸ್ವತಂತ್ರವಾಗಿ ನಿರ್ವಹಿಸುವಿರಿ. ಕುಟುಂಬದ ಎಲ್ಲಾ ಸದಸ್ಯರ ಸಹಾಯ ಸಹಕಾರ ನಿಮಗೆ ದೊರೆಯುತ್ತದೆ. ಅವಿವಾಹಿತರಿಗೆ ದೂರದ ಸ್ಥಳದಲ್ಲಿ ವಿವಾಹ ನಿಶ್ಚಯವಾಗುತ್ತದೆ. ಮಕ್ಕಳ ಕಾರಣಕ್ಕೆ ವಿವಾದ ಒಂದರಲ್ಲಿ ಸಿಲುಕುವ ಸಾಧ್ಯತೆಗಳಿವೆ. ನಿಮ್ಮಲ್ಲಿರುವ ಕ್ಷಮಾ ಗುಣವು ಎಲ್ಲರ ಗಮನ ಸೆಳೆಯುತ್ತದೆ. ಮನಸ್ಸಿನಲ್ಲಿ ವೈರಾಗ್ಯ ಭಾವನೆ ಮೂಡುತ್ತದೆ. ಪರಿಪಕ್ವ ತೀಮಾನಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುವಿರಿ. ಸುಲಭವಾಗಿ ಬೇರೆಯವರ ಅಧೀನಕ್ಕೆ ಒಳಪಡುವುದಿಲ್ಲ. ನಿಮ್ಮ ತಪ್ಪನ್ನು ಮರೆಸಲು, ಬೇರೆಯವರ ತಪ್ಪನ್ನು ಎಲ್ಲರಿಗೂ ಕಾಣುವಂತೆ ಮಾಡುವಿರಿ. ಹಣ ಗಳಿಕೆಯಲ್ಲಿ ಸ್ಥಿರತೆ ಕಂಡು ಬರುವುದಿಲ್ಲ. ಉದ್ಯೋಗದಲ್ಲಿ ಸಾಧಾರಣ ಮಟ್ಟದ ಪ್ರಗತಿ ಕಾಣುವಿರಿ.

🕉️ತುಲಾ🕉️

ಸದಾಕಾಲ ಯಾವುದಾದರೂ ಒಂದು ಕೆಲಸದಲ್ಲಿ ನಿರತರಾಗುವಿರಿ. ಒಳ್ಳೆಯ ಕೆಲಸಗಳಿಗೆ ಹಣವನ್ನು ಕೂಡಿದಬೇಕಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿದರೆ ಯಾವುದೇ ತೊಂದರೆ ಎದುರಾಗದು. ನಿಮ್ಮ ಬಳಿ ಇರುವ ಹಣವನ್ನು ಖರ್ಚು ಮಾಡುವವರೆಗೂ ಮನಸ್ಸಿಗೆ ನೆಮ್ಮದಿಯೂ ಇರುವುದಿಲ್ಲ. ವಿಶ್ವಾಸದಿಂದ ಎಲ್ಲರನ್ನೂ ಕಾಣುವಿರಿ. ಆದಾಯದಲ್ಲಿ ಸಾಮಾನ್ಯ ಮಟ್ಟದ ಪ್ರಗತಿ ಇರಲಿದೆ. ಸಾಲವಾಗಿ ಹಣವನ್ನು ತೆಗೆದುಕೊಳ್ಳುವುದಾಗಲಿ ಅಥವಾ ಬೇರೆಯವರಿಗೆ ನೀಡುವುದಾಗಲಿ ನಿಮಗೆ ಇಷ್ಟವಾಗುವುದಿಲ್ಲ. ವಾಯುದೋಷದಿಂದ ತೊಂದರೆಗೆ ಒಳಗಾಗುವಿರಿ. ಸಂಪ್ರದಾಯ ಬದ್ಧ ವಿಚಾರಗಳಲ್ಲಿ ಆಸಕ್ತಿ ಮೂಡುವುದಲ್ಲದೆ ಆಚರಣೆಗೂ ಒತ್ತು ನೀಡುವಿರಿ. ಮಕ್ಕಳ ಆರೋಗ್ಯದಲ್ಲಿ ಅಲ್ಪ ಪ್ರಮಾಣದ ಏರಿಳಿತ ಕಂಡು ಬರುತ್ತದೆ.

🕉️ವೃಶ್ಚಿಕ🕉️

ಕೋಪ ತಾಪಗಳಿಗೆ ಬರವಿಲ್ಲ. ನಿಮ್ಮ ತೀರ್ಮಾನಗಳನ್ನು ಬೇರೆಯವರು ಒಪ್ಪದೇ ಹೋದಲ್ಲಿ ಸಹನೆ ಕಳೆದುಕೊಳ್ಳುವಿರಿ. ಸುಲಭವಾಗಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಬದಲಾಯಿಸುವುದಿಲ್ಲ. ಬೇರೆಯವರನ್ನು ಮೆಚ್ಚಿಸುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಆದಾಯದಲ್ಲಿ ತೊಂದರೆ ಕಂಡು ಬರುವುದಿಲ್ಲ. ಆತ್ಮೀಯರ ಸಹಾಯ ಸಹಕಾರದಿಂದ ದೊಡ್ಡ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಮಕ್ಕಳ ವಿಚಾರದಲ್ಲಿ ಅನಗತ್ಯ ಯೋಚನೆ ಮಾಡುವಿರಿ. ವಿದ್ಯಾರ್ಥಿಗಳು ಒತ್ತಡದ ನಡುವೆಯೂ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ. ಕೌಟುಂಬಿಕ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನಿಮ್ಮಿಂದ ನಿರ್ಮಾಣಗೊಳ್ಳಲಿದೆ.

🕉️ಧನಸ್ಸು🕉️

ನಿಮ್ಮಲ್ಲಿರುವ ಹಠದ ಗುಣವು ಬೇರೆಯವರ ಬೇಸರಕ್ಕೆ ಕಾರಣವಾಗುತ್ತದೆ. ಕೋಪ ತಾಪಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ. ನಂಬಿದವರಿಂದ ಯಾವುದೇ ತೊಂದರೆ ಕಂಡುಬರದು. ಉದ್ಯೋಗದಲ್ಲಿ ಎದುರಾದ ಅಡೆತಡೆಗಳು ಮರೆಯಾಗಲಿವೆ. ಸ್ವಂತ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುವಿರಿ. ದೇವತಾ ಕಾರ್ಯಗಳನ್ನು ನಡೆಸುವಿರಿ. ಹಣದ ತೊಂದರೆ ಇರುವುದಿಲ್ಲ. ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ಮಕ್ಕಳಿಗೆ ಉದ್ಯೋಗ ದೊರೆಯಲು ಪರೋಕ್ಷವಾಗಿ ಕಾರಣರಾಗುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸಿದಲ್ಲಿ ತೊಂದರೆ ಉಂಟಾಗುತ್ತದೆ. ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಧಾರ್ಮಿಕ ಕೇಂದ್ರಕ್ಕೆ ಎಲ್ಲರೊಡನೆ ಭೇಟಿ ನೀಡುವಿರಿ. ಆಪ್ತರಿಂದ ಹಣದ ಸಹಾಯ ದೊರೆಯಲಿದೆ.

🕉️ಮಕರ🕉️

ಮಾತಿನಿಂದಲೇ ನಿಮ್ಮ ಕೆಲಸವನ್ನು ಸಾಧಿಸಬಲ್ಲಿರಿ. ಅನಾವಶ್ಯಕ ವಿವಾದಗಳು ಎದುರಾಗಲಿವೆ. ತಪ್ಪನ್ನು ಒಪ್ಪಿಕೊಂಡು ಸರಿಪಡಿಸಿಕೊಳ್ಳುವ ದೊಡ್ಡತನ ನಿಮಗಿರುತ್ತದೆ. ಸೋದರ ಅಥವಾ ಸೋದರಿಯರ ಸಹಾಯ ಒದಗಿ ಬರಲಿದೆ. ಅವಶ್ಯಕತೆಗೆ ತಕ್ಕಷ್ಟು ಹಣವನ್ನು ಸಂಪಾದಿಸಬಲ್ಲಿರಿ. ಶೀತದ ಸಮಸ್ಯೆ ಬಾಧಿಸುತ್ತದೆ. ಮಕ್ಕಳ ವಿಚಾರದಲ್ಲಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುವ ಕಾರಣ ನಿರೀಕ್ಷಿತ ಪ್ರಗತಿ ಉಂಟಾಗುತ್ತದೆ. ಲಾಭವಿಲ್ಲದ ಕೆಲಸಗಳಿಂದ ದೂರ ಉಳಿಯುವಿರಿ. ಅಲ್ಪ ಪ್ರಮಾಣದ ಸ್ವಾರ್ಥದ ಬುದ್ಧಿ ಆವರಿಸಲಿದೆ. ನೆರೆಹೊರೆಯವರ ಸಹಾಯ ಸಹಕಾರ ನಿಮಗೆ ದೊರೆಯುತ್ತದೆ. ಸಾಮಾಜಿಕ ಗೌರವಕ್ಕೆ ಪಾತ್ರರಾಗುವಿರಿ

🕉️ಕುಂಭ🕉️

ನಿಮ್ಮ ಮನಸ್ಸಿನ ಭಾವನೆಗಳನ್ನು ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ. ಮೌನದಿಂದ ಹೊರಬಂದು ಕೆಲಸ ಸಾಧಿಸುವಿರಿ. ಕುಟುಂಬದ ನಿರ್ವಹಣೆ ನಿಮ್ಮ ಪಾಲಾಗುತ್ತದೆ. ಉಳಿಸಿದ್ದ ಹಣವು ಆತ್ಮೀಯರ ಸಲುವಾಗಿ ವೆಚ್ಚವಾಗಲಿದೆ. ದಾಂಪತ್ಯದಲ್ಲಿನ ಹೊಂದಾಣಿಕೆ ಗಟ್ಟಿಗೊಳ್ಳಲಿದೆ. ನೀವು ತೆಗೆದುಕೊಳ್ಳುವ ತೀರ್ಮಾನಗಳು ಎಲ್ಲರ ಮೆಚ್ಚುಗೆ ಗಳಿಸುತ್ತದೆ. ಹೊಸ ಹಣಕಾಸಿನ ಯೋಜನೆಗೆ ಒಪ್ಪಿಗೆ ಸೂಚಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರವಿದ್ದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಬೇರೆಯವರಿಂದ ದೊರೆಯುವ ಹಣದ ಸಹಾಯದಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಮಕ್ಕಳೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಮಾತಿಗೆ ಮರುಳಾಗದೆ ಹೋದಲ್ಲಿ ಯಾವುದೇ ತೊಂದರೆ ಎದುರಾಗದು. ಕ್ರಮೇಣವಾಗಿ ಆರ್ಥಿಕ ಪ್ರಗತಿ ಉಂಟಾಗಲಿದೆ.

🕉️ಮೀನ🕉️

ಎಲ್ಲರೊಂದಿಗೆ ಸಂತಸದಿಂದ ಬಾಳುವಿರಿ. ಗೆಲ್ಲುವವರೆಗೂ ಕೆಲಸ ಕಾರ್ಯಗಳಲ್ಲಿನ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ಉತ್ತಮ ಆದಾಯ ಗಳಿಸುವ ಸಲುವಾಗಿ ಉಪವೃತ್ತಿಯನ್ನು ಆರಂಭಿಸುವಿರಿ. ಬಂಧು ಬಳಗದವರಿಗೆ ನೀಡಿದ್ದ ಹಣವು ಮರಳಿ ಕೈ ಸೇರುತ್ತದೆ. ಅತಿಯಾದ ಆಸೆ ಅಥವಾ ನಿರೀಕ್ಷೆ ಇರದ ಕಾರಣ ನಿರಾಳ ಜೀವನ ನಿಮ್ಮದಾಗುತ್ತದೆ. ನಿಮ್ಮ ಜವಾಬ್ದಾರಿಗಳನ್ನು ಬೇರೆಯವರಿಗೆ ಒಪ್ಪಿಸುವಿರಿ. ವೇಳೆ ಇಲ್ಲದೆ ಹೋದರು ವಿಶ್ರಾಂತಿ ತೆಗೆದುಕೊಳ್ಳುವುದನ್ನು ಮರೆಯುವುದಿಲ್ಲ. ಕಣ್ಣಿನ ತೊಂದರೆಗೆ ಪರಿಹಾರ ದೊರೆಯುತ್ತದೆ. ನಿಮ್ಮ ಶುಭ್ರವಾದ ಮನಸ್ಸನ್ನು ಎಲ್ಲರೂ ಮೆಚ್ಚುತ್ತಾರೆ. ಹಿಂದಿನ ಪದ್ದತಿಗಳನ್ನು ಗೌರವಿಸುವಿರಿ. ಆತ್ಮವಿಶ್ವಾಸವನ್ನು ಬೆಳೆಸಿಕೊಂಡಲ್ಲಿ ಉತ್ತಮ ಅವಕಾಶಗಳು ದೊರೆಯುತ್ತವೆ. ನೀರಿರುವ ಪ್ರದೇಶದಲ್ಲಿ ಎಚ್ಚರಿಕೆಯಿಂದ ಇರಬೇಕು. ಸಂಗಾತಿಯೊಂದಿಗೆ ಉತ್ತಮ ಅನುಬಂಧ ಮೂಡಲಿದೆ.

🕉️ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾಗ ಜೋತಿಷಿಗಳನ್ನು ಸಂಪರ್ಕಿಸಿ 9535156490🕉️

ಇತ್ತೀಚಿನ ಸುದ್ದಿ