ಕಲರ್ ಫುಲ್ ಲೈಟಿಂಗ್ಸ್ ಮೂಲಕ ಲಂಡನ್ ನಲ್ಲಿ ರಂಝಾನ್ ಗೆ ಸ್ವಾಗತ

ಎಲ್ ಇಡಿ ಬಲ್ಬುಗಳ ಪ್ರಕಾಶದೊಂದಿಗೆ ರಮಝಾನನ್ನು ಲಂಡನ್ ನಗರ ಸ್ವಾಗತಿಸಿದೆ. 30,000 ಎಲ್ಇಡಿ ಬಲ್ಬುಗಳು ರಮಝಾನ್ ಉದ್ದಕ್ಕೂ ಲಂಡನ್ ನಗರವನ್ನು ಬೆಳಗಿಸಲಿದೆ. ನಿರಂತರ ಮೂರನೇ ವರ್ಷ ಲಂಡನ್ ನಗರವನ್ನು ಹೀಗೆ ಎಲ್ಇಡಿ ಬಲ್ಬುಗಳಿಂದ ಬೆಳಗಿಸಲಾಗುತ್ತಿದೆ.
ಲಂಡನ್ ಮೇಯರ್ ಸಾದಿಕ್ ಖಾನ್ ಅವರು ಈ ಬಲ್ಬ್ ಗಳ ಸ್ವಿಚ್ ಆನ್ ಮಾಡಿದರು. ನಿರಂತರ ಮೂರನೇ ವರ್ಷವೂ ಹೀಗೆ ರಮಝಾನ್ ನಲ್ಲಿ ಎಲ್ಇಡಿ ಬಲ್ಬುಗಳ ಸ್ವಿಚ್ ಆನ್ ಮಾಡುವ ಭಾಗ್ಯ ಲಭಿಸಿರುವುದಕ್ಕೆ ಸಾದಿಕ್ ಖಾನ್ ಹರ್ಷ ವ್ಯಕ್ತಪಡಿಸಿದರು.
ವೆಸ್ಟ್ ಎಂಡಿನ ಹೃದಯ ಭಾಗದಲ್ಲಿ ರಮಝಾನಿನಲ್ಲಿ ಬೆಳಗುವ ಈ ಬಲ್ಬುಗಳು ಕಣ್ಮಣ ಸೆಳೆಯುತ್ತವೆ. ಲಂಡನ್ ನಗರವು ವೈವಿಧ್ಯತೆಯನ್ನು ಒಪ್ಪಿಕೊಳ್ಳುತ್ತದೆ ಅನ್ನುವುದಕ್ಕೆ ಈ ಬಲ್ಬುಗಳ ಬೆಳಕು ಒಂದು ನಿದರ್ಶನ ಎಂದು ಸಾದಿಕ್ ಖಾನ್ ಹೇಳಿದ್ದಾರೆ.
ವೆಸ್ಟ್ ಎಂಡಿನ ಕವನ್ ಟ್ರಿ ಸ್ಟ್ರೀಟ್ ನಿಂದ ಲೆಸ್ಟರ್ ಸ್ಕ್ವಯರ್ ವರೆಗಿನ ಪ್ರದೇಶವನ್ನು ಈ ಬಲ್ಬುಗಳು ರಾತ್ರಿ ಕಾಲದಲ್ಲಿ ಬೆಳಗಿಸುತ್ತಿವೆ. ಮಾರ್ಚ್ 29 ರವರೆಗೆ ಸಂಜೆ 5 ರಿಂದ ಬೆಳಗ್ಗೆ 5 ವರೆಗೆ ಈ ಬಲ್ಬುಗಳು ಪ್ರಕಾಶವನ್ನು ಬೀರಲಿವೆ. ಮಾರ್ಚ್ 30ರಂದು ಎಲ್ಲರಿಗೂ ಈದ್ ನ ಶುಭಾಶಯಗಳನ್ನು ಕೋರಿ ಬಲ್ಬುಗಳ ಸ್ವಿಚ್ ಆಫ್ ಮಾಡಲಾಗುತ್ತದೆ.
2023ರಲ್ಲಿ ಈ ಎಲ್ಇಡಿ ಬೆಳಗಿಸುವ ಕ್ರಮ ಆರಂಭವಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj