ಸಮಯ ಮೀರಿ ಪಾರ್ಟಿ ಮಾಡಿದ ಕೇಸ್: ಪೊಲೀಸರ ಮುಂದೆ ನಟ ದರ್ಶನ್ ಹೇಳಿದ್ದೇನು?

darshan
12/01/2024

ಬೆಂಗಳೂರು: ಅವಧಿ ಮೀರಿ ಜೆಟ್ ಲಾಗ್ ಪಬ್ ನಲ್ಲಿ ಪಾರ್ಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಟ ದರ್ಶನ್ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.

ಇದೇ ವೇಳೆ ಕೇಸ್ ಬಗ್ಗೆ  ಏನು ಹೇಳ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ, ಏನೂ ಇಲ್ಲ, ಚಿಕ್ಕಣ್ಣನ ಸಿನಿಮಾ ರಿಲೀಸ್ ಆಗ್ತಿದೆ ನೋಡಿ ಎಂದು ಸ್ಮೈಲ್ ಮಾಡಿದರು.

ಪೊಲೀಸರ ಮುಂದೆ ದರ್ಶನ್ ಹೇಳಿದ್ದೇನು?

ಕಾಟೇರ ಸಕ್ಸಸ್ ಪಾರ್ಟಿ ಮಾಡಿದ್ದು ನಿಜ, ನಂತರ ಊಟ ಮಾಡಬೇಕಿತ್ತು. ಪಬ್ ನಲ್ಲಿ ಅಡುಗೆ ಮಾಡುವವರು ಇರಲಿಲ್ಲ, ಮಾಲಿಕರು ಊಟದ ವ್ಯವಸ್ಥೆ ಮಾಡ್ತೇವೆ ಅಂದಿದ್ರು, ಊಟ ಮಾಡಿಕೊಂಡು ಹೋಗೋಣ ಅಂತ ಇದ್ವಿ. 1 ಗಂಟೆಯ ನಂತರ ನಾವು ಪಾರ್ಟಿ ಮಾಡಿಲ್ಲ, ಊಟ ಮಾಡಿ ಹೊರಟಿದ್ದೇವೆ ಎಂದು ತಿಳಿಸಿದ್ದಾರೆನ್ನಲಾಗಿದೆ.

ಇತ್ತೀಚಿನ ಸುದ್ದಿ

Exit mobile version