ರಾತ್ರಿ 7ರ ನಂತರ ಕಲ್ಲಂಗಡಿ ಹಣ್ಣು ತಿನ್ನಬಾರದು; ಯಾಕೆ ಗೊತ್ತಾ?
ಕಲ್ಲಂಗಡಿ ಹಣ್ಣು ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಬಿರು ಬಿಸಿಲಿನ ಬೇಸಿಗೆಯಲ್ಲಂತೂ ಕಲ್ಲಂಗಡಿ ತಿನ್ನದವರಿಲ್ಲ. ಕಲ್ಲಂಗಡಿ ಹಣ್ಣಿನಿಂದ ಹಲವಾರು ಆರೋಗ್ಯದ ಪ್ರಯೋಜನಗಳಿವೆ. ಹೃದಯ, ಕಿಡ್ನಿ, ಹೀಟ್ ಸ್ಟ್ರೋಕ್, ಅಧಿಕ ರಕ್ತದೊತ್ತಡ ಎಲ್ಲದಕ್ಕೂ ಕಲ್ಲಂಗಡಿ ಹಣ್ಣು ಸೇವನೆ ಅತ್ಯುತ್ತಮವಾಗಿದೆ.
ಕಲ್ಲಂಗಡಿ ಹಣ್ಣಿನಲ್ಲಿ ಶೇ.94ರಷ್ಟು ನೀರಿನ ಅಂಶವಿದೆ. ಲೈಕೋಪೀನ್, ಪೊಟ್ಯಾಶಿಯಂ ಸೇರಿದಂತೆ ಹಲವು ಬಗೆಯ ಪೋಷಕಾಂಶಗಳು ಕೂಡ ಇವೆ. ಜೊತೆಗೆ ಇದರಲ್ಲಿರುವ ಫೈಬರ್ ಅಂಶ ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ.
ಯಾವುದೇ ವಸ್ತುಗಳು ನಮ್ಮ ಅವಶ್ಯಕತೆಗಿಂತ ಹೆಚ್ಚಾಗಿ ಸೇವಿಸುವುದು ಕೂಡ ಅಪಾಯಕಾರಿಯಾಗಿದೆ. ಜೊತೆಗೆ ಯಾವ ಹಣ್ಣನ್ನು ಯಾವ ಸಮಯದಲ್ಲಿ ಸೇವಿಸ ಬೇಕು, ಯಾವ ಸಮಯದಲ್ಲಿ ಸೇವಿಸಬಾರದು ಎಂಬ ಬಗ್ಗೆಯೂ ನಮಗೆ ತಿಳುವಳಿಕೆ ಇರಬೇಕಾಗುತ್ತದೆ.
ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ಉತ್ತಮವಾದದ್ದೇ ಆದರೂ, ಅದನ್ನು ಸಂಜೆ 7 ಗಂಟೆಯ ನಂತರ ತಿನ್ನ ಬಾರದು. ಯಾಕೆಂದರೆ, ರಾತ್ರಿಯ ವೇಳೆ ಈ ಹಣ್ಣನ್ನು ಸೇವಿಸುವುದರಿಂದಾಗಿ ನಮ್ಮ ಜೀರ್ಣಕ್ರಿಯೆ ನಿಧಾನವಾಗುತ್ತದೆ.
ಮಧ್ಯಾಹ್ನ 12ರಿಂದ 1ಗಂಟೆಯ ಸಮಯದಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದು ಉತ್ತಮವಾಗಿದೆ. ರಾತ್ರಿ ವೇಳೆ ಕಲ್ಲಂಗಡಿ ಹಣ್ಣು ಸೇವನೆಯಿಂದಾಗಿ ಜೀರ್ಣಕ್ರಿಯೆ ಸರಿಯಾಗಿ ಆಗದೇ ಇರಬಹುದು. ಇದರ ಜೊತೆಗೆ ನಿದ್ರಾ ಹೀನತೆ ಕೂಡ ಕಾಡಬಹುದು ಎಂದು ತಜ್ಞರು ಹೇಳುತ್ತಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka