ವೀಕೆಂಡ್‌ ಕರ್ಫ್ಯೂ, ಲಾಕ್‌ ಡೌನ್‌ ಗೆ ನನ್ನ ವಿರೋಧ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ - Mahanayaka

ವೀಕೆಂಡ್‌ ಕರ್ಫ್ಯೂ, ಲಾಕ್‌ ಡೌನ್‌ ಗೆ ನನ್ನ ವಿರೋಧ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

c t ravi
18/01/2022

ಬೆಳಗಾವಿ: ಮೂರನೇ ಅಲೆ ಬಗ್ಗೆ ಜನರು ಹೆಚ್ಚಿನ ಆತಂಕ ಪಡುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕು. ವೀಕೆಂಡ್‌ ಕರ್ಫ್ಯೂ, ಲಾಕ್‌ಡೌನ್‌ಗೆ ನನ್ನ ವಿರೋಧವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಗೋವಾದ ಪಣಜಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವೀಕೆಂಡ್‌ ಕರ್ಫ್ಯೂ, ಲಾಕ್‌ಡೌನ್‌ಗೆ ನನ್ನ ವಿರೋಧವಿದೆ. ಕರ್ನಾಟಕ ಅಷ್ಟೇ ಅಲ್ಲ ಮಹಾರಾಷ್ಟ್ರ, ದೆಹಲಿಯಲ್ಲಿ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿಯೂ ದಿನೇದಿನೇ ಕೋವಿಡ್ ಜಾಸ್ತಿಯಾಗ್ತಿದೆ. ಸುದೈವವಶಾತ್ ಮೂರನೇ ಅಲೆಯಲ್ಲಿ ಪ್ರಾಣಾಪಾಯ ಕಡಿಮೆ ಇದೆ ಎಂದರು.

ಐಸಿಯು ವೆಂಟಿಲೇಟರ್​‌ಗೆ ಹೋಗುವ ರೋಗಿಗಳ ಸಂಖ್ಯೆ ಕಡಿಮೆ ಇದೆ. ವೇಗವಾಗಿ ಹಬ್ಬುತ್ತಿದೆ ಆದರೆ ಯಾವುದೇ ಪ್ರಾಣಾಪಾಯ ಮಾಡಿಲ್ಲ. ಹೀಗಾಗಿ ಬಹಳ ಆತಂಕ ಪಡುವ ಅಗತ್ಯವಿಲ್ಲ, ಆದರೆ ಎಚ್ಚರದಿಂದ ಇರಬೇಕು ಎಂದು ಅವರು ಹೇಳಿದರು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮೋದಿ ಹೇಳಿದ್ದಕ್ಕೆ ನಾನು ಮಾಸ್ಕ್ ಧರಿಸಿಲ್ಲ: ಉಮೇಶ್ ಕತ್ತಿ

ಕೊಳ್ಳೇಗಾಲ ಶಾಸಕ ಎನ್.ಮಹೇಶ್​​ಗೆ ಕೊರೊನಾ ಧೃಡ

ರಜನಿ ಪುತ್ರಿ ಐಶ್ವರ್ಯಾ ಜೊತೆಗಿನ 18 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳಿದ ನಟ ಧನುಷ್

ಆರ್ ಟಿಐ ಕಾರ್ಯಕರ್ತನಿಂದ ಮಹಿಳೆಗೆ ಲೈಂಗಿಕ ಕಿರುಕುಳ

ಅಕಾಲಿಕ ಮುಪ್ಪು ರೋಗಕ್ಕೆ ಖ್ಯಾತ ಯೂಟ್ಯೂಬರ್ ಬಲಿ

 

ಇತ್ತೀಚಿನ ಸುದ್ದಿ